‘ಪಾರು’ ಧಾರಾವಾಹಿಯ ನಟ ಶರತ್​ ಮೊದಲ ಚಿತ್ರಕ್ಕೆ ‘ಅನಿಮಾ’ ಶೀರ್ಷಿಕೆ; ಇದರ ಅರ್ಥವೇನು?

‘ಅನಿಮಾ’ ಚಿತ್ರದ ಪೋಸ್ಟರ್ ಗಮನ ಸೆಳೆಯುವಂತಿದೆ. ಕಾಡಿನ ಮಧ್ಯೆ ಕಾರೊಂದು ಚಲಿಸುತ್ತಿದೆ. ರಾತ್ರಿ ಆಗಿರುವುದರಿಂದ ಸುತ್ತಲೂ ಕತ್ತಲು. ಸಾಕಷ್ಟು ಸಸ್ಪೆನ್ಸ್​ ಆಗಿ ಪೋಸ್ಟರ್ ಮೂಡಿ ಬಂದಿದೆ. ‘ಅನಿಮಾ’ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.

‘ಪಾರು’ ಧಾರಾವಾಹಿಯ ನಟ ಶರತ್​ ಮೊದಲ ಚಿತ್ರಕ್ಕೆ ‘ಅನಿಮಾ’ ಶೀರ್ಷಿಕೆ; ಇದರ ಅರ್ಥವೇನು?
ಅನಿಮಾ
Follow us
ರಾಜೇಶ್ ದುಗ್ಗುಮನೆ
|

Updated on: Mar 28, 2024 | 9:59 AM

ಕಿರುತೆರೆಯಲ್ಲಿ ಫೇಮಸ್ ಆದ ಬಳಿಕ ಹಿರಿತೆರೆಗೆ ಬರೋದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಅನೇಕ ಕಿರುತೆರೆ ಕಲಾವಿದರು ಹಿರಿತೆರೆಗೆ ಬಂದು ಗೆಲುವು ಕಂಡಿದ್ದಾರೆ. ಈಗ ‘ಪಾರು’ ಧಾರಾವಾಹಿಯಲ್ಲಿ ಆದಿ ಹೆಸರಿನ ಪಾತ್ರ ಮಾಡಿದ್ದ ಶರತ್ ಪದ್ಮನಾಭ್ ಹೀರೋ ಆಗಿ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಶರತ್ ಅವರ ಮೊದಲ ಚಿತ್ರಕ್ಕೆ ‘ಅನಿಮಾ’ (Anima Movie) ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಟೈಟಲ್ ಪೋಸ್ಟರ್ ಗಮನ ಸೆಳೆದಿದೆ. ಈ ಸಿನಿಮಾದ ಶೀರ್ಷಿಕೆಯ ಅರ್ಥವನ್ನೂ ತಂಡ ತಿಳಿಸಿದೆ.

‘ಅನಿಮಾ’ ಚಿತ್ರದ ಪೋಸ್ಟರ್ ಗಮನ ಸೆಳೆಯುವಂತಿದೆ. ಕಾಡಿನ ಮಧ್ಯೆ ಕಾರೊಂದು ಚಲಿಸುತ್ತಿದೆ. ರಾತ್ರಿ ಆಗಿರುವುದರಿಂದ ಸುತ್ತಲೂ ಕತ್ತಲು. ಸಾಕಷ್ಟು ಸಸ್ಪೆನ್ಸ್​ ಆಗಿ ಪೋಸ್ಟರ್ ಮೂಡಿ ಬಂದಿದೆ. ‘ಅನಿಮಾ’ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ. ಶೀರ್ಷಿಕೆ ಅರ್ಥ ತಿಳಿದ ಬಳಿಕ ಫ್ಯಾನ್ಸ್ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

‘ಅನಿಮಾ’ ಚಿತ್ರಕ್ಕೆ ವರ್ಧನ್ ಎಂ.ಎಚ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶಕನಾಗಿ ಅವರಿಗೆ ಇದು ಮೊದಲ ಅನುಭವ. ಈ ಮೊದಲು ಅವರು ‘ಹೊನ್ನು ಬಿತ್ಯಾರು’ ಹೆಸರಿನ ಕಿರುಚಿತ್ರ ಮಾಡಿದ್ದರು. ಇದು ರೈತರ ಬಗ್ಗೆ ಇತ್ತು. ಈಗ ಅವರು ‘ಅನಿಮಾ’ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ ಪೋಸ್ಟರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅನಿಮಾ’ ಚಿತ್ರಕ್ಕೆ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಬೆಂಗಳೂರು, ಮಡಿಕೇರಿ, ಸಕಲೇಶಪುರ, ಹುಲಿಯೂರು ದುರ್ಗ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ: ‘ಮ್ಯಾಟ್ನಿ’ ಸಿನಿಮಾ ನಟಿ ರಚಿತಾಗೆ ದರ್ಶನ್​ ಕಡೆಯಿಂದ ಇಂಥ ಬೆಂಬಲ ಸಿಕ್ಕಿದ್ದು ಇದೇ ಮೊದಲು

ಶರತ್ ನಟನೆಯ ಈ ಚಿತ್ರಕ್ಕೆ ಅನುಷಾ ಕೃಷ್ಣ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ಸೂರಿ, ಸುಷ್ಮಿತಾ, ವಾಣಿ ಸೇರಿ ಅನೇಕರು ಪಾತ್ರವರ್ಗದಲ್ಲಿ ಇದ್ದಾರೆ. ಎನ್​.ಕೆ ರಾಜ್ ಛಾಯಾಗ್ರಹಣ, ರೋನಾದ ಬಕ್ಕೇಶ್ ಹಿನ್ನೆಲೆ ಸಂಗೀತ, ವಿರಾಜ್ ವಿಶ್ವ ಸಂಭಾಷಣೆ, ಉಜ್ವಲ್ ಚಂದ್ರ ಸಂಕಲನ ಅನಿಮಾನ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ