
ನಟಿ ಹಾಗೂ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ಆಗಿದ್ದು, ಆರು ತಿಂಗಳು ಜೈಲಿನಲ್ಲಿ ಇದ್ದು ಬಂದಿದ್ದಾರೆ. ಅವರು ಹೊರ ಬಂದ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಪವಿತ್ರಾ ಗೌಡ ಅವರು ದೇವಸ್ಥಾನಗಳನ್ನು ಸುತ್ತಿದ್ದಾರೆ. ಈಗ ಅವರು ಆಪ್ತರ ಬಗ್ಗೆ ಒಂದು ಸಂದೇಶವನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಗೆಳೆಯರ ಬಗ್ಗೆ ತಮ್ಮ ಆಲೋಚನೆ ಏನು ಎಂಬುದನ್ನು ವಿವರಿಸಿದ್ದಾರೆ. ‘ನಿಮ್ಮ ಸುತ್ತ ಯಾವ ಒಳ್ಳೆಯ ಸ್ನೇಹಿತರು ಇರೋದು ಎಷ್ಟು ಮುಖ್ಯ ಎಂಬುದನ್ನು ನಾನು ಅರಿತುಕೊಂಡೆ. ಅದು ನೀವು ಏನು ಎಂಬುದನ್ನು ನಿರ್ಧಾರ ಮಾಡುತ್ತದೆ. ನನಗೆ ಒಳ್ಳೆಯ ಫ್ರೆಂಡ್ಸ್ ಇದ್ದಾರೆ’ ಎಂದು ರಾಶಿ ಖನ್ನಾ ಹಂಚಿಕೊಂಡಿರುವ ವಿಡಿಯೋನ ಪವಿತ್ರಾ ಶೇರ್ ಮಾಡಿಕೊಂಡಿದ್ದಾರೆ.
‘ಒಳ್ಳೆಯದನ್ನು ಮಾಡುವ ಗೆಳೆಯರ ಜೊತೆ ಸದಾ ಇರಿ. ನಿಮ್ಮ ತಳ್ಳುವವರ ಜೊತೆ ಅಲ್ಲ. ನೀನು ನನ್ನನ್ನು ಭೇಟಿ ಮಾಡಿಯೇ ಇಲ್ಲ, ನೀನು ನನಗೆ ಸಮಯ ಕೊಡಲೇ ಇಲ್ಲ ಎಂದು ಹೇಳುವವರು ಗೆಳೆಯರಲ್ಲ. ಭೇಟಿ ಆಗದಿದ್ದರೂ ಪರವಾಗಿಲ್ಲ, ನಾನು ನಿನ್ನ ಪರವಾಗಿ ನಿಲ್ಲುತ್ತೇನೆ ಎನ್ನುವವರು ಸ್ನೇಹಿತರು’ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಪವಿತ್ರಾ ಗೌಡ ಜೈಲಿನಲ್ಲಿ ಇದ್ದಾಗ ಹೆಚ್ಚಿನವರು ನೋಡಲು ಬರಲಿಲ್ಲ. ಆದರೆ, ಅವರ ಜೊತೆ ಈಗಲೂ ಪವಿತ್ರಾ ಒಳ್ಳೆಯ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಈ ವಿಡಿಯೋ ಹಂಚಿಕೊಂಡರೋ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಗೌಡ ‘ಪವಿತ್ರ ಸ್ನಾನ’, ಋಣಾತ್ಮಕತೆಯಿಂದ ದೂರ ಎಂದ ಚೆಲುವೆ
ಪವಿತ್ರಾ ಗೌಡ ಅವರು ಜೈಲಿನಿಂದ ಮರಳಿದ ಬಳಿಕ ಪವಿತ್ರಾ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ 777 ಬ್ಯೂಟಿಕ್ ರೀ ಲಾಂಚ್ ಮಾಡಿದ್ದಾರೆ. ಈ ಮೂಲಕ ಉದ್ಯಮಕ್ಕೆ ಮರಳಿದ್ದಾರೆ. ಅವರು ಮತ್ತೆ ದರ್ಶನ್ನ ಭೇಟಿ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.