ಹೆಚ್ಚಿತು ಪವನ್ ಕಲ್ಯಾಣ್ ಸಾಲ; ಒಟ್ಟಾರೆ ಆಸ್ತಿ ಎಷ್ಟು? ಅಫಿಡವಿಟ್​ನಲ್ಲಿ ಮಾಹಿತಿ ನೀಡಿದ ನಟ

|

Updated on: Apr 24, 2024 | 10:59 AM

Pawan Kalyan Net Worth: ಕಾಕಿನಾಡು ಜಿಲ್ಲೆಯ ಪೀಟಾಪುರಮ್ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಚರಾಸ್ಥಿ ಹಾಗೂ ಸ್ಥಿರಾಸ್ತಿ ಮೊತ್ತ 136 ಕೋಟಿ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. 2019ರಲ್ಲಿ ಅವರ ಆಸ್ತಿ 52.85 ಕೋಟಿ ರೂಪಾಯಿ ಇತ್ತು. ಈಗ ಅದು ದ್ವಿಗುಣವಾಗಿದೆ. ಅದೇ ರೀತಿ ಸಾಲದಲ್ಲೂ ಏರಿಕೆ ಆಗಿದೆ.

ಹೆಚ್ಚಿತು ಪವನ್ ಕಲ್ಯಾಣ್ ಸಾಲ; ಒಟ್ಟಾರೆ ಆಸ್ತಿ ಎಷ್ಟು? ಅಫಿಡವಿಟ್​ನಲ್ಲಿ ಮಾಹಿತಿ ನೀಡಿದ ನಟ
ಪವನ್ ಕಲ್ಯಾಣ್
Follow us on

ನಟ ಪವನ್​ ಕಲ್ಯಾಣ್ (Pawan Kalyan) ಅವರು ಸದ್ಯ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ನಾಮಿನೇಷನ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಅವರು ಆಸ್ತಿ ವಿವರ ನೀಡಿದ್ದಾರೆ. 2019ರಿಂದ 2024ರವರೆಗೆ ಅವರ ಸಾಲದಲ್ಲಿ ಏರಿಕೆ ಆಗಿದೆ. ಒಟ್ಟಾರೆ ಆಸ್ತಿ, ತಮ್ಮ ಬಳಿ ಇರುವ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಕುರಿತು ಪವನ್​ ಕಲ್ಯಾಣ್ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕಾಕಿನಾಡು ಜಿಲ್ಲೆಯ ಪೀಟಾಪುರಮ್ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಚರಾಸ್ಥಿ ಹಾಗೂ ಸ್ಥಿರಾಸ್ತಿ ಮೊತ್ತ 136 ಕೋಟಿ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. 2019ರಲ್ಲಿ ಅವರ ಆಸ್ತಿ 52.85 ಕೋಟಿ ರೂಪಾಯಿ ಇತ್ತು. ಈಗ ಅದು ದ್ವಿಗುಣವಾಗಿದೆ. ಅದೇ ರೀತಿ ಸಾಲದಲ್ಲೂ ಏರಿಕೆ ಆಗಿದೆ. ಸಿನಿಮಾಗೆ ಪಡೆದ ಅಡ್ವಾನ್ಸ್ ಹಾಗೂ ಸಾಲದ ಮೊತ್ತ ಸೇರಿ 65.76 ಕೋಟಿ ರೂಪಾಯಿ ಇದೆ. ಇದರಲ್ಲಿ ಸಾಲದ ಮೊತ್ತ 17.56 ಕೋಟಿ ರೂಪಾಯಿ ಇದೆ.

ರಾಜಕೀಯಕ್ಕೆ ಬರುವ ಮೊದಲು ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇರಲಿಲ್ಲ. ಈಗ ಅವರ ವಿರುದ್ಧ 8 ಪ್ರಕರಣಗಳು ಇವೆ. 18 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ, 52. 85 ಕೋಟಿ ರೂಪಾಯಿ ಬೆಲೆಯ ಕೃಷಿಯೇತರ ಭೂಮಿ, 31 ಕೋಟಿ ರೂಪಾಯಿ ಮೌಲ್ಯದ ರೆಸಿಡೆನ್ಶಿಯಲ್ ಬಿಲ್ಡಿಂಗ್ ಅವರ ಹೆಸರಲ್ಲಿದೆ. ಅವರ ಪತ್ನಿ ಕೊನಿಡೆಲಾ ಅನ್ನಾ ಅವರ ಆಸ್ತಿ 2.95 ಕೋಟಿ ರೂಪಾಯಿ ಇದೆ.

ಇದನ್ನೂ ಓದಿ: ‘ಉಸ್ತಾದ್ ಭಗತ್ ಸಿಂಗ್’ ಟೀಸರ್ ಬಿಡುಗಡೆ: ಮಾಸ್​ಗೆ ಮಾಸ್ ಪವನ್​ ಕಲ್ಯಾಣ್

2018-19ರಿಂದ ಆರಂಭ ಆಗಿ 2022-23ರವರೆಗೆ ಅವರ ಆದಾಯ 60.77 ಕೋಟಿ ರೂಪಾಯಿ ಇದೆ. ಬ್ಯಾಂಕ್​ನಲ್ಲಿ 16.48 ಕೋಟಿ ರೂಪಾಯಿ ಇದೆ. ಅವರ ಪತ್ನಿ ಖಾತೆಯಲ್ಲಿ 86 ಲಕ್ಷ ರೂಪಾಯಿ ಇದೆ. ಪವನ್ ಕಲ್ಯಾಣ್ ಅವರು 2019ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ, ಅವರಿಗೆ ಗೆಲುವು ಸಿಗಲಿಲ್ಲ. ಆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಈಗ ಪವನ್ ಮತ್ತೆ ರಾಜಕೀಯದತ್ತ ಒಲವು ತೋರಿದ್ದಾರೆ. ಹೀಗಾಗಿ, ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:59 am, Wed, 24 April 24