Sirivennela Seetharama Sastry: ಪದ್ಮಶ್ರೀ ಪುರಸ್ಕೃತ ಸಾಹಿತಿ, ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಇನ್ನಿಲ್ಲ

Sirivennela Seetharama Sastry passes away: ತೆಲುಗಿನ ಖ್ಯಾತ ಗೀತ ರಚನೆಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

Sirivennela Seetharama Sastry: ಪದ್ಮಶ್ರೀ ಪುರಸ್ಕೃತ ಸಾಹಿತಿ, ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಇನ್ನಿಲ್ಲ
ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ (ಸಂಗ್ರಹ ಚಿತ್ರ)
Edited By:

Updated on: Nov 30, 2021 | 5:40 PM

ತೆಲುಗಿನ ಖ್ಯಾತ ಸಾಹಿತಿ, ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಗೀತರಚನೆಕಾರರಾಗಿ ಜನಮನ್ನಣೆ ಗಳಿಸಿದ್ದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳಿಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸುಮಾರು 3,000ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ಬರೆದಿರುವ ಸೀತಾರಾಮ ಶಾಸ್ತ್ರಿಗಳಿಗೆ 12 ಬಾರಿ ನಂದಿ ಪ್ರಶಸ್ತಿ, 4 ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ. 

ಅವರ ಚೊಚ್ಚಲ ಚಿತ್ರ ಕೆ ವಿಶ್ವನಾಥ್ ಅವರ ‘ಸಿರಿವೆನ್ನೆಲಾ’ವನ್ನು ಕ್ಲಾಸಿಕ್ ಚಿತ್ರವಾಗಿ ಗುರುತಿಸಲಾಗುತ್ತದೆ. ‘ಸ್ವಯಂ ಕೃಷಿ’, ಸ್ವರ್ಣ ಕಮಲಂ, ಶ್ರುತಿಲಯಲು, ಶಿವ, ಕ್ಷಣ ಕ್ಷಣಂ, ಸ್ವಾತಿ ಕಿರಣಂ, ಹಣ, ಗೋವಿಂದ ಗೋವಿಂದ, ಅಪರಾಧಿ, ಗುಲಾಬಿ, ಮುರಾರಿ, ಮತ್ತು ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸೇರಿದಂತೆ ಹಲವು ಖ್ಯಾತ ಚಿತ್ರದ ಗೀತೆಗಳಿಗೆ ಅವರು ಸಾಹಿತ್ಯ ಬರೆದಿದ್ದಾರೆ. ತೆಲುಗಿನ ಖ್ಯಾತ ಗೀತ ರಚನೆಕಾರರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗಿದೆ.

‘ಅಲಾ ವೈಕುಂಠಪುರಮುಲೋ’ ಚಿತ್ರದ  ‘ಸಾಮಜ ವರಗಮನ’ ಹಾಡು ಅವರಿಗೆ ಇತ್ತೀಚೆಗೆ ಬಹುದೊಡ್ಡ ಹಿಟ್ ನೀಡಿದ್ದ ಗೀತೆಯಾಗಿತ್ತು. ಆರ್​ಆರ್​ಆರ್​ ಚಿತ್ರದ ‘ದೋಸ್ತಿ’ ಹಾಡು ಕೂಡ ಭರ್ಜರಿ ಜನಮನ್ನಣೆ ಗಳಿಸಿತ್ತು.

ಇದನ್ನೂ ಓದಿ:

‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​

ಡಿಸೆಂಬರ್​ ಪೂರ್ತಿ ಮನರಂಜನೆಯ​ ಸುಗ್ಗಿ; ಪ್ರತಿ ವಾರವೂ ಬಿಗ್​ ರಿಲೀಸ್​: ಇಲ್ಲಿದೆ ಪೂರ್ತಿ ಲಿಸ್ಟ್​

Published On - 5:39 pm, Tue, 30 November 21