ಕಮಲ್ ಹಾಸನ್ ಈಗ ಎಲ್ಲಿದ್ದಾರೆ?; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾದ ವೈರಲ್ ಫೋಟೋದ ಅಸಲಿಯತ್ತೇನು?

Kamal Hassan: ನಟ ಕಮಲ್ ಹಾಸನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಆ ಫೋಟೋದ ಅಸಲಿಯತ್ತೇನು? ಇಲ್ಲಿದೆ ಮಾಹಿತಿ.

ಕಮಲ್ ಹಾಸನ್ ಈಗ ಎಲ್ಲಿದ್ದಾರೆ?; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾದ ವೈರಲ್ ಫೋಟೋದ ಅಸಲಿಯತ್ತೇನು?
ವೈರಲ್ ಆಗಿರುವ ಚಿತ್ರ

ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿರುವ ಫೋಟೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅದನ್ನು ನೋಡಿದ ಅಭಿಮಾನಿಗಳು ಕೊನೆಗೂ ಕಮಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವವಾಗಿ ಆ ಚಿತ್ರ ಹಳೆಯ ಚಿತ್ರವಾಗಿದ್ದು, ಕಮಲ್ ಇನ್ನೂ ಆಸ್ಫತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಳೆಯ ಚಿತ್ರ ವೈರಲ್ ಆಗುತ್ತಿರುವ ಕುರಿತಂತೆ ಅವರ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ಸ್ಪಷ್ಟನೆ ನೀಡಿದೆ. ಎಂಎನ್‌ಎಂ ವಕ್ತಾರ ಮುರಳಿ ಅಬ್ಬಾಸ್ ಹೇಳಿಕೆ ನೀಡಿದ್ದು, ಕಮಲ್ ಹಾಸನ್ ಇನ್ನೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಆದರೆ, ಅವರು ಚೆನ್ನಾಗಿಯೇ ಇದ್ದಾರೆ. ಅವರು ಸಂಪೂರ್ಣ ಗುಣಮುಖರಾಗಿ ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ನುಡಿದಿದ್ದಾರೆ. ಅಲ್ಲದೇ ವೈರಲ್ ಆಗಿರುವ ಚಿತ್ರದ ಕುರಿತು ಅವರು ಸ್ಪಷ್ಟನೆ ನೀಡಿದ್ದು, ಅದರ ಹಿನ್ನೆಲೆಯನ್ನು ಹಂಚಿಕೊಂಡಿದ್ದಾರೆ. “ಎರಡು ವರ್ಷಗಳ ಹಿಂದೆ ಅಪೋಲೋ ಆಸ್ಪತ್ರೆಯಲ್ಲಿ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮನೆಗೆ ಹಿಂದಿರುಗಿದ ಸಮಯದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ” ಎಂದು ಮುರಳಿ ಹೇಳಿದ್ದಾರೆ.

ಸ್ಪಷ್ಟನೆಯ ಮುಖಾಂತರ ಪಕ್ಷು ಕಮಲ್ ಡಿಸ್ಚಾರ್ಜ್ ಕುರಿತ ವದಂತಿಗೆ ತೆರೆ ಎಳೆದಿದೆ.  ಎಂಎನ್‌ಎಂ ಅಧ್ಯಕ್ಷ ಮತ್ತು ನಟ ಕಮಲ್ ಹಾಸನ್ ಅವರು ನಾಲ್ಕು ದಿನಗಳ ಹಿಂದೆ ಕರೋನ ವೈರಸ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಖಾದಿ ಬ್ರಾಂಡ್ ‘ಹೌಸ್ ಆಫ್ ಖದ್ದರ್’ ಬಿಡುಗಡೆಗಾಗಿ ಯುಎಸ್‌ನಲ್ಲಿದ್ದ ಕಮಲ್ ಅವರು ಭಾರತಕ್ಕೆ ಮರಳಿದ ನಂತರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಿಗೆ ಪಾಸಿಟಿವ್ ವರದಿ ಬಂದಿತ್ತು.

ಕೊರೊನಾ ಪಾಸಿಟಿವ್ ಆಗಿದ್ದರ ಕುರಿತು ಕಮಲ್ ಸ್ವತಃ ಮಾಹಿತಿ ಹಂಚಿಕೊಂಡಿದ್ದರು. ಸದ್ಯ ಅವರು ಚೆನ್ನೈನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ, ನವೆಂಬರ್ 26 ರಂದು ನೀಡಿದ್ದ ಹೇಳಿಕೆಯಲ್ಲಿ, ಕಮಲ್ ಆರೋಗ್ಯ ಸ್ಥಿರವಾಗಿದೆ ಎಂದು ಎಂಎನ್‌ಎಂ ಉಪಾಧ್ಯಕ್ಷ ಎಜಿ ಮೌರ್ಯ ಹೇಳಿದ್ದರು. ಈ ಹಿಂದೆ, ಯುಎಸ್‌ನಿಂದ ಹಿಂದಿರುಗಿದ ನಂತರ ಸಣ್ಣ ಪ್ರಮಾಣದಲ್ಲೊ ಕೆಮ್ಮು ಇತ್ತು ಎಂದು ಕಮಲ್ ಹೇಳಿದ್ದರು. “ನಾನು ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿದ್ದೇನೆ. COVID-19 ಹರಡುವಿಕೆ ಮರೆಯಾಗಿಲ್ಲ ಎಂದು ಎಲ್ಲರೂ ಅರಿತುಕೊಳ್ಳಬೇಕು” ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಚಿತ್ರಗಳ ವಿಚಾರಕ್ಕೆ ಬಂದರೆ, ಕಮಲ್ ಹಾಸನ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಆಕ್ಷನ್ ಚಿತ್ರ ‘ವಿಕ್ರಮ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್, ಲುಕ್​ಗಳು ಎಲ್ಲರ ಮನಗೆದ್ದಿವೆ. ಇದಲ್ಲದೇ ಕಮಲ್, ‘ಇಂಡಿಯನ್ 2’ ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:

Rajinikanth: ನೆಟ್​​ಫ್ಲಿಕ್ಸ್​​ನಲ್ಲೂ ರಜಿನಿ ಹವಾ; ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ತಲೈವಾ!

Sirivennela Seetharama Sastry: ಪದ್ಮಶ್ರೀ ಪುರಸ್ಕೃತ ಸಾಹಿತಿ, ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಇನ್ನಿಲ್ಲ

Click on your DTH Provider to Add TV9 Kannada