‘ಚೋಳರ ಸಾಮ್ರಾಜ್ಯ ನಾಶ ಮಾಡುತ್ತೇವೆ’; ಗಮನ ಸೆಳೆದ ‘ಪೊನ್ನಿಯಿನ್ ಸೆಲ್ವನ್​ 2’ ಟ್ರೇಲರ್

‘Ponniyin Selvan 2’ Trailer: ‘ಪೊನ್ನಿಯಿನ್ ಸೆಲ್ವನ್​’ ಸಿನಿಮಾ ಅದ್ದೂರಿ ಮೇಕಿಂಗ್​ನಿಂದ ಗಮನ ಸೆಳೆದಿತ್ತು. ಚಿತ್ರಕ್ಕಾಗಿ ಹಾಕಿದ ಸೆಟ್​ಗಳು ಕಣ್ಮನ ಸೆಳೆದಿದ್ದವು. ಸೀಕ್ವೆಲ್​​ನಲ್ಲೂ ಈ ಅದ್ದೂರಿತನ ಮುಂದುವರಿದಿದೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್​’ (Ponniyin Selvan) ಸಿನಿಮಾ ಗಮನ ಸೆಳೆದಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗಿದೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧಗೊಂಡಿದೆ. ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಏಪ್ರಿಲ್ 28ರಂದು ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಐಶ್ವರ್ಯಾ ರೈ (Aishwarya Rai), ವಿಕ್ರಮ್, ಕಾರ್ತಿ, ತ್ರಿಶಾ ಎಂದಿನಂತೆ ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.

ಪೊನ್ನಿಯಿನ್ ಸೆಲ್ವನ್ ಅವರ ಸಾವಿನ ನಂತರ ಹೊಸ ರಾಜನ ಹೆಸರು ಘೋಷಿಸಲಾಗುತ್ತದೆ. ಅಲ್ಲಿಂದ ಕಿತ್ತಾಟ ಶುರುವಾಗುತ್ತದೆ. ಚೋಳರ ಸಾಮ್ರಾಜ್ಯವನ್ನು ನಾವು ನಾಶ ಮಾಡುತ್ತೇವೆ ಎಂದು ನಂದಿನಿ (ಐಶ್ವರ್ಯಾ ರೈ) ಶಪಥ ಮಾಡುತ್ತಾಳೆ. ಟ್ರೇಲರ್​ನ ಕೊನೆಯಲ್ಲಿ ಕರಿಕಾಲನ್ (ವಿಕ್ರಮ್​) ಎದೆಗೆ ನಂದಿನಿ ಖಡ್ಗ ಚುಚ್ಚುತ್ತಾಳೆ. ಈ ಕುತೂಹಲದೊಂದಿಗೆ ಟ್ರೇಲರ್ ಕೊನೆಗೊಂಡಿದೆ.

‘ಪೊನ್ನಿಯಿನ್ ಸೆಲ್ವನ್​’ ಸಿನಿಮಾ ಅದ್ದೂರಿ ಮೇಕಿಂಗ್​ನಿಂದ ಗಮನ ಸೆಳೆದಿತ್ತು. ಚಿತ್ರಕ್ಕಾಗಿ ಹಾಕಿದ ಸೆಟ್​ಗಳು ಕಣ್ಮನ ಸೆಳೆದಿದ್ದವು. ಸೀಕ್ವೆಲ್​​ನಲ್ಲೂ ಈ ಅದ್ದೂರಿತನ ಮುಂದುವರಿಯುವ ಸೂಚನೆ ಸಿಕ್ಕಿದೆ. ಮೊದಲ ಭಾಗ ವಿಶ್ವಾದ್ಯಂತ 480 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇದನ್ನೂ ಓದಿ: ‘ಸಿನಿಮಾ ರಿಲೀಸ್ ಮಾಡಿದ್ರೆ ದಾಳಿ ಮಾಡ್ತೀವಿ’; ‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆ ಮಾಡಲು ಮುಂದಾದವರಿಗೆ ಬೆದರಿಕೆ

ಟ್ರೇಲರ್ ಲಾಂಚ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದೆ. ಐಶ್ವರ್ಯಾ ರೈ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಐಶ್ವರ್ಯಾ ರೈ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ‘ನೀವು ನಮಗೆ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಿದ್ದೀರಿ. ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಪೊನ್ನಿಯಿನ್ ಸೆಲ್ವನ್ ಸೀಕ್ವೆಲ್​ಗಾಗಿ ನಾವು ಕಾದಿದ್ದೇವೆ’ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.

ಇದನ್ನೂ ಓದಿ:ಪೊನ್ನಿಯಿನ್ ಸೆಲ್ವನ್ ಸಕ್ಸಸ್ ಮೀಟ್​ಗೆ ಹಾಜರಾದ ಐಶ್ವರ್ಯಾ ರೈ 

ಚಿತ್ರದ ಅವಧಿ ಬಗ್ಗೆ ಕಾಡಿದೆ ಚಿಂತೆ

ಈಗಾಗಲೇ ಸಿನಿಮಾಗೆ ಪ್ರಮೋಷನ್ ಶುರುವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಮಣಿರತ್ನಂ ಆ್ಯಂಡ್ ಟೀಂ ದೇಶದ ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡಲಿದೆ. ಇದಕ್ಕೂ ಮೊದಲು ಸಿನಿಮಾ ಅವಧಿ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ಚಿತ್ರದ ಅವಧಿ ಸದ್ಯ 4 ಗಂಟೆ ಇದೆಯಂತೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಕತ್ತರಿ ಹಾಕಲು ಅವಕಾಶ ನಿರ್ದೇಶಕರಿಗೆ ಇದೆ. ಹೀಗಾಗಿ, ಸಿನಿಮಾದ ಅವಧಿ 3 ಗಂಟೆ 53 ನಿಮಿಷ ಆಗಿರಲಿದೆ. ಇದು ಪ್ರೇಕ್ಷಕರ ಚಿಂತೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:17 am, Thu, 30 March 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us