‘ಸಿನಿಮಾ ರಿಲೀಸ್ ಮಾಡಿದ್ರೆ ದಾಳಿ ಮಾಡ್ತೀವಿ’; ‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆ ಮಾಡಲು ಮುಂದಾದವರಿಗೆ ಬೆದರಿಕೆ

ವಿದೇಶದಲ್ಲಿ ಈ ಸಿನಿಮಾದ ಹಂಚಿಕೆಯನ್ನು ಕೆಡಬ್ಲ್ಯೂ ಟಾಕೀಸ್ ವಹಿಸಿಕೊಂಡಿದೆ. ಇದರ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.

‘ಸಿನಿಮಾ ರಿಲೀಸ್ ಮಾಡಿದ್ರೆ ದಾಳಿ ಮಾಡ್ತೀವಿ’; ‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆ ಮಾಡಲು ಮುಂದಾದವರಿಗೆ ಬೆದರಿಕೆ
ಪೊನ್ನಿಯಿನ್ ಸೆಲ್ವನ್ ಪೋಸ್ಟರ್​
TV9kannada Web Team

| Edited By: Rajesh Duggumane

Sep 28, 2022 | 6:30 PM

ತಮಿಳಿನ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ (Ponniyin Selvan ) ರಿಲೀಸ್​ಗೆ ರೆಡಿ ಇದೆ. ಸೆಪ್ಟೆಂಬರ್ 30ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು ಮೊದಲಾದ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗ ಪೊನ್ನಿಯಿನ್ ಸೆಲ್ವನ್’ಗೆ ರಿಲೀಸ್ ಸಂದರ್ಭದಲ್ಲಿ ಸಂಕಷ್ಟ ಒಂದು ಎದುರಾಗಿದೆ. ಸಿನಿಮಾ ರಿಲೀಸ್ ಮಾಡಿದರೆ ನಾವು ದಾಳಿ ಮಾಡುತ್ತೇವೆ ಎಂಬ ಎಚ್ಚರಿಕೆ ಸಂದೇಶ ಹರಿದಾಡಿದೆ. ಚಿತ್ರ ಬಿಡುಗಡೆ​ಗೂ ಕೆಲವೇ ದಿನ ಮೊದಲು ಈ ರೀತಿ ಆಗಿರುವುದರಿಂದ ಇಡೀ ತಂಡ ಚಿಂತೆಗೆ ಒಳಗಾಗಿದೆ.

ಕೆನಡಾದಲ್ಲಿ ಈ ಘಟನೆ ನಡೆದಿದೆ. ಈ ಮೊದಲಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳು ಕೆನಡಾದಲ್ಲಿ ರಿಲೀಸ್ ಆಗುತ್ತವೆ ಎಂದರೆ ಸಾಕಷ್ಟು ಬೆದರಿಕೆ ಎದುರಿಸುತ್ತವೆ. ಈ ಬಾರಿಯೂ ಅದೇ ರೀತಿ ಆಗಿದೆ. ಹ್ಯಾಮಿಲ್ಟನ್, ಲಂಡನ್ ಮೊದಲಾದ ಕಡೆಗಳಲ್ಲಿ ಚಿತ್ರಮಂದಿರದ ಮಾಲೀಕರಿಗೆ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಮಾಡದಂತೆ ಬೆದರಿಕೆ ಹಾಕಲಾಗಿದೆ.

ವಿದೇಶದಲ್ಲಿ ಈ ಸಿನಿಮಾದ ಹಂಚಿಕೆಯನ್ನು ಕೆಡಬ್ಲ್ಯೂ ಟಾಕೀಸ್ ವಹಿಸಿಕೊಂಡಿದೆ. ಇದರ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ‘ಹ್ಯಾಮಿಲ್ಟನ್, ಲಂಡನ್ ಮೊದಲಾದ ಭಾಗಗಳ ಚಿತ್ರಮಂದಿರದ ಮಾಲೀಕರಿಂದ ನಮಗೆ ಅಪ್​ಡೇಟ್ ಒಂದು ಸಿಕ್ಕಿದೆ. ಇವರಿಗೆ ಬೆದರಿಕೆ ಇ-ಮೇಲ್ ಬಂದಿದೆ. ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಮಾಡಿದರೆ ದಾಳಿ ಮಾಡುವ ಬೆದರಿಕೆ ಹಾಕಲಾಗಿದೆ’ ಎಂದು ಕೆಡಬ್ಲ್ಯೂ ಟಾಕೀಸ್ ಟ್ವೀಟ್ ಮಾಡಿದೆ.

ದಕ್ಷಿಣ ಭಾರತದ ಸಿನಿಮಾಗಳು ಕೆನಡಾದಲ್ಲಿ ರಿಲೀಸ್ ಆಗುವಾಗ ಬೆದರಿಕೆ ಎದುರಿಸಿದ್ದು ಇದೇ ಮೊದಲೇನು ಅಲ್ಲ. ದುಲ್ಕರ್ ಸಲ್ಮಾನ್ ನಟನೆಯ ‘ಕುರುಪ್​’ ಚಿತ್ರ ನವೆಂಬರ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಕೆನಡಾದಲ್ಲಿ ರಿಲೀಸ್ ಆದಾಗ ಕೆಲವು ಭಾಗದಲ್ಲಿ ಥಿಯೇಟರ್​ಗೆ ಹಾನಿ ಮಾಡಲಾಗಿತ್ತು.

ಇದನ್ನೂ ಓದಿ: 125 ಕೋಟಿ ರೂಪಾಯಿಗೆ ‘ಪೊನ್ನಿಯಿನ್​ ಸೆಲ್ವನ್​’ ಒಟಿಟಿ ಹಕ್ಕು ಮಾರಾಟ; ಮಣಿರತ್ನಂ ಚಿತ್ರಕ್ಕೆ ಭಾರಿ ಬಿಸ್ನೆಸ್​

ಇದನ್ನೂ ಓದಿ

‘ಪೊನ್ನಿಯಿನ್​ ಸೆಲ್ವನ್’​ ಚಿತ್ರದಲ್ಲಿ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಚಿಯಾನ್​ ವಿಕ್ರಮ್​, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್​ ರಾಜ್​ ಮುಂತಾದವರು ಅಭಿನಯಿಸಿದ್ದಾರೆ. ಎ.ಆರ್​. ರೆಹಮಾನ್​ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೊದಲು ರಿಲೀಸ್ ಆಗಿದ್ದ ಟ್ರೇಲರ್ ನಿರೀಕ್ಷೆ ಮೂಡಿಸಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ಶೂಟಿಂಗ್​ ಮಾಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada