Ponniyin Selvan: ಮಣಿರತ್ನಂ ಸಿನಿಮಾ ಜತೆ ಕೈ ಜೋಡಿಸಿದ ಪಿ.ವಿ. ಸಿಂಧು; ಕನ್ನಡದಲ್ಲೂ ಕಾದಿದೆ ಸರ್ಪ್ರೈಸ್​

Ponniyin Selvan First Single: ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು, ಕ್ರಿಕೆಟರ್​ಗಳಾದ ರವಿಚಂದ್ರನ್​ ಅಶ್ವಿನ್​ ಮತ್ತು ಸಂಜು ಸ್ಯಾಮ್ಸನ್​ ಅವರು ‘ಪೊನ್ನಿಯಿನ್​ ಸೆಲ್ವನ್​’ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.

Ponniyin Selvan: ಮಣಿರತ್ನಂ ಸಿನಿಮಾ ಜತೆ ಕೈ ಜೋಡಿಸಿದ ಪಿ.ವಿ. ಸಿಂಧು; ಕನ್ನಡದಲ್ಲೂ ಕಾದಿದೆ ಸರ್ಪ್ರೈಸ್​
ಪೊನ್ನಿಯಿನ್ ಸೆಲ್ವನ್
Edited By:

Updated on: Jul 31, 2022 | 11:51 AM

ಸಿನಿಮಾ ಲೋಕದ ತಾರೆಯರಿಗೂ, ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳಿಗೂ ಒಂದು ನಂಟು ಇದೆ. ಸಿನಿಮಾಗಳ ಪ್ರಚಾರದ ವೇಳೆ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಈಗ ‘ಪೊನ್ನಿಯಿನ್​ ಸೆಲ್ವನ್​’ (Ponniyin Selvan) ಸಿನಿಮಾದ ಪ್ರಮೋಷನ್​ನಲ್ಲಿ ಸ್ಪೋರ್ಟ್ಸ್​ ಲೋಕದ ಸಾಧಕರು ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಸಖತ್​ ನಿರೀಕ್ಷೆ ಇದೆ. ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರ ಸಿನಿಮಾ ಎಂಬ ಕಾರಣಕ್ಕೆ ಹೈಪ್​ ಹೆಚ್ಚಿದೆ. ಅಷ್ಟೇ ಅಲ್ಲದೇ, ಅನೇಕ ಘಟಾನುಘಟಿ ಕಲಾವಿದರು ನಟಿಸಿರುವುದರಿಂದ ಕುತೂಹಲ ಮೂಡಿದೆ. ಈಗ ಈ ಚಿತ್ರತಂಡಕ್ಕೆ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ. ಸಿಂಧು (PV Sindhu), ಕ್ರಿಕೆಟರ್​ ಸಂಜು ಸ್ಯಾಮ್ಸನ್​, ರವಿಚಂದ್ರನ್​ ಅಶ್ವಿನ್​ ಮುಂತಾದವರು ಸಾಥ್​ ನೀಡುತ್ತಿದ್ದಾರೆ. ಈ ಚಿತ್ರದ ಹಾಡು ರಿಲೀಸ್​ ಮಾಡಲು ಇವರೆಲ್ಲರೂ ಮುಂದೆ ಬಂದಿದ್ದಾರೆ. ಇಂದು (ಜುಲೈ 31) ಚೆನ್ನೈನಲ್ಲಿ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.

‘ಪೊನ್ನಿಯಿನ್​ ಸೆಲ್ವನ್​’ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿರುವ ಈ ಚಿತ್ರ ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ. ಚೆನ್ನೈನಲ್ಲಿ ಅದ್ದೂರಿಯಾಗಿ ಆಡಿಯೋ ರಿಲೀಸ್​ ಆಗಲಿದೆ. ಮೊದಲ ಸಾಂಗ್​ ‘ಪೊನ್ನಿ ನದಿ..’ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ತೆಲುಗು ಅವತರಣಿಕೆಯ ಹಾಡನ್ನು ಬ್ಯಾಡ್ಮಿಂಟನ್​​ ಆಟಗಾರ್ತಿ ಪಿ.ವಿ. ಸಿಂಧು ರಿಲೀಸ್​ ಮಾಡಲಿದ್ದಾರೆ.

ಇದನ್ನೂ ಓದಿ
Mani Ratnam: ನಿರ್ದೇಶಕ ಮಣಿರತ್ನಂಗೆ ಕೊರೊನಾ ಪಾಸಿಟಿವ್​; ಖಾಸಗಿ ಆಸ್ಪತ್ರೆಗೆ ದಾಖಲು
‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಟೀಸರ್ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ; ಗಮನ ಸೆಳೆದ ಐಶ್ವರ್ಯಾ, ವಿಕ್ರಮ್
Ponniyin Selvan: ‘ನಮ್ಮ ರಾಣಿ ಮತ್ತೆ ಬಂದರು’: ಐಶ್ವರ್ಯಾ ರೈ ಗೆಟಪ್​ ನೋಡಿ ಖುಷಿಯಿಂದ ಕಮೆಂಟ್​ ಮಾಡಿದ ಫ್ಯಾನ್ಸ್​
‘ಪೊನ್ನಿಯಿನ್​ ಸೆಲ್ವನ್​’ ರಿಲೀಸ್​ ದಿನಾಂಕ ಪ್ರಕಟ; ಸೆ.30ಕ್ಕೆ ರಾರಾಜಿಸಲಿದೆ ಮಲ್ಟಿ ಸ್ಟಾರ್​ ಸಿನಿಮಾ

ಕ್ರಿಕೆಟರ್​ಗಳಾದ ರವಿಚಂದ್ರನ್​ ಅಶ್ವಿನ್​ ಮತ್ತು ಸಂಜು ಸ್ಯಾಮ್ಸನ್​ ಅವರು ಅನುಕ್ರಮವಾಗಿ ತಮಿಳು ಮತ್ತು ಮಲಯಾಳಂ ವರ್ಷನ್​ ಗೀತೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ವಿಚಾರವನ್ನು ಸೋಶಿಯಲ್​ ಮೀಡಿಯಾ ಖಾತೆ ಮೂಲಕ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರತಂಡ ತಿಳಿಸಿದೆ. ಕನ್ನಡದಲ್ಲಿ ಯಾರು ರಿಲೀಸ್​ ಮಾಡಲಿದ್ದಾರೆ ಎಂಬುದು ಸರ್ಪ್ರೈಸ್​ ಆಗಿ ಉಳಿದುಕೊಂಡಿದೆ. ‘ಪೊನ್ನಿ ನದಿ..’ ಕನ್ನಡ ವರ್ಷನ್​ ಗೀತೆಗೆ ಜಯಂತ್​ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಐತಿಹಾಸಿಕ ಕಥಾಹಂದರ ಇರುವ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್​, ಚಿಯಾನ್​ ವಿಕ್ರಮ್​, ಕಾರ್ತಿ, ಜಯಂ ರವಿ, ತ್ರಿಷಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಮದ್ರಾಸ್​ ಟಾಕೀಸ್​’ ಮತ್ತು ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಗಳು ಬಂಡವಾಳ ಹೂಡಿವೆ. ಈ ಚಿತ್ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆಗಲಿದೆ.