ಪೂಜಾ ಹೆಗ್ಡೆ ವೃತ್ತಿ ಬದುಕಿಗೆ ವಿಲನ್ ಒಬ್ಬರಾ, ಇಬ್ಬರಾ? ನಟಿಯ ಹಿನ್ನಡೆಗೆ ಇವರೇ ಕಾರಣ?

ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಮಧ್ಯೆ ಭರ್ಜರಿ ಕಾಂಪಿಟೇಷನ್ ಇತ್ತು. ಪೂಜಾ ಹೆಗ್ಡೆಗೆ ಸಿಗೋ ಆಫರ್​ಗಳು ರಶ್ಮಿಕಾ ಪಾಲಾಗಿವೆ ಎನ್ನುವ ಮಾತಿದೆ. ಅ

ಪೂಜಾ ಹೆಗ್ಡೆ ವೃತ್ತಿ ಬದುಕಿಗೆ ವಿಲನ್ ಒಬ್ಬರಾ, ಇಬ್ಬರಾ? ನಟಿಯ ಹಿನ್ನಡೆಗೆ ಇವರೇ ಕಾರಣ?
ಪೂಜಾ, ಮೃಣಾಲ್, ಶ್ರೀಲೀಲಾ,ರಶ್ಮಿಕಾ
Follow us
ರಾಜೇಶ್ ದುಗ್ಗುಮನೆ
|

Updated on: Jul 31, 2023 | 7:10 AM

ನಟಿ ಪೂಜಾ ಹೆಗ್ಡೆ (Pooja Hegde) ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಅಲ್ಲು ಅರ್ಜುನ್ (Allu Arjun) ಮೊದಲಾದವರ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವರು ಒಪ್ಪಿಕೊಂಡ ಎರಡು ಸಿನಿಮಾಗಳಿಂದ ಅವರು ಹೊರನಡೆದಿದ್ದಾರೆ. ಇದಕ್ಕೆ ಕಾರಣಗಳು ಇನ್ನೂ ಬಹಿರಂಗ ಆಗಿಲ್ಲ. ಪೂಜಾ ಹೆಗ್ಡೆಗೆ ಇತರ ಹೀರೋಯಿನ್​ಗಳೇ ವಿಲನ್ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು, ಪೂಜಾ ಹೆಗ್ಡೆ ಅವರ ನಡೆ ಕೂಡ ನಿಗೂಢವಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೊರಾಗಿದೆ.

ಪೂಜಾ ಹೆಗ್ಡೆ ಅವರು ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಚಿತ್ರದಿಂದ ಅವರು ಸೈಲೆಂಟ್ ಆಗಿ ಹೊರಬಂದರು. ಪವನ್ ಕಲ್ಯಾಣ್ ನಟನೆಯ ಸಿನಿಮಾದಲ್ಲೂ ಅವರು ನಟಿಸಬೇಕಿತ್ತು. ಆದರೆ, ಆ ಚಿತ್ರದಲ್ಲೂ ಅವರು ನಟಿಸುತ್ತಿಲ್ಲ. ಈ ಎರಡೂ ಚಿತ್ರಕ್ಕೆ ಈಗ ಶ್ರೀಲೀಲಾ ನಾಯಕಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಷಯ. ಶ್ರೀಲೀಲಾ ಆಫರ್​ನ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಪೂಜಾ ಹೆಗ್ಡೆ ಫ್ಯಾನ್ಸ್ ಮಾಡುತ್ತಿದ್ದಾರೆ.

ಗೋಪಿಚಂದ್ ಮಲಿನೇನಿ ಹಾಗೂ ರವಿ ತೇಜಾ ಅವರ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಆಗಬೇಕಿತ್ತು. ಆದರೆ, ಗೋಪಿಚಂದ್ ಅವರು ಪೂಜಾ ಬದಲು ಮೃಣಾಲ್ ಠಾಕೂರ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ‘ಸೀತಾ ರಾಮಂ’ ಸಿನಿಮಾ ಯಶಸ್ಸಿನ ಬಳಿಕ ಮೃಣಾಲ್ ಯಶಸ್ಸು ಹೆಚ್ಚಿದೆ. ಈ ಕಾರಣಕ್ಕೆ ಅವರಿಗೆ ಮಣೆ ಹಾಕಲಾಗಿದೆ.

ಈ ಮೊದಲು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಮಧ್ಯೆ ಭರ್ಜರಿ ಕಾಂಪಿಟೇಷನ್ ಇತ್ತು. ಪೂಜಾ ಹೆಗ್ಡೆಗೆ ಸಿಗೋ ಆಫರ್​ಗಳು ರಶ್ಮಿಕಾ ಪಾಲಾಗಿವೆ ಎನ್ನುವ ಮಾತಿದೆ. ಅವರು ಕೂಡ ಪೂಜಾ ವೇಗಕ್ಕೆ ಬ್ರೇಕ್ ಹಾಕಿದ್ದಾರೆ ಎಂಬ ಮಾತಿದೆ.

ಇದನ್ನೂ ಓದಿ: ಸುಳ್ಳು ಸುದ್ದಿ ಹರಡುತ್ತಿದ್ದ ನಕಲಿ ಸೆನ್ಸಾರ್ ಸದಸ್ಯನಿಗೆ ನೊಟೀಸ್ ಕಳಿಸಿದ ನಟಿ ಪೂಜಾ ಹೆಗ್ಡೆ

ಇತ್ತೀಚೆಗೆ ರಿಲೀಸ್ ಆದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದರು. ಆದರೆ, ಸಿನಿಮಾ ಗೆಲ್ಲಲಿಲ್ಲ. ಇದಕ್ಕೂ ಮೊದಲು ರಿಲೀಸ್ ಆದ ಅವರ ನಟನೆಯ ಹಲವು ಸಿನಿಮಾಗಳು ಸೋತಿವೆ. ಇದು ಕೂಡ ಪೂಜಾ ಹೆಗ್ಡೆ ವೇಗಕ್ಕೆ ಬ್ರೇಕ್ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು