ಬಾಯ್ಫ್ರೆಂಡ್ ಜೊತೆ ಬ್ಯುಸಿಯಾದ ಪೂಜಾ ಹೆಗ್ಡೆ, ಶೀಘ್ರವೇ ಕಲ್ಯಾಣ?
Pooja Hegde: ಕಳೆದ ಎರಡು ವರ್ಷಗಳಲ್ಲಿ ಪೂಜಾ ಹೆಗ್ಡೆಯ ಬೇಡಿಕೆ ತೀವ್ರವಾಗಿ ಕುಸಿದಿದೆ. ಪೂಜಾ ಹೆಗ್ಡೆ ಸದ್ಯಕ್ಕೆ ಖಾಸಗಿ ಜೀವನದ ಬಗ್ಗೆ ಗಮನ ಹರಿಸಿದ್ದು, ಬಾಯ್ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ.

ನಟಿ ಪೂಜಾ ಹೆಗ್ಡೆ (Pooja Hegde) ಕೆಲವು ವರ್ಷಗಳ ಹಿಂದಷ್ಟೆ ತಮಿಳು-ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದರು. ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡಿದ್ದರು, ತೆಲುಗು, ತಮಿಳಿನ ಸ್ಟಾರ್ ನಟರ ಮೊದಲ ಆಯ್ಕೆ ಆಗಿದ್ದರು. ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿ ಎನಿಸಿಕೊಂಡಿದ್ದರು ಸಹ. ಆದರೆ ಕೇವಲ ಒಂದೆರಡು ವರ್ಷಗಳಲ್ಲಿ ಚಿತ್ರಣ ಬದಲಾಗಿದೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ತಮ್ಮ ಬೇಡಿಕೆ ಕಳೆದುಕೊಂಡಿದ್ದಾರೆ. ಪೂಜಾ ಹೆಗ್ಡೆ ಸ್ಥಾನವನ್ನು ಶ್ರೀಲೀಲಾ, ಹೊಸದಾಗಿ ಬಂದಿರುವ ಜಾನ್ಹವಿ ಕಪೂರ್ ತುಂಬುತ್ತಿದ್ದಾರೆ. ಹೆಚ್ಚು ಸಿನಿಮಾಗಳು ಕೈಯಲ್ಲಿಲ್ಲದೆ ಖಾಲಿಯಿರುವ ಪೂಜಾ ಹೆಗ್ಡೆ ಖಾಸಗಿ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.
ಪೂಜಾ ಹೆಗ್ಡೆ ತಮ್ಮ ಬಾಯ್ಫ್ರೆಂಡ್ ಜೊತೆ ಕೈ-ಕೈ ಹಿಡಿದು ಮುಂಬೈನ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಪೂಜಾ ಹೆಗ್ಡೆ, ನಟ ರೊಹಾನಾ ಮೆಹ್ರಾ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಈ ಜೋಡಿ ಮುಂಬೈನ ಬಾಂದ್ರಾನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಈ ಜೋಡಿ ಮುಂಬೈನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಅಂದಹಾಗೆ ರೊಹನ್ ಮೆಹ್ರಾ, ದಿವಂಗತ ನಟ ವಿನೋದ್ ಮೆಹ್ರಾ ಪುತ್ರ.
ರೋಹನ್ ಮೆಹ್ರಾ, ‘ಬಾಜಿರಾವ್ ಮಸ್ತಾನಿ’ ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ‘ಬಾಜಾರ್’ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು. ‘420 ಐಪಿಸಿ’ ಸಿನಿಮಾನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಇದೀಗ ‘ಅದ್ಭುತ್’ ಹೆಸರಿನ ಸಿನಿಮಾನಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ‘ಫೋರ್ ಮೋರ್ ಶಾಟ್ಸ್ ಪ್ಲೀಸ್’ ಹಾಗೂ ‘ಕಾಲ’ ವೆಬ್ ಸರಣಿಗಳಲ್ಲಿ ಸಹ ನಟಿಸಿದ್ದಾರೆ.
ಇದನ್ನೂ ಓದಿ:IPL 2024 Auction: ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರ ಪಟ್ಟಿ ಇಲ್ಲಿದೆ
ಈ ಜೋಡಿ ಕೋವಿಡ್ ಸಮಯದಿಂದಲೂ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಪ್ರೀತಿಯಷ್ಟು ಇಷ್ಟು ದಿನ ಗುಟ್ಟಾಗಿರಿಸಿದ್ದರು. ಇದೀಗ ಈ ಜೋಡಿ ವಿವಾಹವಾಗುತ್ತಿದ್ದು ಅದೇ ಕಾರಣ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಸೆಲೆಬ್ರಿಟಿ ಜೋಡಿಗಳು ಇತ್ತೀಚೆಗೆ ವಿವಾಹವಾಗುತ್ತಿದ್ದು, ಪೂಜಾ ಹಾಗೂ ರೋಹನ್ ಸಹ ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.
ಒಂದು ವರ್ಷದ ಹಿಂದೆ ಬಿಡುಗಡೆ ಆದ ಹಿಂದಿ ಸಿನಿಮಾ ‘ಕಿಸೀಕಿ ಭಾಯ್, ಕಿಸೀಕಿ ಜಾನ್’ ನಲ್ಲಿ ಕೊನೆಯದಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ಅದರ ಬಳಿಕ ಪೂಜಾ ನಟಿಸಿರುವ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಎರಡು ವರ್ಷದ ಹಿಂದೆ ಒಟ್ಟೊಟ್ಟಿಗೆ ಮೂರು ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದ ಪೂಜಾ ಹೆಗ್ಡೆ ಕೈಯಲ್ಲಿ ಈಗ ಕೇವಲ ಒಂದು ಸಿನಿಮಾ ಮಾತ್ರವೇ ಇದೆ. ‘ದೇವ’ ಹೆಸರಿನ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Tue, 2 April 24




