ಭಾರಿ ಸಂಭಾವನೆ ಡಿಮ್ಯಾಂಡ್: ಬ್ಯಾಕ್ ಟು ಬ್ಯಾಕ್ ಆಫರ್ ಕಳೆದುಕೊಳ್ಳುತ್ತಿದ್ದಾರಾ ಪೂಜಾ ಹೆಗ್ಡೆ?

ನಟಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಅವರ ಭಾರಿ ಸಂಭಾವನೆಯ ಬೇಡಿಕೆ (ಸುಮಾರು 5 ಕೋಟಿ ರೂ.) ಮುಖ್ಯ ಕಾರಣ ಎನ್ನಲಾಗಿದೆ. ಸತತ ಫ್ಲಾಪ್‌ಗಳು ಮತ್ತು ಕಠಿಣ ಸಂಭಾವನೆ ನಿಲುವಿನಿಂದ ನಿರ್ಮಾಪಕರು ಹೊಸ ನಟಿಯರತ್ತ ಮುಖ ಮಾಡುತ್ತಿದ್ದಾರೆ. ಇದು ಪೂಜಾ ಅವರ ವೃತ್ತಿಜೀವನಕ್ಕೆ ಹಿನ್ನಡೆಯಾಗುತ್ತಿದ್ದು, ಅವರಿಗೆ ಸಂಭಾವನೆ ತಗ್ಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದೆ.

ಭಾರಿ ಸಂಭಾವನೆ ಡಿಮ್ಯಾಂಡ್: ಬ್ಯಾಕ್ ಟು ಬ್ಯಾಕ್ ಆಫರ್ ಕಳೆದುಕೊಳ್ಳುತ್ತಿದ್ದಾರಾ ಪೂಜಾ ಹೆಗ್ಡೆ?
ಪೂಜಾ ಹೆಗ್ಡೆ

Updated on: Jun 19, 2026 | 2:45 PM

ಸಾಮಾನ್ಯವಾಗಿ ನಟ-ನಟಿಯರು ನಿರಂತರ ಫ್ಲಾಪ್ ಕೊಟ್ಟರೆ ಬೇಡಿಕೆ ಕಡಿಮೆ ಆಗುತ್ತದೆ. ಆ ಸಂದರ್ಭದಲ್ಲಿ ಸಂಭಾವನೆ ತಗ್ಗಿಸಿಕೊಂಡರೆ ಆಫರ್​​ಗಳು ಬರುತ್ತವೆ. ಆದರೆ, ನನಗೆ ಇಷ್ಟೇ ಹಣ ಬೇಕು ಎಂದು ಕುಳಿತರೆ ಸಿಕ್ಕ ಆಫರ್ ಕೂಡ ಕೈ ತಪ್ಪುತ್ತದೆ. ಈಗ ನಟಿ ಪೂಜಾ ಹೆಗ್ಡೆ ಅವರಿಗೂ (Pooja Hegde) ಇದೇ ರೀತಿ ಆಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಪೂಜಾ ಹೆಗ್ಡೆ ಸದ್ಯ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆಯೊಂದು ಟಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ಕೈಯಲ್ಲಿ ದೊಡ್ಡ ಮಟ್ಟದ ತೆಲುಗು ಸಿನಿಮಾಗಳಿಲ್ಲದ ಪೂಜಾ ಹೆಗ್ಡೆ ಅವರ ಈ ಹಿನ್ನಡೆಗೆ ಅವರ ‘ಭಾರಿ ಸಂಭಾವನೆ’ಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ. 2021ರಲ್ಲಿ ತೆರೆಗೆ ಬಂದ ‘ಮೋಸ್ಟ್ ಎಲಿಬೆಲ್ ಬ್ಯಾಚುಲರ್’ ಚಿತ್ರವೇ ಕೊನೆ. ಇದಾದ ಬಳಿಕ ತೆಲುಗಿಗೆ ಅವರು ಬಂದಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ತೆಲುಗು ಸಿನಿಮಾಗಳನ್ನು ಅವರು ರಿಜೆಕ್ಟ್ ಮಾಡಿದ್ದರು.

ವರದಿಗಳ ಪ್ರಕಾರ, ಸಿನಿಮಾವೊಂದಕ್ಕೆ ನಟಿ ಪೂಜಾ ಹೆಗ್ಡೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಕಥೆ ಇಷ್ಟವಾಗಿ ಚಿತ್ರತಂಡಗಳು ಇವರನ್ನು ಸಂಪರ್ಕಿಸಿದರೂ, ಈ ಭಾರಿ ಮೊತ್ತದ ಪ್ರೈಸ್ ಟ್ಯಾಗ್ ಕೇಳಿ ನಿರ್ಮಾಪಕರು ಹಿಂದೇಟು ಇಡುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ನಟನೆಯ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಫ್ಲಾಪ್ ಆಗಿವೆ. ಇದರ ಬೆನ್ನಲ್ಲೇ ಚಿತ್ರರಂಗಕ್ಕೆ ಹೊಸ ಹಾಗೂ ಯುವ ನಟಿಯರ ಎಂಟ್ರಿ ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕರು ಕಮ್ಮಿ ಬಜೆಟ್‌ನಲ್ಲಿ ಸಿಗುವ ಇತರೆ ಯುವ ನಟಿಯರನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಪೂಜಾ ಹೆಗ್ಡೆ ಅದೃಷ್ಟ ಬದಲಿಸುತ್ತಾ ವರುಣ್ ಧವನ್ ಸಿನಿಮಾ?

ಪೂಜಾ ಹೆಗ್ಡೆ ಅವರ ಈ ಕಠಿಣ ಸಂಭಾವನೆ ನಿಲುವಿನಿಂದಾಗಿ ಟಾಲಿವುಡ್ ನಿರ್ಮಾಪಕರು ಬೇರೆ ನಟಿಯರತ್ತ ಮುಖ ಮಾಡುತ್ತಿದ್ದು, ಸ್ಟಾರ್ ನಟಿಗೆ ಆಫರ್‌ಗಳು ಕೈತಪ್ಪುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಅವರಿಗೆ ಸಂಭಾವನೆ ಕಡಿಮೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us