ಬಲವಂತಕ್ಕೆ ನನ್ನನ್ನು ಪ್ರೆಗ್ನೆಂಟ್​ ಮಾಡಬೇಡಿ; ಮಾದಕ ನಟಿ ಪೂನಂ ಪಾಂಡೆ ಹೀಗೆ ಹೇಳಿದ್ದು ಯಾರಿಗೆ?

ಮದುವೆ ಆಗಿ ಕೆಲವೇ ದಿನಕ್ಕೆ ಜಗಳ ಮಾಡಿಕೊಂಡು ದೂರವಾಗಿದ್ದ ಪೂನಂ ಪಾಂಡೆ ಮತ್ತು ಸ್ಯಾಮ್​ ಬಾಂಬೆ ಈಗ ಮತ್ತೆ ಒಂದಾಗಿದ್ದಾರೆ. ಅಷ್ಟರಲ್ಲಾಗಲೇ ಪೂನಂ ಪ್ರೆಗ್ನೆಂಟ್​ ಆಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಬಲವಂತಕ್ಕೆ ನನ್ನನ್ನು ಪ್ರೆಗ್ನೆಂಟ್​ ಮಾಡಬೇಡಿ; ಮಾದಕ ನಟಿ ಪೂನಂ ಪಾಂಡೆ ಹೀಗೆ ಹೇಳಿದ್ದು ಯಾರಿಗೆ?
ಪೂನಂ ಪಾಂಡೆ, ಸ್ಯಾಮ್​ ಬಾಂಬೆ
Edited By:

Updated on: Jun 22, 2021 | 2:40 PM

ಮಾದಕ ನಟಿ ಪೂನಂ ಪಾಂಡೆ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ವೈಯಕ್ತಿಕ ಜೀವನ ಅನೇಕ ತಿರುವುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಸ್ಯಾಮ್​ ಬಾಂಬೆ ಜೊತೆ ಮದುವೆ ಆಗಿದ್ದ ಅವರು, ಕೆಲವೇ ದಿನಗಳಲ್ಲಿ ಗಂಡನಿಂದ ದೂರಾಗಿದ್ದರು. ಇಬ್ಬರ ನಡುವೆ ತೀವ್ರ ಜಗಳ ನಡೆದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು. ತಮ್ಮ ಮೇಲೆ ಸ್ಯಾಮ್​ ಬಾಂಬೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಪಾಂಡೆ ಆರೋಪಿಸಿದ್ದರು. ಆದರೆ ಈಗ ಅವರ ಪ್ರೆಗ್ನೆನ್ಸಿ ಬಗ್ಗೆ ಗಾಸಿಪ್​ ಹಬ್ಬಿದೆ.

ಕೆಲವೇ ದಿನಗಳ ಹಿಂದೆ ಪೂನಂ ಪಾಂಡೆ ಮತ್ತು ಸ್ಯಾಮ್​ ಬಾಂಬೆ ಒಂದಾಗಿದ್ದಾರೆ. ಅಷ್ಟರಲ್ಲಾಗಲೇ ಪೂನಂ ಪ್ರೆಗ್ನೆಂಟ್​ ಆಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದು ನಿಜವೋ ಹೌದು ಎಂದು ನೇರವಾಗಿ ಕೇಳಿದಾಗ, ಹಲವು ವಿಚಾರಗಳನ್ನು ಮಾಧ್ಯಮದ ಎದುರು ಪೂನಂ ತೆರೆದಿಟ್ಟಿದ್ದಾರೆ. ‘ನಾನಿನ್ನೂ ಪ್ರೆಗ್ನೆಂಟ್​ ಆಗಿಲ್ಲ. ನೀವು ನನ್ನನ್ನು ಬಲವಂತವಾಗಿ ಪ್ರೆಗ್ನೆಂಟ್​ ಮಾಡಬೇಡಿ’ ಎಂದು ಗಾಸಿಪ್​ ಹಬ್ಬಿಸುವವರಿಗೆ ಪೂನಂ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ತಮ್ಮ ಗಂಡನ ಜೊತೆ ಪುನಃ ವಾಸಿಸಲು ಆರಂಭಿಸಿರುವ ಅವರು, ಆ ಬಗ್ಗೆಯೂ ಮಾತನಾಡಿದ್ದಾರೆ. ‘ನಮ್ಮ ನಡುವಿನ ಜಗಳವನ್ನು ಬಗೆ ಹರಿಸಿಕೊಂಡಿದ್ದೇವೆ. ನಾನು ನನ್ನ ಮದುವೆಯನ್ನು ಉಳಿಸಿಕೊಂಡೆ. ನೀವು ಒಬ್ಬರನ್ನು ನಿಜವಾಗಿಯೂ ಪ್ರೀತಿಸಿದ್ದೇ ಹೌದಾದರೆ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಹೇಗೆ ಸಾಧ್ಯ? ಎಲ್ಲರ ಸಂಬಂಧದಲ್ಲೂ ತೊಂದರೆ ಎದುರಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಬೇಕಾಗುತ್ತದೆ’ ಎಂದು ಪತಿಯನ್ನು ಕ್ಷಮಿಸಿರುವುದಾಗಿ ಪೂನಂ ಪಾಂಡೆ ಹೇಳಿದ್ದಾರೆ.

ಕೊರೊನಾ ಕಷ್ಟ ಕಾಲದಲ್ಲೂ ಸ್ಯಾಮ್​ ಬಾಂಬೆ ಮತ್ತು ಪೂನಂ ಪಾಂಡೆ ಖುಷಿಯಾಗಿ ಜೀವನ ಮಾಡಿಕೊಂಡಿದ್ದಾರೆ. ಸ್ಯಾಮ್​ ಬಾಂಬೆ ಕೋಪದ ಮನುಷ್ಯ. ‘ನಾನು ಅಡುಗೆಗೆ ಕಡಿಮೆ ಉಪ್ಪು ಹಾಕುತ್ತೇನೆ. ಸದ್ಯದಲ್ಲೇ ನನ್ನ ಯೂಟ್ಯೂಬ್​ ಚಾನಲ್​ ಶುರುಮಾಡುತ್ತೇನೆ. ಬಾಂದ್ರಾದಲ್ಲಿ ನನಗೆ ಸುಂದರವಾದ ಬಂಗಲೆ ಇದೆ. ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ. ನನ್ನ ಗಂಡ ಶೆಫ್​. ಅವನಿಂದ ನಾನು ತುಂಬ ಕಲಿತಿದ್ದೇನೆ’ ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

Poonam Pandey: ಪಡ್ಡೆಗಳ ದುಡ್ಡು ಕಬಳಿಸಲು ಹೊಸ ಐಡಿಯಾ ಮಾಡಿದ ಹಾಟ್​ ಬೆಡಗಿ ಪೂನಂ ಪಾಂಡೆ

ಗೋವಾದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ: ನಟಿ ಪೂನಂ ಪಾಂಡೆ ಅಂದರ್