‘ಕಲ್ಕಿ 2898 ಎಡಿ’ ಸಿನಿಮಾ ಯಶಸ್ಸು ಕಂಡಿದೆ. ರಿಲೀಸ್ ಆದ 8 ದಿನಗಳಲ್ಲಿ ಸಿನಿಮಾದ ಗಳಿಕೆ 700 ಕೋಟಿ ರೂಪಾಯಿ ಆಗಿದೆ. ಇದು ಪ್ರಭಾಸ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಆದರೆ, ಈ ಮಧ್ಯೆ ಕೆಲವರು ಪ್ರಭಾಸ್ ಸ್ಕ್ರೀನ್ಸ್ಪೇಸ್ ಬಗ್ಗೆ ತಕರಾರು ತೆಗೆದಿದ್ದಾರೆ. ಅವರು ತೆರೆಮೇಲೆ ಕಾಣೋದು 30 ನಿಮಿಷ ಮಾತ್ರ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಪ್ರಭಾಸ್ಗೆ ಅಸಮಾಧಾನ ಇದೆಯಾ? ಈ ಬಗ್ಗೆ ನಾಗ್ ಅಶ್ವಿನ್ ಮಾತನಾಡಿದ್ದಾರೆ. ಪ್ರಭಾಸ್ ಅವರು ಈ ರೀತಿಯ ವಿಚಾರಗಳ ಬಗ್ಗೆ ಗಮನ ನೀಡಲ್ಲ ಎಂದಿದ್ದಾರೆ.
‘ನಾವು ಆ ರೀತಿಯ ವಿಚಾರಗಳನ್ನು ಚರ್ಚೆ ಮಾಡಿಯೇ ಇಲ್ಲ. ಈ ರೀತಿಯ ವಿಚಾರಗಳ ಬಗ್ಗೆ ಪ್ರಭಾಸ್ ಗಮನ ಹರಿಸುವುದಿಲ್ಲ. ಅವರು ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಒಮ್ಮೆ ಕಥೆ ಓಕೆ ಆದರೆ ಅವರು ಸಂಪೂರ್ಣವಾಗಿ ಬೆಂಬಲ ನೀಡುತ್ತಾರೆ’ ಎಂದಿದ್ದಾರೆ ನಾಗ್ ಅಶ್ವಿನ್. ಈ ಮೂಲಕ ಸಿನಿಮಾ ಬಗ್ಗೆ ಅವರಿಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ.
‘ಒಂದು ಹೀರೋ ಮತ್ತೊಂದು ಹೀರೋಗೆ ಹೊಡೆಯೋದು ನಿಜಕ್ಕೂ ದೊಡ್ಡ ವಿಷಯ. ಈ ನಟರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಆದಾಗ್ಯೂ ಪ್ರಭಾಸ್ಗೆ ಇದೆಲ್ಲ ಸಮಸ್ಯೆ ಅನಿಸಲಿಲ್ಲ. ಅಮಿತಾಭ್ ಬಚ್ಚನ್ ಹೊಡೆಯಲಿ ಎಂದು ಪ್ರಭಾಸ್ ಬಯಸುತ್ತಿದ್ದರು’ ಎಂಬುದು ನಾಗ್ ಅಶ್ವಿನ್ ಮಾತು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಹಾಗೂ ಅಮಿತಾಭ್ ಬಚ್ಚನ್ ಮಧ್ಯೆ ಹೊಡೆದಾಟದ ದೃಶ್ಯಗಳು ಬರುತ್ತವೆ. ಇದರಲ್ಲಿ ಪ್ರಭಾಸ್ ಸರಿಯಾಗಿ ಹೊಡೆತ ತಿನ್ನುತ್ತಾರೆ.
ಇದನ್ನೂ ಓದಿ: 8 ದಿನಕ್ಕೆ 774 ಕೋಟಿ ರೂಪಾಯಿ ಗಳಿಸಿದ ‘ಕಲ್ಕಿ 2898 ಎಡಿ’; 2ನೇ ವಾರವೂ ಅಬ್ಬರ
‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಭಾಗಕ್ಕೆ ಈಗಾಗಲೇ 20-30 ದಿನಗಳ ಶೂಟಿಂಗ್ ಪೂರ್ಣಗೊಂಡಿದೆ. ಇನ್ನೂ ಹಲವು ದಿನಗಳ ಶೂಟಿಂಗ್ ಬಾಕಿ ಇದೆ. ಕಮಲ್ ಹಾಸನ್ ಅವರು ಕೆಲವೇ ನಿಮಿಷ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಬರುತ್ತಾರೆ. ಸುಪ್ರೀಮ್ ಯಾಸ್ಕಿನ್ ಹೆಸರಿನ ಪಾತ್ರ ಮಾಡಿದ್ದಾರೆ. ಸೀಕ್ವೆಲ್ನಲ್ಲಿ ಅವರ ಪಾತ್ರವೇ ಹೆಚ್ಚು ಹೈಲೈಟ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.