‘ಕಲ್ಕಿ 2898 ಎಡಿ’ ಚಿತ್ರದ ಟ್ರೇಲರ್ ರಿಲೀಸ್​ಗೆ ಫಿಕ್ಸ್ ಆಯ್ತು ದಿನಾಂಕ; ಇನ್ನೆಷ್ಟು ದಿನ ಕಾಯಬೇಕು?

|

Updated on: Jun 05, 2024 | 2:18 PM

Kalki 2898 AD Trailer: ‘ಕಲ್ಕಿ 2898 ಎಡಿ’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಇಷ್ಟು ದಿನ ಚುನಾವಣೆ ಇದ್ದ ಕಾರಣ ತಂಡ ನಿಧಾನಗತಿಯಲ್ಲಿ ಪ್ರಚಾರ ಮಾಡುತ್ತಿತ್ತು. ಈಗ ಚುನಾವಣೆ ಮುಗಿದು, ಫಲಿತಾಂಶ ಕೂಡ ಹೊರ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ರಚನೆ ಆಗಲಿದೆ ಎನ್ನಲಾಗಿದೆ.

‘ಕಲ್ಕಿ 2898 ಎಡಿ’ ಚಿತ್ರದ ಟ್ರೇಲರ್ ರಿಲೀಸ್​ಗೆ ಫಿಕ್ಸ್ ಆಯ್ತು ದಿನಾಂಕ; ಇನ್ನೆಷ್ಟು ದಿನ ಕಾಯಬೇಕು?
ಕಲ್ಕಿ 2898 ಎಡಿ
Follow us on

‘ಕಲ್ಕಿ 2898 ಎಡಿ’ ಸಿನಿಮಾದ (Kalki 2898 AD) ಟ್ರೇಲರ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಪಾತ್ರಗಳ ಬಗ್ಗೆ ತಂಡ ಮಾಹಿತಿ ನೀಡಿದೆ. ಈ ಚಿತ್ರದ ಕಥೆ ಹೇಗಿರುತ್ತದೆ ಎನ್ನುವ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ವಿವರಿಸಿದ್ದಾರೆ. ಈ ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕು ಎಂದರೆ ಟ್ರೇಲರ್ ರಿಲೀಸ್ ಆಗಬೇಕು. ಇದಕ್ಕಾಗಿಯೇ ಫ್ಯಾನ್ಸ್ ಕಾದಿದ್ದರು. ಈಗ ಈ ಕಾಯುವಿಕೆ ಕೊನೆಯಾಗೋ ದಿನ ಬಂದಿದೆ. ಜೂನ್ 10ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ‘ಕಲ್ಕಿ 2898 ಎಡಿ’ ತಂಡ ಮಾಹಿತಿ ನೀಡಿದೆ. ಅಂದರೆ ಟ್ರೇಲರ್​ ರಿಲೀಸ್​ಗೆ ಬಾಕಿ ಇರೋದು ಇನ್ನು ಕೇವಲ ಐದು ದಿನಗಳು ಮಾತ್ರ.

‘ಕಲ್ಕಿ 2898 ಎಡಿ’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಇಷ್ಟು ದಿನ ಚುನಾವಣೆ ಇದ್ದ ಕಾರಣ ತಂಡ ನಿಧಾನಗತಿಯಲ್ಲಿ ಪ್ರಚಾರ ಮಾಡುತ್ತಿತ್ತು. ಈಗ ಚುನಾವಣೆ ಮುಗಿದು, ಫಲಿತಾಂಶ ಕೂಡ ಹೊರ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ರಚನೆ ಆಗಲಿದೆ ಎನ್ನಲಾಗಿದೆ. ಹೀಗಾಗಿ, ಪ್ರಮೋಷನ್​ನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ.

‘ಕಲ್ಕಿ 2898 ಎಡಿ’ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೋಸ್ಟರ್​ನಲ್ಲಿ ಪ್ರಭಾಸ್ ಅವರು ಕೈಗಾರಿಕಾ ಪ್ರದೇಶದ ಮಧ್ಯೆ ನಿಂತಿದ್ದಾರೆ. ಹಿಂಭಾಗದಲ್ಲಿ ದೊಡ್ಡ ದೊಡ್ಡ ಮಷಿನ್​ಗಳು ಕಂಡು ಬಂದಿವೆ. ಅವರು ಸೂಪರ್ ಹೀರೋ ರೀತಿ ಕಾಣಿಸಿದ್ದಾರೆ. ‘ಎಲ್ಲವೂ ಬದಲಾಗುವ ಸನಿಹದಲ್ಲಿದೆ’ ಎಂದು ಬರೆಯಲಾಗಿದೆ. ಜೂನ್ 10ಕ್ಕೆ ಟ್ರೇಲರ್ ಎಂದು ತಂಡ ಮಾಹಿತಿ ನೀಡಿದೆ.

ಪ್ರಭಾಸ್ ಬಳಕೆ ಮಾಡುವ ‘ಬುಜ್ಜಿ’ ಕಾರು ಸಾಕಷ್ಟು ಫೇಮಸ್ ಆಗಿದೆ. ಇದನ್ನು ಅನೇಕ ಸೆಲೆಬ್ರಿಟಿಗಳು ಡ್ರೈವ್ ಮಾಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ. ಅಮಿತಾಭ್​ ಬಚ್ಚಮ್ ಕೂಡ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆ. ವಿವಿಧ ನಗರಗಳಿಗೆ ಈ ಸೆಲೆಬ್ರಿಟಿಗಳು ತೆರಳಲಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ಕೆರಿಯರ್​ನ ಫ್ಲಾಪ್ ಸಿನಿಮಾ ಮರು ಬಿಡುಗಡೆ, ಇದು ಹಣ ಮಾಡುವ ತಂತ್ರ

ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಕೂಡ ಇದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.