AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಕೆರಿಯರ್​ನ ಫ್ಲಾಪ್ ಸಿನಿಮಾ ಮರು ಬಿಡುಗಡೆ, ಇದು ಹಣ ಮಾಡುವ ತಂತ್ರ

ಪ್ರಭಾಸ್​ ಕ್ರೇಜ್ ದೇಶವನ್ನು ದಾಟಿ ವಿದೇಶಗಳಲ್ಲಿಯೂ ಹಬ್ಬಿದೆ. ಸಿನಿಮಾನಲ್ಲಿ ಪ್ರಭಾಸ್ ಇದ್ದರೆ ಸಾಕು 300 ಕೋಟಿ ವ್ಯಾಪಾರ ಪಕ್ಕಾ ಎನ್ನಲಾಗುತ್ತಿದೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಳ್ಳಲೆಂದು ಕೆಲ ನಿರ್ಮಾಪಕರು ಪ್ರಭಾಸ್​ರ ಹಳೆ ಫ್ಲಾಪ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.

ಪ್ರಭಾಸ್ ಕೆರಿಯರ್​ನ ಫ್ಲಾಪ್ ಸಿನಿಮಾ ಮರು ಬಿಡುಗಡೆ, ಇದು ಹಣ ಮಾಡುವ ತಂತ್ರ
ಮಂಜುನಾಥ ಸಿ.
|

Updated on:Jun 02, 2024 | 1:29 PM

Share

ಸ್ಟಾರ್ ನಟರ ಹಳೆಯ ಸಿನಿಮಾಗಳು ಮರು ಬಿಡುಗಡೆ ಆಗಿ ಭರ್ಜರಿ ಆಗಿ ಹಣ ಮಾಡುತ್ತಿವೆ. ನೆರೆಯ ತೆಲುಗು ಚಿತ್ರರಂಗದಲ್ಲಿ (Tollywood) ಅಂತೂ ರೀ ರಿಲೀಸ್ ಟ್ರೆಂಡ್ ಬಲು ಜೋರಾಗಿದೆ. ಹಲವು ನಟರ ಐಕಾನಿಕ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಿ ಬಿಡುಗಡೆ ಮಾಡಲಾಗಿದೆ. ಆ ಸಿನಿಮಾಗಳು ದೊಡ್ಡ ಮೊತ್ತದ ಹಣವನ್ನೂ ಗಳಿಸಿವೆ. ಕನ್ನಡದಲ್ಲಿಯೂ ಸಹ ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ‘ಎ’ ಸಿನಿಮಾ ಮರು ಬಿಡುಗಡೆ ಆಗಿ ಸೂಪರ್ ಹಟ್ ಆಗಿದೆ. ಮರು ಬಿಡುಗಡೆಯಿಂದ ಹಣ ಬರುತ್ತಿದೆ ಎಂದು ತಿಳಿಯುತ್ತಿದ್ದಂತೆ, ಕೆಲವು ನಿರ್ಮಾಪಕರು ಸ್ಟಾರ್ ನಟರ ಹಳೆಯ ಸಿನಿಮಾಗಳನ್ನು ಕೇವಲ ಹಣ ಮಾಡುವ ದೃಷ್ಟಿಯಿಂದ ಮರು ಬಿಡುಗಡೆ ಮಾಡುತ್ತಿದ್ದಾರೆ.

ಸ್ಟಾರ್ ನಟರ ಹುಟ್ಟುಹಬ್ಬ ಇನ್ನಿತರೆ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ ಹಣ ಮಾಡಲೆಂದು ಸಿನಿಮಾಗಳ ಮರು ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ಪುನೀತ್ ರಾಜ್​ಕುಮಾರ್ ಅವರ ಎರಡು ಸಿನಿಮಾಗಳನ್ನು ಇದೇ ರೀತಿ ಬಿಡುಗಡೆ ಮಾಡಲಾಯ್ತು, ಅಪ್ಪು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರೂ ಸಹ ಆ ಸಿನಿಮಾಗಳ ಬಡುಗಡೆ ಮಾಡಬೇಕಾಯ್ತು. ಇದೀಗ ಪ್ರಭಾಸ್ ವಿಷಯದಲ್ಲಿಯೂ ಹೀಗೆಯೇ ಆಗುತ್ತಿದೆ.

ಪ್ರಭಾಸ್ ಸೂಪರ್ ಸ್ಟಾರ್ ನಟ., ಆದರೆ ಅವರ ವೃತ್ತಿ ಜೀವನದಲ್ಲಿಯೂ ಸಹ ಏಳು-ಬೀಳುಗಳಿವೆ. ಕೆಲವು ಸಿನಿಮಾಗಳು ಫ್ಲಾಪ್ ಆಗಿವೆ.ಕೆಲವು ಅಟ್ಟಟರ್ ಫ್ಲಾಪ್ ಆಗಿವೆ. ಅವುಗಳಲ್ಲಿ ಒಂದು ‘ಚಕ್ರಂ’. ಹಾಸ್ಯ, ಮೆಲೋಡ್ರಾಮ, ಪ್ರೇಮಕತೆಯನ್ನು ಹೊಂದಿದ್ದ ‘ಚಕ್ರಂ’ ಸಿನಿಮಾದಲ್ಲಿ ಪ್ರಭಾಸ್ ಅಮಾಯಕ, ಮ್ಯಾಜಿಶೀಯನ್ ಪಾತ್ರದಲ್ಲಿ ನಟಿಸಿದ್ದಾರೆ. ‘ಚಕ್ರಂ’ ಸಿನಿಮಾ ಬಿಡುಗಡೆ ಆದಾಗ ಈ ಸಿನಿಮಾದ ಹಾಡುಗಳು ಹಿಟ್ ಆದವು, ಆದರೆ ಸಿನಿಮಾ ಹಿಟ್ ಆಗಲಿಲ್ಲ. ಅದೇ ಕಾರಣಕ್ಕೆ ಈಗಲಾದರೂ ಹಣ ವಾಪಸ್ ತೆಗೆದುಕೊಳ್ಳುವ ಆಸೆಯಿಂದ ‘ಚಕ್ರಂ’ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಪ್ರಭಾಸ್ ಕೆರಿಯರ್​ನ ಫ್ಲಾಪ್ ಸಿನಿಮಾ ಮರು ಬಿಡುಗಡೆ, ಇದು ಹಣ ಮಾಡುವ ತಂತ್ರ

‘ಚಕ್ರಂ’ ಸಿನಿಮಾ ಬರೋಬ್ಬರಿ 20 ವರ್ಷಗಳ ಹಿಂದೆ 2005 ರಲ್ಲಿ ಬಿಡುಗಡೆ ಆಗಿತ್ತು. ‘ವರ್ಷಂ’, ‘ಅಡವಿ ರಾಮುಡು’ ಅಂಥಹಾ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಪ್ರಭಾಸ್ ಅವರೆಡರ ಬಳಿಕ ‘ಚಕ್ರಂ’ ಸಿನಿಮಾ ಮಾಡಿ ಮೊದಲ ಸೋಲು ಕಂಡರು. ಈ ಸಿನಿಮಾನಲ್ಲಿ ಅಸಿನ್ ಹಾಗೂ ಚಾರ್ಮಿ ನಾಯಕಿಯರು. ಇದೀಗ ‘ಚಕ್ರಂ’ ಸಿನಿಮಾ ಜೂನ್ 8ಕ್ಕೆ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಪ್ರಭಾಸ್ ಪ್ರಸ್ತುತ ಐದು ಸಿನಿಮಾಗಳಲ್ಲಿ ಬ್ಯುಸಿ. ‘ಕಲ್ಕಿ 2898 ಎಡಿ’ ಸಿನಿಮಾ ಬಹುತೇಕ ರೆಡಿಯಾಗಿದೆ. ಅದಾದ ಬಳಿಕ ‘ದಿ ರಾಜಾ ಸಾಬ್’ ಅದರ ಬಳಿಕ ‘ಸಲಾರ್ 2’ ಹಾಗೂ ‘ಸ್ಪಿರಿಟ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ‘ಕಣ್ಣಪ್ಪ’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಸಹ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Sun, 2 June 24