ಪ್ರಭಾಸ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಉಡುಗೊರೆ

Prabhas Fans: ಪ್ರಭಾಸ್ ನಾಯಕನಾಗಿ ನಟಿಸಿದ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದೆ. ಆದರೆ ಇದೀಗ ಪ್ರಭಾಸ್ ಅಭಿಮಾನಿಗಳು ಖುಷಿ ಪಡುವ ಸುದ್ದಿ ದೊರೆತಿದೆ. ಪ್ರಭಾಸ್ ನಟನೆಯ ಎರಡು ಬಹು ನಿರೀಕ್ಷಿತ ಸಿನಿಮಾಗಳ ಬಗೆಗಿನ ಅಪ್​​ಡೇಟ್ ಒಂದೇ ದಿನ ಹೊರಬಿದ್ದಿದೆ. ಯಾವುವು ಆ ಸಿನಿಮಾಗಳು? ಅಪ್​​ಡೇಟ್ ಏನು?

ಪ್ರಭಾಸ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಉಡುಗೊರೆ
Prabhas

Updated on: Nov 23, 2025 | 7:56 PM

ಪ್ರಭಾಸ್ (Prabhas), ಪ್ಯಾನ್ ಇಂಡಿಯಾ ಸ್ಟಾರ್ ನಟ. ಪ್ರಭಾಸ್ ನಾಯಕನಾಗಿ ನಟಿಸಿದ ಸಿನಿಮಾ ಒಂದು ಬಿಡುಗಡೆ ಆಗಿ ಸುಮಾರು ಎರಡು ವರ್ಷಗಳಾಗುತ್ತಾ ಬಂತು. 2024ರ ಜೂನ್ ತಿಂಗಳಲ್ಲಿ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿತ್ತು. ಅದಾದ ಬಳಿಕ ಯಾವುದೇ ಸಿನಿಮಾಗಳು ಬಂದಿಲ್ಲ. ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಿ ತಿಂಗಳುಗಳೇ ಆಗಬೇಕಿತ್ತು, ಆದರೆ ಅದರ ಬಿಡುಗಡೆ ಮುಂದೂಡುತ್ತಲೇ ಬರಲಾಗುತ್ತಿದೆ. ಮೆಚ್ಚಿನ ನಟನ ಸಿನಿಮಾ ಇಲ್ಲದೆ, ಸಿನಿಮಾಗಳ ಅಪ್​ಡೇಟ್ ಇಲ್ಲದೆ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ.

ಇಂದು (ನವೆಂಬರ್ 23) ಪ್ರಭಾಸ್ ಅವರ ಎರಡು ಸಿನಿಮಾಗಳ ಅಪ್​ಡೇಟ್​​ಗಳು ಹೊರ ಬಿದ್ದಿವೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಹಾಡು ಬಿಡುಗಡೆ ಆಗಿದೆ. ‘ದಿ ರಾಜಾ ಸಾಬ್’ ಸಿನಿಮಾದ ‘ರೆಬೆಲ್ ಸಾಂಗ್’ ಇಂದು ಟಿ ಸೀರೀಸ್​​ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿದೆ. ಈ ಹಾಡು ಪ್ರಭಾಸ್ ಅವರನ್ನು ಕೊಂಡಾಡುವ ಹಾಡಾಗಿದ್ದು, ‘ಪ್ಯಾನ್ ಇಂಡಿಯಾ ನಂಬರ್ 1’, ‘ರೆಬೆಲ್ ಸ್ಟಾರ್’ ಇತ್ಯಾದಿ ಪದಗಳನ್ನು ಬಳಸಿ, ಪ್ರಭಾಸ್ ಅಭಿಮಾನಿಗಳಿಗಾಗಿಯೇ ಮಾಡಿದ ಹಾಡಿನಂತಿದೆ.

ಇನ್ನು ಇದೇ ದಿನ ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಸ್ಪಿರಿಟ್’ನ ಮುಹೂರ್ತವೂ ನಡೆದಿದ್ದು, ಅಧಿಕೃತವಾಗಿ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿದೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ಮುಹೂರ್ತ ಇಂದು (ನವೆಂಬರ್ 23) ನಡೆದಿದೆ. ಮೆಗಾಸ್ಟಾರ್ ಚಿರಂಜೀವಿ, ಮುಹೂರ್ತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದು, ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕಿ ತೃಪ್ತಿ ದಿಮ್ರಿ ಸಹ ಇದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹ ಹಾಜರಿದ್ದರು. ಮುಹೂರ್ತ ಸಮಯದಲ್ಲಿ ಪ್ರಭಾಸ್ ಸಹ ಇದ್ದರಾದರೂ ಪ್ರಭಾಸ್ ಅವರ ಚಿತ್ರಗಳನ್ನು ಹಂಚಿಕೊಳ್ಳಲಾಗಿಲ್ಲ.

ಇದನ್ನೂ ಓದಿ:ಪ್ರಭಾಸ್​​ಗೆ ಮೊದಲ ಅವಕಾಶ ಕೊಟ್ಟಿದ್ದು ಒಬ್ಬ ಕನ್ನಡಿಗ, ಆಗ ಸಂಭಾವನೆ ಎಷ್ಟು ಗೊತ್ತೆ?

‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಈ ಸಿನಿಮಾನಲ್ಲಿ ದ್ವಿಪಾತ್ರದಲ್ಲಿ ನಟ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ತಾತ ಹಾಗೂ ಮೊಮ್ಮಗನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಸಿನಿಮಾದ ವಿಎಫ್​​ಎಕ್ಸ್ ಕಾರ್ಯ ಪ್ರಭಾಸ್ ಅವರಿಗೆ ತೃಪ್ತಿ ನೀಡದ ಕಾರಣ ಸಿನಿಮಾದ ವಿಎಫ್​​ಎಕ್ಸ್ ಅನ್ನು ಮತ್ತೆ ಮಾಡಿಸಲಾಗಿದ್ದು, ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ತಡ ಆಗಿದೆ ಎನ್ನಲಾಗುತ್ತಿದೆ.

ಇನ್ನು ‘ಸ್ಪಿರಿಟ್’ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ಪ್ರಭಾಸ್ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ವಿವೇಕ್ ಒಬೆರಾಯ್ ಮತ್ತು ಪ್ರಕಾಶ್ ರೈ ಸಹ ನಟಿಸುತ್ತಿದ್ದಾರೆ. ತೃಪ್ತಿ ದಿಮ್ರಿ ಈ ಸಿನಿಮಾದ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ