‘ಸ್ಪಿರಿಟ್’ ಚಿತ್ರಕ್ಕಾಗಿ ಶರ್ಟ್​​ಲೆಸ್ ಆದ ಪ್ರಭಾಸ್; ಸಖತ್ ರಾ ಆಗಿದೆ ಪೋಸ್ಟರ್

ಪ್ರಭಾಸ್ 'ರಾಜಾ ಸಾಬ್' ಹಾರರ್ ಕಾಮಿಡಿ ಚಿತ್ರಕ್ಕೆ ಸಿದ್ಧವಾಗಿದ್ದು, ಮಾರುತಿ ನಿರ್ದೇಶನದ ಈ ಚಿತ್ರ ಸಂಕ್ರಾಂತಿಗೆ ತೆರೆಗೆ ಬರಲಿದೆ. ಇದೇ ವೇಳೆ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರೀಟ್' ಚಿತ್ರದ ಹೊಸ ಪೋಸ್ಟರ್ ವೈರಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್‌ನ ಪೊಲೀಸ್ ಲುಕ್, ತೃಪ್ತಿ ಡಿಮ್ರಿ ಜೊತೆಗಿನ ಕಾಂಬಿನೇಷನ್ ಗಮನ ಸೆಳೆದಿದೆ.

‘ಸ್ಪಿರಿಟ್’ ಚಿತ್ರಕ್ಕಾಗಿ ಶರ್ಟ್​​ಲೆಸ್ ಆದ ಪ್ರಭಾಸ್; ಸಖತ್ ರಾ ಆಗಿದೆ ಪೋಸ್ಟರ್
ಸ್ಪಿರಿಟ್ ಸಿನಿಮಾ

Updated on: Jan 01, 2026 | 10:03 AM

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ‘ರಾಜಾ ಸಾಬ್’ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಮಾರುತಿ ನಿರ್ದೇಶನದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರ ಹಾರರ್ ಕಾಮಿಡಿ ಹಿನ್ನೆಲೆಯಲ್ಲಿ ಸಿದ್ಧವಾಗಿದೆ. ಈ ಚಿತ್ರ ಸಂಕ್ರಾತಿ ಸಂದರ್ಭದಲ್ಲಿ ತೆರೆಗೆ ಬರುತ್ತಿದೆ. ಈ ವೇಳೆ ಪ್ರಭಾಸ್ ನಟನೆಯ ಮುಂದಿನ ಸಿನಿಮಾ ‘ಸ್ಪಿರಿಟ್’ (Spirit Movie) ಲುಕ್ ವೈರಲ್ ಆಗಿದೆ. ಈ ಪೋಸ್ಟರ್ ಸಂಚಲನ ಸೃಷ್ಟಿಸಿದೆ.

ರಾ ಸಿನಿಮಾಗಳನ್ನು ಮಾಡೋ ಕಲೆ ಸಂದೀಪ್ ರೆಡ್ಡಿ ವಂಗಗೆ ಒಲಿದಿದೆ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ಸಿನಿಮಾಗಳಲ್ಲಿ ಇದೇ ಹೈಲೈಟ್ ಆಗಿತ್ತು. ಅವರು ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಿತ್ತು. ಈ ಚಿತ್ರದಲ್ಲಿ ಪ್ರಭಾಸ್ ಅವರದ್ದು ಪೊಲೀಸ್ ಪಾತ್ರ. ಹೊಸ ವರ್ಷದ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಈ ಪೋಸ್ಟರ್​​ನಲ್ಲಿ ಪ್ರಭಾಸ್ ಶರ್ಟ್​​ಲೆಸ್ ಆಗಿ ಕಾಣಿಸಿದ್ದಾರೆ. ಅವರ ಬೆನ್ನು, ಕೈ ಹಾಗೂ ಭುಜಕ್ಕೆ ಬ್ಯಾಂಡೇಜ್ ಹಾಕಲಾಗಿದೆ. ಪ್ರಭಾಸ್​​ ಬಾಯಲ್ಲಿರೋ ಸಿಗರೇಟ್​​ಗೆ ನಟಿ ತೃಪ್ತಿ ದಿಮ್ರಿ ಬೆಂಕಿ ಅಂಟಿಸುತ್ತಿದ್ದಾರೆ. ಪ್ರಭಾಸ್ ಉದ್ದನೆಯ ಕೂದಲು ಗಮನ ಸೆಳೆಯುತ್ತಿದೆ. ಈ ಸಿನಿಮಾ ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದು ಕೆಲವೇ ಸಿನಿಮಾ ಆದರೂ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅವರು ಈ ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆಯುವ ಭರವಸೆಯಲ್ಲಿದ್ದಾರೆ.

ರಣಬೀರ್ ಕಪೂರ್ ಜೊತೆಗಿನ ‘ಅನಿಮಲ್’ ಚಿತ್ರಕ್ಕೆ ತೃಪ್ತಿ ಕೂಡ ನಾಯಕಿ ಆಗಿದ್ದರು. ಅವರು ಆ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಸ್ಪಿರಿಟ್’ ಚಿತ್ರಕ್ಕಾಗಿ ಸಂದೀಪ್ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರ?

ಸಂದೀಪ್ ಅವರು ಸಿನಿಮಾ ಮೇಕಿಂಗ್​​ನಲ್ಲಿ ತರಾತುರಿ ಮಾಡೋದಿಲ್ಲ. ಅವರು ನಿಧಾನಕ್ಕೆ ಸಿನಿಮಾ ಕೆಲಸ ಮಾಡುತ್ತಾರೆ. ಈಗ ‘ಸ್ಪಿರಿಟ್’ ಚಿತ್ರಕ್ಕೆ ಅವರು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.