ಸಿನಿಮಾ ರಿಲೀಸ್​ಗೆ ಕೆಲವೇ ಗಂಟೆಗಳ ಮೊದಲು ಪ್ರಶಾಂತ್ ನೀಲ್ ವಿಶೇಷ ಮನವಿ; ನಡೆಸಿಕೊಡ್ತಾರಾ ಫ್ಯಾನ್ಸ್​?

ಪೈರಸಿ ಮಾಡದಂತೆ ಮತ್ತು ಪೈರಸಿಗೆ ಬೆಂಬಲ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ ಪ್ರಶಾಂತ್​ ನೀಲ್. ಈ ಮೂಲಕ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಲು ಕೋರಿದ್ದಾರೆ.

ಸಿನಿಮಾ ರಿಲೀಸ್​ಗೆ ಕೆಲವೇ ಗಂಟೆಗಳ ಮೊದಲು ಪ್ರಶಾಂತ್ ನೀಲ್ ವಿಶೇಷ ಮನವಿ; ನಡೆಸಿಕೊಡ್ತಾರಾ ಫ್ಯಾನ್ಸ್​?
ಪ್ರಶಾಂತ್ ನೀಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 13, 2022 | 8:24 PM

‘ಕೆಜಿಎಫ್​ 2’ (KGF Chapter 2) ತೆರೆಕಾಣಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಮಧ್ಯ ರಾತ್ರಿಯಿಂದಲೇ ಕರ್ನಾಟಕದಲ್ಲಿ ಹಲವು ಶೋಗಳ ಪ್ರದರ್ಶನ ಆರಂಭಗೊಳ್ಳುತ್ತಿದೆ. ಹಲವು ಚಿತ್ರಮಂದಿರಗಳ ಎದುರಲ್ಲಿ ಯಶ್ (Yash) ಕಟೌಟ್​ಗಳು ತಲೆ ಎತ್ತಿವೆ. ಇವುಗಳ ಮಧ್ಯೆ ಪ್ರಶಾಂತ್ ನೀಲ್ (Prashanth Neel) ಅವರು ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ನಡೆಸಿಕೊಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ. ‘ಕೆಜಿಎಫ್​ 2’ ಅನ್ನೋದು ಒಂದು ದೀರ್ಘ ಪಯಣ. ಈ ಚಿತ್ರಕ್ಕಾಗಿ ಪ್ರಶಾಂತ್ ನೀಲ್, ಯಶ್ ಸೇರಿ ಅನೇಕರು ಹಲವು ವರ್ಷಗಳನ್ನು ಮುಡಿಪಿಟ್ಟಿದ್ದಾರೆ. ಪೈರಸಿ ಅನ್ನೋದು ಈ ಶ್ರಮವನ್ನು ಒಂದೇ ಕ್ಷಣದಲ್ಲಿ ಹಾಳುಮಾಡಿ ಬಿಡಬಹುದು. ಈ ಕಾರಣಕ್ಕೆ ಪೈರಸಿ ಮಾಡದಂತೆ ಮತ್ತು ಪೈರಸಿಗೆ ಬೆಂಬಲ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ ಪ್ರಶಾಂತ್​ ನೀಲ್. ಈ ಮೂಲಕ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಲು ಕೋರಿದ್ದಾರೆ.

ಸಿನಿಮಾ ಆರಂಭಗೊಂಡ ನಂತರ ಕೆಲವರು ಫೋಟೋ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು, ಹೀರೋನ ಎಂಟ್ರಿಯನ್ನು ವಿಡಿಯೋ ಮಾಡಿ ಪೋಸ್ಟ್​ ಮಾಡುತ್ತಾರೆ. ಇದು ಕೂಡ ಪೈರಸಿ ಎಂದೇ ಪರಿಗಣಿಸಲ್ಪಡುತ್ತದೆ. ಇದನ್ನು ಕೂಡ ಮಾಡದಂತೆ ಪ್ರಶಾಂತ್ ನೀಲ್ ಮನವಿ ಮಾಡಿಕೊಂಡಿದ್ದಾರೆ.

‘ಪೈರಸಿ ವಿರುದ್ಧದ ಫೈಟ್ ನಿಮ್ಮಿಂದಲೇ ಆರಂಭವಾಗಲಿದೆ. ಸಿನಿಮಾದ ವಿಡಿಯೋ ಹಾಗೂ ಫೋಟೋವನ್ನು ತೆಗೆಯಬೇಡಿ ಮತ್ತು ಆನ್​ಲೈನ್​ನಲ್ಲಿ ಅದನ್ನು ಪೋಸ್ಟ್ ಮಾಡಬೇಡಿ’ ಎಂದು ಬರೆದುಕೊಂಡಿದ್ದಾರೆ ಪ್ರಶಾಂತ್ ನೀಲ್. ಇದರ ಜತೆಗೆ ಹಾಕಿರುವ ಫೋಟೋದಲ್ಲಿ ತಮ್ಮ ಕಷ್ಟದ ಪಯಣದ ಬಗ್ಗೆ ಬರೆದುಕೊಂಡಿದ್ದಾರೆ ಅವರು. ‘ಕೆಜಿಎಫ್​ ಅನ್ನು ನಿಮ್ಮ ಮುಂದಿಡಲು ಆರು ವರ್ಷ ಬೆವರು, ರಕ್ತ ಹಾಗೂ ಕಣ್ಣೀರು ಸುರಿಸಿದ್ದೇವೆ. ಕೆಜಿಎಫ್​ 2 ವೀಕ್ಷಿಸುವಾಗ ವಿಡಿಯೋ ಮಾಡಬೇಡಿ. ಈ ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ’ ಎಂದು ಕೋರಲಾಗಿದೆ.

ತಂತ್ರಜಾನ ಬೆಳೆದಂತೆ, ಪೈರಸಿ ಕೂಡ ಹೆಚ್ಚುತ್ತಿದೆ. ಚಿತ್ರರಂಗಕ್ಕೆ ಪೈರಸಿ ಅನ್ನೋದು ಶಾಪವಾಗಿದೆ. ದೊಡ್ಡ ಬಜೆಟ್​ನ ಚಿತ್ರಗಳು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಮ್, ಟೊರೆಂಟ್​ಗಳಲ್ಲಿ ಥಿಯೇಟರ್ ಪ್ರಿಂಟ್ ಅಪ್​ಲೋಡ್ ಆಗುತ್ತದೆ. ಏಪ್ರಿಲ್​ 13ರಂದು ರಿಲೀಸ್ ಆದ ‘ಬೀಸ್ಟ್’ ಸಿನಿಮಾಗೆ ಪೈರಸಿ ಕಾಟ ಅಂಟಿತ್ತು. ಚಿತ್ರ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್​ಲೈನ್​ನಲ್ಲಿ ಲೀಕ್ ಆಗಿತ್ತು. ಈಗ ‘ಕೆಜಿಎಫ್​ 2’ಗೂ ಅದೇ ಭಯ ಕಾಡಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ಎಡಿಟರ್​ ವಯಸ್ಸು ಕೇವಲ 20 ವರ್ಷ; ಫ್ಯಾನ್​ ಮೇಡ್ ವಿಡಿಯೋ ಮಾಡಿದ್ದಕ್ಕೆ ಸಿಕ್ತು ಚಾನ್ಸ್

ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ