Pramada Oorali Collection: 100 ಕೋಟಿ ರೂಪಾಯಿ ಕಲೆಕ್ಷನ್​​ನತ್ತ ಹೆಜ್ಜೆ ಇಟ್ಟ ‘ಪ್ರೇಮದ ಊರಲಿ’ ಸಿನಿಮಾ

ಪ್ರೇಮದ ಊರಲಿ ಸಿನಿಮಾ ಕಲೆಕ್ಷನ್: ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ 20 ದಿನಗಳಲ್ಲಿ ವಿಶ್ವದಾದ್ಯಂತ 73.96 ಕೋಟಿ ರೂ. ಗಳಿಕೆ ಕಂಡಿದೆ. 100 ಕೋಟಿ ಕ್ಲಬ್ ಸೇರುವ ಹಾದಿಯಲ್ಲಿರುವ ಈ ಚಿತ್ರಕ್ಕೆ ಮುಂಬರಲಿರುವ ‘ಜೈಲರ್ 2’ ಹಾಗೂ ‘ರಣಬಾಲಿ’ ಸಿನಿಮಾಗಳಿಂದ ತೀವ್ರ ಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ.

Pramada Oorali Collection: 100 ಕೋಟಿ ರೂಪಾಯಿ ಕಲೆಕ್ಷನ್​​ನತ್ತ ಹೆಜ್ಜೆ ಇಟ್ಟ ‘ಪ್ರೇಮದ ಊರಲಿ’ ಸಿನಿಮಾ
ಪ್ರೇಮದ ಊರಲಿ
Edited By:

Updated on: Oct 15, 2026 | 2:05 PM

ಮುಖ್ಯಾಂಶಗಳು

  • ಬಾಕ್ಸಾಫೀಸ್‌ನಲ್ಲಿ ‘ಪ್ರೇಮದ ಊರಲಿ’ ಅಬ್ಬರ
  • 20ನೇ ದಿನಕ್ಕೆ 73 ಕೋಟಿ ರೂ. ಗಡಿ ದಾಟಿದ ಕಲೆಕ್ಷನ್
  • ನೂರರ ಹಾದಿಯಲ್ಲಿ ಸಿನಿಮಾ

ಬಾಕ್ಸಾಫೀಸ್‌ನಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತ ಮುನ್ನಡೆಯುತ್ತಿದೆ. ಬಿಡುಗಡೆಯಾಗಿ 20 ದಿನಗಳು ಕಳೆದರೂ ಕೂಡ ಚಿತ್ರದ ಗಳಿಕೆ ಕುಗ್ಗಿಲ್ಲದಿರುವುದು ವಿಶೇಷವಾಗಿದೆ. ಸ್ಯಾಕ್​ನಿಲ್ಕ್ ವರದಿ ಪ್ರಕಾರ, 20ನೇ ದಿನವಾದ ಅಂದರೆ ಅಕ್ಟೋಬರ್ 14ರ ಬುಧವಾರದಂದು ಈ ಸಿನಿಮಾ ಒಟ್ಟು 4.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿದೆ.

‘ಪ್ರೇಮದ ಊರಲಿ’ ಸಿನಿಮಾ ಸೆಪ್ಟೆಂಬರ್ 25ರಂದು ತೆರೆಗೆ ಬಂತು. ಭಾರತದಲ್ಲಿ ಈ ಚಿತ್ರ ಒಟ್ಟು 62.22 ಕೋಟಿ ರೂ ನೆಟ್ ಕಲೆಕ್ಷನ್ ಹಾಗೂ 72.71 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ. ವಿದೇಶದಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಒಟ್ಟು 1.25 ಕೋಟಿ ರೂ. ಗಳಿಸಿದ್ದು, ವಿಶ್ವದಾದ್ಯಂತ ಕಲೆಕ್ಷನ್ 73.96 ಕೋಟಿ ರೂ. ದಾಟಿದೆ.

ಬಾಕ್ಸಾಫೀಸ್‌ನಲ್ಲಿ ಸದ್ಯದ ಈ ಭರ್ಜರಿ ಓಟವನ್ನು ಗಮನಿಸಿದರೆ, ‘ಪ್ರೇಮದ ಊರಲಿ’ ಸಿನಿಮಾ ಶೀಘ್ರದಲ್ಲೇ ಪ್ರತಿಷ್ಠಿತ 100 ಕೋಟಿ ರೂಪಾಯಿ ಕ್ಲಬ್ ಸೇರುವುದು ಖಚಿತ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕ ದಿನಗಳಲ್ಲಿ ನಿಧಾನವಾಗಿ ಸಾಗಿದ ಕಲೆಕ್ಷನ್, ವಾರಗಳು ಕಳೆದಂತೆ ಗಣನೀಯವಾಗಿ ಏರಿಕೆಯಾಗಿರುವುದು ಸಿನಿಮಾದ ಬಲವನ್ನು ತೋರಿಸುತ್ತದೆ.

ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಅಬ್ಬರ: 19ನೇ ದಿನ 4 ಕೋಟಿ ರೂ. ಗಳಿಕೆ

ಆದಾಗ್ಯೂ, ಬಾಕ್ಸಾಫೀಸ್‌ನಲ್ಲಿ ಈ ಚಿತ್ರಕ್ಕೆ ಮುಂಬರುವ ದಿನಗಳಲ್ಲಿ ಬಿಗ್‌ಬಜೆಟ್ ಸಿನಿಮಾಗಳಿಂದ ತೀವ್ರ ಸ್ಪರ್ಧೆ ಎದುರಾಗಲಿದೆ. ಸ್ಟಾರ್ ನಟರ ಸಿನಿಮಾಗಳಾದ ರಜನಿಕಾಂತ್ ಅಭಿನಯದ ‘ಜೈಲರ್ 2’, ‘ರಣಬಾಲಿ’ ಸಿನಿಮಾಗಳು ಥಿಯೇಟರ್‌ಗಳಿಗೆ ಲಗ್ಗೆಯಿಡುತ್ತಿರುವುದರಿಂದ, ‘ಪ್ರೇಮದ ಊರಲಿ’ ಚಿತ್ರದ 100 ಕೋಟಿ ಪಯಣಕ್ಕೆ ಈ ಸಿನಿಮಾಗಳು ಗಂಭೀರ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ಈ ನಡುವೆಯೂ ಪ್ರೇಮದ ಊರಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸುತ್ತದೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:12 pm, Thu, 15 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us