AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದಲ್ಲಿ 50 ವರ್ಷ, ರಜನೀಕಾಂತ್​ಗೆ ಪ್ರಧಾನಿ ಮೋದಿ ಅಭಿನಂದನೆ

Rajinikanth: ಸ್ಟಾರ್ ನಟ ರಜನೀಕಾಂತ್ ಅವರ ‘ಕೂಲಿ’ ಸಿನಿಮಾ ನಿನ್ನೆ (ಆಗಸ್ಟ್ 14) ಬಿಡುಗಡೆ ಆಗಿದೆ. ಇಂದಿಗೆ (ಆಗಸ್ಟ್ 15) ರಜನೀಕಾಂತ್ ಚಿತ್ರರಂಗ ಪ್ರವೇಶಿಸಿದ ಬರೋಬ್ಬರಿ 50 ವರ್ಷಗಳಾಗಿವೆ. ಕಳೆದ 50 ವರ್ಷಗಳಿಂದಲೂ ಅವರು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಕ್ಕೆ ಹಲವಾರು ಮಂದಿ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ.

ಚಿತ್ರರಂಗದಲ್ಲಿ 50 ವರ್ಷ, ರಜನೀಕಾಂತ್​ಗೆ ಪ್ರಧಾನಿ ಮೋದಿ ಅಭಿನಂದನೆ
Rajinikanth Narendra Modi
ಮಂಜುನಾಥ ಸಿ.
|

Updated on: Aug 15, 2025 | 10:07 PM

Share

ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ನಿನ್ನೆಯಷ್ಟೆ (ಆಗಸ್ಟ್ 14) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಅಂದಹಾಗೆ ರಜನೀಕಾಂತ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ (ಆಗಸ್ಟ್ 15) ಸರಿಯಾಗಿ 50 ವರ್ಷಗಳಾದವು. ವಿಶೇಷವೆಂದರೆ ಕಳೆದ 50 ವರ್ಷಗಳಿಂದಲೂ ರಜನೀಕಾಂತ್ ಸ್ಟಾರ್ ಆಗಿಯೇ ಇದ್ದಾರೆ. ಚಿತ್ರರಂಗದಲ್ಲಿ ರಜನೀಕಾಂತ್ 50 ವರ್ಷ ಪೂರೈಸಿದ್ದಕ್ಕೆ ಹಲವಾರು ಮಂದಿ ದಿಗ್ಗಜರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಸಹ ರಜನೀಕಾಂತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ರಜನೀಕಾಂತ್ ಅವರೊಟ್ಟಿಗಿನ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ಚಿತ್ರ ಜಗತ್ತಿನಲ್ಲಿ 50 ವರ್ಷ ಪೂರೈಸಿರುವುದಕ್ಕೆ ಶ್ರೀ ರಜನೀಕಾಂತ್ ಅವರಿಗೆ ಅಭಿನಂದನೆಗಳು. ಅವರ ವೈವಿಧ್ಯಮಯ ಪಾತ್ರಗಳು ವಿವಿಧ ತಲೆಮಾರುಗಳ ಕಾಲ ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ. ಅವರ ಈ ಸಿನಿ ಪ್ರಯಾಣವು ಐತಿಹಾಸಿಕವಾದುದ್ದಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

ಹಲವಾರು ಮಂದಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಸೆಲೆಬ್ರಿಟಿಗಳು ರಜನೀಕಾಂತ್ ಅವರ 50 ವರ್ಷ ಪೂರೈಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. 1975 ರಲ್ಲಿ ಬಿಡುಗಡೆ ಆದ ‘ಅಪೂರ್ವ ರಾಗಂಗಳ್’ ಸಿನಿಮಾ ಮೂಲಕ ರಜನೀಕಾಂತ್ ಚಿತ್ರರಂಗ ಪ್ರವೇಶಿಸಿದರು. ಆ ಸಿನಿಮಾನಲ್ಲಿ ಕಮಲ್ ಹಾಸನ್ ನಾಯಕ, ರಜನೀಕಾಂತ್ ಪ್ರತಿನಾಯಕ. ಆ ಸಿನಿಮಾದಿಂದ ರಜನೀಕಾಂತ್ ಹಿಂತಿರುಗಿ ನೋಡಿದ್ದೇ ಇಲ್ಲ. ಅಂದಿನಿಂದ ಇಂದಿನ ವರೆಗೂ ಸ್ಟಾರ್ ಆಗಿಯೇ ಮೆರೆದಿದ್ದಾರೆ ಇಷ್ಟು ಸುದೀರ್ಘ ಅವಧಿಯ ವರೆಗೆ ಸ್ಟಾರ್ ಆಗಿ ಮೆರೆದ ಮತ್ತೊಬ್ಬ ನಟ ಭಾರತದಲ್ಲಿ ಇರಲಿಕ್ಕಿಲ್ಲ. ಕೂಲಿ ಆಗಿ ಆ ನಂತರ ಬಸ್ ಕಂಡಕ್ಟರ್ ಆಗಿದ್ದ ಸಾಮಾನ್ಯ ಕುಟುಂಬದ ಸಾಮಾನ್ಯ ವ್ಯಕ್ತಿ ಸೂಪರ್ ಸ್ಟಾರ್ ರಜನೀಕಾಂತ್ ಆಗಿ ಬೆಳೆದ ಕತೆ ಭಾರತದ ಕೋಟ್ಯಂತರ ಮಂದಿಗೆ ಸ್ಪೂರ್ತಿ.

ಇದನ್ನೂ ಓದಿ:ರಜನೀಕಾಂತ್ ಅವರನ್ನು ಮಹಾಭಾರತದ ಆ ಪಾತ್ರಕ್ಕೆ ಹೋಲಿಸಿದ ಉಪ್ಪಿ

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಭಾರತದ ಪ್ರಮುಖ ಸಿನಿಮಾ ರಂಗಗಳಲ್ಲಿಯೂ ನಟಿಸಿರುವ ರಜನೀಕಾಂತ್ ಹಲವಾರು ರೀತಿಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಅವರ ನಟನೆಯ ‘ಭಾಷಾ’, ‘ದಳಪತಿ’, ‘ಮುತ್ತು’ ಇನ್ನೂ ಹಲವು ಸಿನಿಮಾಗಳು ಗಳಿಕೆಯಲ್ಲಿ ದಾಖಲೆಗಳನ್ನು ಬರೆದಿವೆ. ನಿನ್ನೆ ಬಿಡುಗಡೆ ಆದ ‘ಕೂಲಿ’ ಸಿನಿಮಾ ಮೊದಲ ದಿನವೇ ಕೋಟ್ಯಂತರ ರೂಪಾಯಿ ಹಣವನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಸಿಕೊಂಡಿದೆ. ಈ ಐವತ್ತು ವರ್ಷಗಳಲ್ಲಿ 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಜನೀಕಾಂತ್ ನಟಿಸಿದ್ದಾರೆ.

ಈಗ ರಜನೀಕಾಂತ್ ಅವರಿಗೆ 74 ವರ್ಷ ವಯಸ್ಸು. ಇಷ್ಟು ವಯಸ್ಸಿನಲ್ಲೂ ಈಗಲೂ ಸಹ ಚುರುಕಾಗಿ ನಟಿಸುತ್ತಾ, ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ತಲೆಮಾರಿನ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ರಜನೀಕಾಂತ್, ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದನ್ನು ಹಲವಾರು ಸೆಲೆಬ್ರಿಟಿಗಳು ಸಂಭ್ರಮಿಸಿದ್ದಾರೆ. ನಟ ಕಮಲ್ ಹಾಸನ್ ಅವರು ಗೆಳೆಯನಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ ಹೆಚ್ಚಿನ ಆರೋಗ್ಯ ಸಿಗಲೆಂದು ಹಾರೈಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?