ಪೃಥ್ವಿರಾಜ್ ಸಿನಿಮಾ ವಿರುದ್ಧ ಮುಂದುವರಿದ ಪ್ರತಿಭಟನೆ; ಅಕ್ಷಯ್ ಕುಮಾರ್ ಪ್ರತಿಕೃತಿ ದಹನ

| Updated By: ಮದನ್​ ಕುಮಾರ್​

Updated on: Jun 18, 2021 | 5:13 PM

ಅಖಿಲ ಭಾರತಿಯ ಕ್ಷತ್ರೀಯ ಮಹಾಸಭಾ ಸಂಘಟನೆಯವರು ಚಂಡೀಗಢದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿನಿಮಾ ಹೆಸರನ್ನು ಬದಲಿಸಬೇಕು ಎನ್ನುವ ಆಗ್ರಹ ಇಟ್ಟಿರುವ ಇವರು, ಅಕ್ಷಯ್​ಕುಮಾರ್​ ಪ್ರತಿಕೃತಿ ದಹನ ಮಾಡಿದ್ದಾರೆ.

ಪೃಥ್ವಿರಾಜ್ ಸಿನಿಮಾ ವಿರುದ್ಧ ಮುಂದುವರಿದ ಪ್ರತಿಭಟನೆ; ಅಕ್ಷಯ್ ಕುಮಾರ್ ಪ್ರತಿಕೃತಿ ದಹನ
ಅಕ್ಷಯ್ ಕುಮಾರ್ ಪ್ರತಿಕೃತಿ ದಹನ
Follow us on

ಅಕ್ಷಯ್​ ಕುಮಾರ್​ ನಟನೆಯ ಪೃಥ್ವಿರಾಜ್​ ಸಿನಿಮಾ ರಿಲೀಸ್​ಗೂ ಮೊದಲೇ ವಿವಾದಕ್ಕೆ ತುತ್ತಾಗಿದೆ. ಟೈಟಲ್​ ಬದಲಿಸಬೇಕು ಎಂದು ಪಟ್ಟು ಹಿಡಿದಿರುವ ಅನೇಕ ಸಂಘಟನೆಗಳು ಈಗ ಸಿನಿಮಾ ವಿರುದ್ಧ ಪ್ರತಿಭಟನೆ ಆರಂಭಿಸಿವೆ. ಅಲ್ಲದೆ, ಅಕ್ಷಯ್​ ಕುಮಾರ್ ಅವರ ಪ್ರತಿಕೃತಿ ದಹನ ಮಾಡಿ, ಆಕ್ರೋಶ ಹೊರ ಹಾಕಿವೆ.

ಪೃಥ್ವಿರಾಜ್ ಚೌಹಾಣ್​​ ಅವರ ಜೀವನ ಆಧರಿಸಿ ಯಶ್​ ರಾಜ್​ ಫಿಲ್ಮ್ಸ್ ನಿರ್ಮಾಣ ಸಂಸ್ಥೆ​ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಪೃಥ್ವಿರಾಜ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ತಿಂಗಳಿಂದ ಸಿನಿಮಾ ಟೈಟಲ್​ ಬದಲಿಸುವಂತೆ ಕರಣಿ ಸೇನಾ ಸೇರಿ ಅನೇಕ ಸಂಘಟನೆಗಳು ಪಟ್ಟು ಹಿಡಿದಿವೆ. ಸಿನಿಮಾದ ಶೀರ್ಷಿಕೆಯನ್ನು, ‘ವೀರ ಯೋಧ ಸಾಮ್ರಾಟ್​ ಪೃಥ್ವಿರಾಜ್ ಚೌಹಾಣ್​’ ಎಂಬುದಾಗಿ ಬದಲಾಯಿಸಬೇಕು ಎನ್ನುವ ಆಗ್ರಹ ಇಡಲಾಗಿದೆ. ಆದರೆ ಇದಕ್ಕೆ ಚಿತ್ರತಂಡ ಒಪ್ಪಿಲ್ಲ.

ಅಖಿಲ ಭಾರತಿಯ ಕ್ಷತ್ರೀಯ ಮಹಾಸಭಾ ಸಂಘಟನೆಯವರು ಚಂಡೀಗಢದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿನಿಮಾ ಹೆಸರನ್ನು ಬದಲಿಸಬೇಕು ಎನ್ನುವ ಆಗ್ರಹ ಇಟ್ಟಿರುವ ಇವರು, ಅಕ್ಷಯ್​ಕುಮಾರ್​ ಪ್ರತಿಕೃತಿ ದಹನ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

2019ರಲ್ಲಿ ಅಕ್ಷಯ್​ ಕುಮಾರ್​ ಈ ಸಿನಿಮಾವನ್ನು ಘೋಷಿಸಿದ್ದರು. 2020ರ ದೀಪಾವಳಿಗೆ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬವಾಗಿದ್ದವು. ನವೆಂಬರ್ 5ರಂದು ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕರಣಿ ಸೇನಾ ವಿಧಿಸಿರುವ ಷರತ್ತುಗಳು: *

  • ಈ ಚಿತ್ರ ತೆರೆಕಾಣುವುದಕ್ಕೂ ಮೊದಲು ಅದನ್ನು ನಮಗೆ ತೋರಿಸಬೇಕು.
  • ಈ ಸಿನಿಮಾವನ್ನು ರಜಪೂತ್​​ ಸಮಾಜದವರಿಗೂ ಪ್ರದರ್ಶಿಸಬೇಕು.
  • ಸಿನಿಮಾದ ಶೀರ್ಷಿಕೆಯನ್ನು, ‘ವೀರ ಯೋಧ ಸಾಮ್ರಾಟ್​ ಪೃಥ್ವಿರಾಜ್ ಚೌಹಾಣ್’ಎಂಬುದಾಗಿ ಬದಲಾಯಿಸಬೇಕು.

ಇದನ್ನೂ ಓದಿ: Viral Photo: ಅಕ್ಷಯ್​ ಕುಮಾರ್​ -ಟ್ವಿಂಕಲ್​ ಖನ್ನಾ ಇಂಟರೆಸ್ಟಿಂಗ್​ ಫೋಟೋ ವೈರಲ್​!