AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಆರಂಭಿಸಿದ್ದ ಹೋಟೆಲ್ ಬಿಸ್ನೆಸ್​ನಿಂದ ಹೊರ ನಡೆದ ನಟಿ ಪ್ರಿಯಾಂಕಾ ಚೋಪ್ರಾ

ನ್ಯೂಯಾರ್ಕ್​ನಲ್ಲಿರುವ ‘ಸೋನಾ’ ರೆಸ್ಟೋರೆಂಟ್​​​ನಲ್ಲಿ ಪ್ರಮುಖವಾಗಿ ಭಾರತದ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಪ್ರಿಯಾಂಕಾ ಚೋಪ್ರಾ ಅವರು ನಡೆಸುತ್ತಿರುವ ರೆಸ್ಟೋರೆಂಟ್ ಎನ್ನುವ ಕಾರಣಕ್ಕೆ ಇದಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಈಗ ಎರಡು ವರ್ಷಗಳ ಬಳಿಕ ಅವರು ಈ ಉದ್ಯಮದಿಂದ ಹೊರ ನಡೆದಿರುವುದಾಗಿ ಘೋಷಿಸಿದ್ದಾರೆ.

ಅಮೆರಿಕದಲ್ಲಿ ಆರಂಭಿಸಿದ್ದ ಹೋಟೆಲ್ ಬಿಸ್ನೆಸ್​ನಿಂದ ಹೊರ ನಡೆದ ನಟಿ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 17, 2023 | 3:05 PM

ಪಾಪ್ ಸಿಂಗರ್ ನಿಕ್ ಜೋನಸ್ (Nick Jonas) ಅವರನ್ನು ಮದುವೆ ಆದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್ ಬಿಟ್ಟು ಅವರು ಹಾಲಿವುಡ್ ಸಿನಿಮಾ ಹಾಗೂ ವೆಬ್​ ಸೀರಿಸ್​ಗಳಲ್ಲಿ ಬ್ಯುಸಿ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಈಗ ಒಂದು ಪ್ರಮುಖ ನಿರ್ಧಾರ ಮಾಡಿದ್ದಾರೆ. ಈ ಮೊದಲು ಆರಂಭಿಸಿದ್ದ ರೆಸ್ಟೋರೆಂಟ್​ (Sona Restaurant) ಬಿಸ್ನೆಸ್​ನಿಂದ ಅವರು ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಇದೆ.

ಸೆಲೆಬ್ರಿಟಿಗಳು ಹೋಟೆಲ್ ಉದ್ಯಮ ನಡೆಸೋದು ಹೊಸದೇನೂ ಅಲ್ಲ. ಸೋನು ಸೂದ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದ ಪ್ರಮುಖ ನಗರವಾದ ನ್ಯೂಯಾರ್ಕ್​ನಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದರು. ಇದಕ್ಕೆ ಸೋನಾ ಎಂದು ಹೆಸರು ಇಡಲಾಗಿತ್ತು. ಉದ್ಯಮಿ ಮನೀಶ್ ಕೆ. ಗೋಯಲ್ ಜೊತೆಗೂಡಿ ಅವರು ಈ ರೆಸ್ಟೋರೆಂಟ್ ಆರಂಭಿಸಿದ್ದರು. ಆದರೆ, ಈಗ ಅವರು ಉದ್ಯಮದಿಂದ ಹೊರ ಬಂದಿದ್ದಾರೆ.

ಹಾಡುವಾಗ ನಿಕ್ ಜೋನಸ್ ಕಡೆ ಬ್ರಾ ಎಸೆದ ಮಹಿಳೆ; ಪ್ರಿಯಾಂಕಾ ಚೋಪ್ರಾ ಪತಿಯ ರಿಯಾಕ್ಷನ್ ಏನು?

2021ರ ಸಂದರ್ಭದಲ್ಲಿ ‘ಸೋನಾ’ ರೆಸ್ಟೋರೆಂಟ್​ ಆರಂಭ ಆಗಿತ್ತು. ನ್ಯೂಯಾರ್ಕ್​ನಲ್ಲಿರುವ ಈ ರೆಸ್ಟೋರೆಂಟ್​​​ನಲ್ಲಿ ಪ್ರಮುಖವಾಗಿ ಭಾರತದ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಪ್ರಿಯಾಂಕಾ ಚೋಪ್ರಾ ಅವರು ನಡೆಸುತ್ತಿರುವ ರೆಸ್ಟೋರೆಂಟ್ ಎನ್ನುವ ಕಾರಣಕ್ಕೆ ಇದಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಈಗ ಎರಡು ವರ್ಷಗಳ ಬಳಿಕ ಅವರು ಈ ಉದ್ಯಮದಿಂದ ಹೊರ ನಡೆದಿರುವುದಾಗಿ ಘೋಷಿಸಿದ್ದಾರೆ. ಆದರೆ, ಇದಕ್ಕೆ ಕಾರಣ ಏನು ಎಂಬುದು ರಿವೀಲ್ ಆಗಿಲ್ಲ. ಬಿಸ್ನೆಸ್ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಈ ರೆಸ್ಟೋರೆಂಟ್​​ಗೂ ಅವರಿಗೂ ಯಾವುದೇ ರೀತಿಯಲ್ಲಿ ಸಂಬಂಧ ಇರುವುದಿಲ್ಲ.

ಪ್ರಿಯಾಂಕಾ ಚೋಪ್ರಾಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ ತಂಗಿ ಪರಿಣೀತಿ

ಪ್ರಿಯಾಂಕಾ ಚೋಪ್ರಾ ಹಾಗೂ ಮನೀಶ್ ಗೋಯಲ್ 2019ರಲ್ಲೇ ನ್ಯೂಯಾರ್ಕ್​ನಲ್ಲಿ ಜಾಗ ನಿಗದಿ ಮಾಡಿದ್ದರು. ಅದನ್ನು ಬಾಡಿಗೆ ತೆದುಕೊಂಡು ಪೂಜಾ ಕಾರ್ಯ ಮಾಡಿದ್ದರು. 2020ರಲ್ಲಿ ಕೊವಿಡ್ ಬಂದಿದ್ದರಿಂದ ಹೋಟೆಲ್ ನಿರ್ಮಾಣ ಕಾರ್ಯ ವಿಳಂಬ ಆಯಿತು. 2021ರ ಮಾರ್ಚ್​ ವೇಳೆಗೆ ರೆಸ್ಟೋರೆಂಟ್ ಆರಂಭ ಆಯಿತು. ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಿಯಾಂಕಾ, ರೆಸ್ಟೋರೆಂಟ್ ಓಪನ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ ಮನೀಶ್ ಅವರಿಗೆ ಧನ್ಯವಾದ ತಿಳಿಸಿದ್ದರು. ಆದರೆ, ಈಗ ಅವರು ಏಕಾಏಕಿ ಈ ಬಿಸ್ನೆಸ್​ನಿಂದ ಹೊರ ನಡೆದಿದ್ದಾರೆ.

ರೆಸ್ಟೋರೆಂಟ್ ಆರಂಭದ ವೇಳೆ ಪ್ರಿಯಾಂಕಾ ಚೋಪ್ರಾ ಮಾಡಿದ್ದ ಟ್ವೀಟ್​:

ಪ್ರಿಯಾಂಕಾ ಚೋಪ್ರಾ ನಟನೆಯ ‘ಸಿಟಾಡೆಲ್’ ಸೀರಿಸ್ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಇತ್ತೀಚೆಗೆ ರಿಲೀಸ್ ಆಯಿತು. ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಪ್ರಿಯಾಂಕಾ ಚೋಪ್ರಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಆರೈಕೆಯಲ್ಲೂ ತೊಡಗಿಕೊಂಡಿದ್ದಾರೆ.