ನ್ಯೂಯಾರ್ಕ್​ನಲ್ಲಿ ಪ್ರಿಯಾಂಕಾ ಚೋಪ್ರಾ ಆರಂಭಿಸಿದ ಐಷಾರಾಮಿ ರೆಸ್ಟೋರೆಂಟ್ ​ಹೇಗಿದೆ ನೋಡಿ

| Updated By: ರಾಜೇಶ್ ದುಗ್ಗುಮನೆ

Updated on: Jun 28, 2021 | 10:33 PM

ಸಾಕಷ್ಟು ಸೆಲೆಬ್ರಿಟಿಗಳು ನಟನೆ ಜತೆಗೆ ಹೋಟೆಲ್​ ಸೇರಿ ಮತ್ತಿತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಟ ಸೋನು ಸೂದ್​ ಸೇರಿ ಸಾಕಷ್ಟು ಸ್ಟಾರ್​ಗಳು ಹೋಟೆಲ್​ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ.

ನ್ಯೂಯಾರ್ಕ್​ನಲ್ಲಿ ಪ್ರಿಯಾಂಕಾ ಚೋಪ್ರಾ ಆರಂಭಿಸಿದ ಐಷಾರಾಮಿ ರೆಸ್ಟೋರೆಂಟ್ ​ಹೇಗಿದೆ ನೋಡಿ
ಪ್ರಿಯಾಂಕಾ ಚೋಪ್ರಾ ಹೋಟೆಲ್​
Follow us on

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನಲ್ಲಿ ಗುರುತಿಸಿಕೊಂಡು ನಂತರ ಹಾಲಿವುಡ್​ಗೆ ಪರಿಚಯಗೊಂಡರು. ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿಯೇ ಸೆಟಲ್​ ಆಗಿದ್ದಾರೆ. ವಿಶೇಷ ಎಂಬಂತೆ ಈಗ ಅವರು ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್​ನಲ್ಲಿ ರೆಸ್ಟೋರೆಂಟ್​ ಒಂದನ್ನು ಆರಂಭಿಸಿದ್ದಾರೆ. ಇದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಸಾಕಷ್ಟು ಸೆಲೆಬ್ರಿಟಿಗಳು ನಟನೆ ಜತೆಗೆ ಹೋಟೆಲ್​ ಸೇರಿ ಮತ್ತಿತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಟ ಸೋನು ಸೂದ್​ ಸೇರಿ ಸಾಕಷ್ಟು ಸ್ಟಾರ್​ಗಳು ಹೋಟೆಲ್​ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ. ಅವರ ಈ ರೆಸ್ಟೋರೆಂಟ್ ​ಉದ್ಯಮ ಕನಸಾಗಿತ್ತಂತೆ.

ಈ ಹೋಟೆಲ್​ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ ಅವರ ಕನಸು ಕೂಡ ಹೌದಂತೆ. ಹೋಟೆಲ್​ ಎದುರು ನಿಂತು ಫೋಟೋ ಹಾಕಿರುವ ಪ್ರಿಯಾಂಕಾ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಸೋನಾದಲ್ಲಿದ್ದೇನೆ ಎಂಬುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. 3 ವರ್ಷದ ಪ್ಲ್ಯಾನಿಂಗ್​ನಿಂದ ಈ ರೆಸ್ಟೋರೆಂಟ್​ ಸಿದ್ಧಗೊಂಡಿದೆ. ಕಿಚನ್​ಗೆ ತೆರಳಿ ತಂಡವನ್ನು ಮೀಟ್ ಮಾಡೋಕೆ ನಾನು ಉತ್ಸುಕಳಾಗಿದ್ದೇನೆ. ಸೋನಾ ಒಂದು ಅದ್ಭುತ ಅನುಭವ. ನನಗಾಗಿ ವಿಶೇಷ ಡೈನಿಂಗ್​ ಹಾಲ್​ ಮಾಡಿಕೊಂಡಿದ್ದೇನೆ. ಇಲ್ಲಿ ಅದ್ಭುತ ಆಹಾರ ಸಿಗಲಿದೆ ಸೋನಾದ ಅನುಭವ ಭಿನ್ನವಾಗಿರಲಿದೆ’ ಎಂದು ಬರೆದುಕೊಂಡಿದ್ದಾರೆ.

ಅಮೆರಿಕದ ಗಾಯಕ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್​ಗಿಂತಲೂ ಹೆಚ್ಚಾಗಿ ಹಾಲಿವುಡ್​ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ. ಹಾಗೆಯೇ ಅಮೆರಿಕದ ಜನರ ಜೊತೆಗೆ ಅವರು ಬೆರೆತುಹೋಗಿದ್ದಾರೆ. ಹಾಗಾಗಿ, ಅಮೆರಿಕದಲ್ಲಿ ಆಚರಿಸಿದ್ದ ‘ನ್ಯಾಷನಲ್​ ಸೆಲ್ಫೀ ಡೇ’ ಪ್ರಿಯಾಂಕಾ ಸಂಭ್ರಮಿಸಿದ್ದರು. ಈಗ ಅವರು ಹೋಟೆಲ್​ ಕೂಡ ಆರಂಭಿಸಿದ್ದಾರೆ.

ಇದನ್ನೂ ಓದಿ: ನಾನು ಮಾಡಿರುವ ಹಲವು ಸಿನಿಮಾಗಳನ್ನು ಜನರು ನೋಡಿಯೇ ಇಲ್ಲ; ಪ್ರಿಯಾಂಕಾ ಚೋಪ್ರಾ

ರಾಷ್ಟ್ರೀಯ ಸೆಲ್ಫೀ ದಿನ; ಇದನ್ನು ಸರಿಯಾಗಿ ಸೆಲೆಬ್ರೇಟ್​ ಮಾಡೋದು ಹೇಗೆ? ಪ್ರಿಯಾಂಕಾ ಚೋಪ್ರಾ ಹೇಳ್ತಾರೆ ಕೇಳಿ