AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಜನರ ಬಗ್ಗೆ ಹೇಳಿಕೆ, ಖ್ಯಾತ ನಟಿಯ ವಿರುದ್ಧ ಪ್ರತಿಭಟನೆ

ಕನ್ನಡ ಸೇರಿದಂತೆ ದಕ್ಷಿಣದ ಹಲವು ಭಾಷೆಗಳಲ್ಲಿ ನಟಿಸಿರುವ ಸ್ಟಾರ್ ನಟಿ ಆಗಿದ್ದ ಕಸ್ತೂರಿ ಶಂಕರ್ ಈಗ ಬಿಜೆಪಿ ವಕ್ತಾರೆ ಸಹ ಆಗಿದ್ದು, ಇತ್ತೀಚೆಗಿನ ಅವರ ಭಾಷಣ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆದಿದ್ದು, ಬಂಧನಕ್ಕೆ ಒತ್ತಾಯ ಕೇಳಿ ಬಂದಿದೆ.

ತೆಲುಗು ಜನರ ಬಗ್ಗೆ ಹೇಳಿಕೆ, ಖ್ಯಾತ ನಟಿಯ ವಿರುದ್ಧ ಪ್ರತಿಭಟನೆ
ಮಂಜುನಾಥ ಸಿ.
|

Updated on: Nov 07, 2024 | 12:38 PM

Share

90ರ ದಶಕದ ದಕ್ಷಿಣ ಭಾರತದ ಸ್ಟಾರ್ ನಟಿ, ಬಿಜೆಪಿ ವಕ್ತಾರೆ ಸಹ ಆಗಿರುವ ಕಸ್ತೂರಿ ಶಂಕರ್ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ತೆಲುಗು ಜನ, ತೆಲುಗು ಚಿತ್ರರಂಗ ಹಾಗೂ ಅಬ್ರಾಹ್ಮರ ವಿರುದ್ಧ ನೀಡಿರುವ ಹೇಳಿಕೆಗಳು ತೀವ್ರ ವಿವಾದ ಸೃಷ್ಟಿಸಿದ್ದು, ತಮಿಳುನಾಡಿನಲ್ಲಿ ಸರ್ಕಾರಿ ನೌಕರರು, ಹಾಗೂ ಡಿಎಂಕೆ ಸದಸ್ಯರು ಕಸ್ತೂರಿ ಶಂಕರ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕಸ್ತೂರಿ ಅವರ ವಿರುದ್ಧ ದೂರು ಸಹ ದಾಖಲಾಗಿದೆ.

ಹಿಂದೂ ಮಕ್ಕಳ್ ಕಚ್ಚಿ ಸಂಘಟನೆ ಚೆನ್ನೈನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗಿಯಾಗಿದ್ದ ಕಸ್ತೂರಿ ಶಂಕರ್, ತಮಿಳುನಾಡಿನಲ್ಲಿ ಬ್ರಾಹ್ಮಣರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ವೀರಾವೇಶದಿಂದ ಮಾತನಾಡಿದ್ದರು. ವೇದಿಕೆ ಭಾಷಣದ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿಯೂ ಭಾಗಿದ್ದ ಕಸ್ತೂರಿ ಶಂಕರ್, ಈ ಸಮಯದಲ್ಲಿ ತಮಿಳುನಾಡಿನಲ್ಲಿರುವ ತೆಲುಗು ಜನ, ಅಬ್ರಾಹ್ಮಣ ಸರ್ಕಾರಿ ನೌಕರರು, ತೆಲುಗು ಚಿತ್ರರಂಗ, ಡಿಎಂಕೆ ರಾಜಕೀಯ ಮುಖಂಡರು, ಪೆರಿಯಾರ್, ವರ್ಣ ಪದ್ಧತಿ, ದಲಿತ ಹೋರಾಟ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದರು.

‘ತಮಿಳಿನ ರಾಜರ ವೇಶ್ಯೆ ಹೆಣ್ಣುಗಳ ಸೇವೆ ಮಾಡಲು ಬಂದ ತೆಲುಗರು ಇಲ್ಲಿಯೇ ನೆಲೆಸಿ ತಮ್ಮನ್ನು ತಾವು ತಮಿಳರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಇವರು ಹೇಗೆ ಬ್ರಾಹ್ಮಣರನ್ನು ತಮಿಳರಲ್ಲ ಎಂದು ಹೇಳಲು ಸಾಧ್ಯ? ಹಾಗಾಗಿಯೇ ಇವರು ‘ತಮಿಳಗ ಮುನ್ನೇತ್ರ ಕಳಗಂ’ ಎಂದು ಹೇಳಲಿಲ್ಲ ಬದಲಿಗೆ ‘ದ್ರಾವಿಡ ಮುನ್ನೇತ್ರ ಕಳಗಂ’ ಎಂದು ಹೇಳುತ್ತಾರೆ’ ಎಂದಿದ್ದರು. ಅಲ್ಲದೆ, ತಾವು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಲೆಂದು ಹೈದರಾಬಾದ್​ಗೆ ವಾಸ್ತವ್ಯ ಬದಲಾಯಿಸಿದ್ದೆ ಆದರೆ ನಾನು ಬ್ರಾಹ್ಮಣ ಸಮುದಾಯದವಳಾದ್ದರಿಂದ ನನಗೆ ಅವಕಾಶಗಳನ್ನು ನಿರಾಕರಿಸಲಾಯ್ತು, ದೊಡ್ಡ ದೊಡ್ಡವರಿಂದಲೇ ನನ್ನ ವಿರುದ್ಧ ಆದೇಶಗಳು ಬರುತ್ತಿದ್ದವು’ ಎಂದಿದ್ದಾರೆ ಕಸ್ತೂರಿ.

ಚಾತುವರ್ಣದ ವಿಷಯವಾಗಿಯೂ ಮಾತನಾಡಿರುವ ಕಸ್ತೂರಿ ಶಂಕರ್, ‘ನಾಲ್ಕು ವರ್ಣಗಳಿಂದ ದಲಿತ, ಆದಿವಾಸಿಗಳನ್ನು ಹೊರಗಿಡಬೇಕು, ಅವರನ್ನು ಅವರ್ಣೀಯರು ಎಂದು ಕರೆಯಬೇಕು’ ಎಂದಿದ್ದರು. ಜಾತಿ ವ್ಯವಸ್ಥೆ ಎಂದಿಗೂ ಅಳಿಯುವುದಿಲ್ಲ, ಅದು ಹಾಗೆಯೇ ಇರುತ್ತದೆ, ಇರಬೇಕು, ಆದರೆ ನಾಲ್ಕು ವರ್ಣಗಳು ಒಟ್ಟಾಗಿ ಒಬ್ಬರೊಟ್ಟಿಗೆ ಒಬ್ಬರು ಒಗ್ಗಟ್ಟಿನಿಂದ ಮುಂದೆ ನಡೆದರೆ ಹಿಂದೂ ಧರ್ಮ ಬೆಳೆಯುತ್ತದೆ’ ಎಂದಿದ್ದರು.

ಇದನ್ನೂ ಓದಿ:ದರ್ಶನ್​ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ

ಕೆಲವು ತಮಿಳು ಸಿನಿಮಾಗಳನ್ನು ಸಹ ಟೀಕೆ ಮಾಡಿದ ಕಸ್ತೂರಿ ಶಂಕರ್, ‘ಪರಿಯೇರುಮ್ ಪೆರುಮಾಳ್’, ‘ಸೂರರೈ ಪೊಟ್ರು’ ಸಿನಿಮಾಗಳಲ್ಲಿ ಮೇಲ್ಜಾತಿಯವರನ್ನು ವಿಲನ್ ರೀತಿ ತೋರಿಸಲಾಗಿದೆ’ ಎಂದಿದ್ದಾರೆ. ಅಲ್ಲದೆ, ಇತ್ತೀಚೆಗೆ ಬಿಡುಗಡೆ ಆದ ‘ಅಮರನ್’ ಸಿನಿಮಾದಲ್ಲಿ ನಾಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎಂಬ ವಿಷಯವನ್ನು ತೋರಿಸಿಯೇ ಇಲ್ಲ’ ಎಂದಿದ್ದಾರೆ. ಅದೇ ಭಾಷಣದಲ್ಲಿ ಬ್ರಾಹ್ಮಣ ಸಮುದಾಯದ ನೌಕರರ ಹೊರತಾಗಿ ಬೇರೆ ಜಾತಿಯ ನೌಕರರು ಲಂಚಕೋರರು ಎಂದು ಸಹ ಹೇಳಿದ್ದಾರೆಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

ನಟಿ, ಬಿಜೆಪಿ ವಕ್ತಾರೆ ಕಸ್ತೂರಿ ಶಂಕರ್ ವಿರುದ್ಧ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಆಕ್ರೋಶ ಹೊರಹಾಕಿದ್ದು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಅಲ್ಲದೆ ತಮಿಳುನಾಡಿನ ಸರ್ಕಾರಿ ನೌಕರರು ಸಹ ಪ್ರತಿಭಟನೆ ನಡೆಸಿದ್ದಾರೆ. ಡಿಎಂಕೆ ಸದಸ್ಯರು ಸಹ ಕಸ್ತೂರಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ಚೆನ್ನೈ ಪೊಲೀಸರು ನಟಿಯ ವಿರುದ್ಧ ಹಿಂಸೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು