AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್’ ಹಿಂದಿಕ್ಕಿದ ‘ಪುಷ್ಪ 2’; ಚಿತ್ರದ ಆಡಿಯೋ ಹಕ್ಕು ಮಾರಾಟ ಆದ ಬೆಲೆ ಕೇಳಿದ್ರೆ ಅಚ್ಚರಿಪಡ್ತೀರಾ

ಈ ಮೊದಲು ರಿಲೀಸ್ ಆದ ‘ಆರ್​ಆರ್​ಆರ್​’ 25 ಕೋಟಿ ರೂಪಾಯಿಗೆ, ‘ಸಾಹೋ ’ 22 ಕೋಟಿ ರೂಪಾಯಿಗೆ ಮಾರಾಟ ಆಗಿದ್ದವು. ಈ ದಾಖಲೆಗಳನ್ನು ‘ಪುಷ್ಪ 2’ ಹಿಂದಿಕ್ಕಿದೆ.

‘ಆರ್​ಆರ್​ಆರ್’ ಹಿಂದಿಕ್ಕಿದ ‘ಪುಷ್ಪ 2’; ಚಿತ್ರದ ಆಡಿಯೋ ಹಕ್ಕು ಮಾರಾಟ ಆದ ಬೆಲೆ ಕೇಳಿದ್ರೆ ಅಚ್ಚರಿಪಡ್ತೀರಾ
ರಶ್ಮಿಕಾ ಮಂದಣ್ಣ
ರಾಜೇಶ್ ದುಗ್ಗುಮನೆ
|

Updated on: May 03, 2023 | 7:25 AM

Share

‘ಪುಷ್ಪ 2’ ಸಿನಿಮಾಗೆ (Pushpa 2 Movie) ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಈ ಚಿತ್ರದ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿತು. ಎರಡನೇ ಪಾರ್ಟ್ ಕೂಡ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿರುವುದರಿಂದ ಸಿನಿಮಾದ ಒಟಿಟಿ ಹಕ್ಕು ಸೇರಿ ಎಲ್ಲಾ ಹಕ್ಕುಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬಂದಿದೆ. ಸಿನಿಮಾದ ಆಡಿಯೋ ಹಕ್ಕು ಮಾರಾಟ ಆದ ಬೆಲೆ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಇದೆ. ಮೈತ್ರಿ ಮೂವೀ ಮೇಕರ್ಸ್ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಮೊದಲ ಪಾರ್ಟ್ ಯಶಸ್ಸು ಕಂಡಿರುವುದರಿಂದ ಎರಡನೇ ಪಾರ್ಟ್​​ನ ಹೆಚ್ಚು ಕಾಳಜಿ ವಹಿಸಿ ಶೂಟಿಂಗ್ ಮಾಡಲಾಗುತ್ತಿದೆ. ಈ ಚಿತ್ರದ ಆಡಿಯೋ ಹಕ್ಕು ಬರೋಬ್ಬರಿ 65 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ವರದಿ ಆಗಿದೆ. ಈ ಮೂಲಕ ಸಿನಿಮಾ ರಿಲೀಸ್​ಗೂ ಮೊದಲೇ ನಿರ್ಮಾಪಕರು ಲಾಭ ಕಂಡಿದ್ದಾರೆ.

ಈ ಮೊದಲು ರಿಲೀಸ್ ಆದ ‘ಬಾಹುಬಲಿ 2’ ಸಿನಿಮಾದ ಆಡಿಯೋ ಹಕ್ಕು 10 ಕೋಟಿ ರೂಪಾಯಿಗೆ, ‘ಆರ್​ಆರ್​ಆರ್​’ 25 ಕೋಟಿ ರೂಪಾಯಿಗೆ, ‘ಸಾಹೋ ’ 22 ಕೋಟಿ ರೂಪಾಯಿಗೆ ಮಾರಾಟ ಆಗಿದ್ದವು. ಈ ದಾಖಲೆಗಳನ್ನು ‘ಪುಷ್ಪ 2’ ಹಿಂದಿಕ್ಕಿದೆ.

ಈ ಚಿತ್ರದ ಹಾಡುಗಳಿಗೆ ಇಷ್ಟೊಂದು ಬೇಡಿಕೆ ಬರೋಕೆ ಕಾರಣವೂ ಇದೆ. ‘ಪುಷ್ಪ’ ಚಿತ್ರದಲ್ಲಿ ದೇವಿಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಕೆಲಸ ಮಾಡಿತ್ತು. ‘ಶ್ರೀವಲ್ಲಿ..’, ‘ಊ ಅಂಟಾವ ಮಾವ..’, ‘ಸಾಮಿ ಸಾಮಿ..’ ಮೊದಲಾದ ಹಾಡುಗಳು ಕಮಾಲ್ ಮಾಡಿದ್ದವು. ಯೂಟ್ಯೂಬ್​ನಲ್ಲಿ ಈ ಹಾಡುಗಳು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿವೆ. ಈ ಕಾರಣಕ್ಕೆ ‘ಪುಷ್ಪ 2’ ಹಾಡುಗಳ ಹಕ್ಕಿಗೆ ಬೇಡಿಕೆ ಸೃಷ್ಟಿ ಆಗಿದೆ.

ಇದನ್ನೂ ಓದಿ: 2023ರ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ‘ಪುಷ್ಪ 2’ಗೆ ಸ್ಥಾನ; ಶಾರುಖ್​ನ ಹಿಂದಿಕ್ಕಿದ ಅಲ್ಲು ಅರ್ಜುನ್

‘ಪುಷ್ಪ 2’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿಯಿಂದ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಲಾಗಿತ್ತು. ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರ ಜೊತೆ ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಪಾರ್ಟ್​ಗಿಂತ ಎರಡನೇ ಪಾರ್ಟ್​ನ ಪಾತ್ರವರ್ಗ ಹಿರಿದಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ