2023ರ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ‘ಪುಷ್ಪ 2’ಗೆ ಸ್ಥಾನ; ಶಾರುಖ್​ನ ಹಿಂದಿಕ್ಕಿದ ಅಲ್ಲು ಅರ್ಜುನ್

ಈ ಪಟ್ಟಿಯಲ್ಲಿ ‘ಪುಷ್ಪ: ದಿ ರೂಲ್​’ (ಹಿಂದಿ) ಇದೆ. ಎರಡನೇ ಸ್ಥಾನದಲ್ಲಿ ‘ಹೇರಾ ಫೇರಿ 3’ ಸಿನಿಮಾ ಇದೆ. ಶಾರುಖ್ ಖಾನ್ ನಟನೆಯ ‘ಜವಾನ್​’ ಮೂರನೇ ಸ್ಥಾನದಲ್ಲಿದೆ.

2023ರ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ‘ಪುಷ್ಪ 2’ಗೆ ಸ್ಥಾನ; ಶಾರುಖ್​ನ ಹಿಂದಿಕ್ಕಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್-ಶಾರುಖ್​-ಸಲ್ಮಾನ್
Follow us
ರಾಜೇಶ್ ದುಗ್ಗುಮನೆ
|

Updated on: Apr 19, 2023 | 11:04 AM

ಭಾರತ ಚಿತ್ರರಂಗ ಎಂದರೆ ಬಾಲಿವುಡ್ ಎನ್ನುವ ಕಾಲ ಒಂದಿತ್ತು. ಆದರೆ, ಇತ್ತೀಚೆಗೆ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್​ನಲ್ಲಿ ಅಬ್ಬರಿಸುತ್ತಿವೆ. ಹಿಂದಿ ಚಿತ್ರಗಳ ಎದುರು ದಕ್ಷಿಣ ಭಾರತದ ಸಿನಿಮಾಗಳು ರಿಲೀಸ್ ಆಗಿ ಗೆದ್ದಿವೆ. ಇತ್ತೀಚಿನ ವರ್ಷಗಳಲ್ಲಿ ರಿಲೀಸ್ ಆದ ‘ಕೆಜಿಎಫ್ 2’, ‘ಕಾಂತಾರ’ (Kantara Movie), ಆರ್​ಆರ್​ಆರ್’ ಸೇರಿ ಅನೇಕ ಸಿನಿಮಾಗಳು ಬಾಲಿವುಡ್ ಮಂದಿಯ ಗಮನ ಸೆಳೆದಿವೆ. ಈಗ 2023ನೇ ಸಾಲಿನ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ‘ಪುಷ್ಪ 2’ (Pushpa 2 Movie) ಮೊದಲ ಸ್ಥಾನದಲ್ಲಿದೆ.

ಒರಮ್ಯಾಕ್ಸ್​ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದೆ. ಬಹುನಿರೀಕ್ಷಿತ ಸಿನಿಮಾಗಳು, ಬೇಡಿಕೆ ಇರುವ ನಟರ ಪಟ್ಟಿಯನ್ನು ಒರಮ್ಯಾಕ್ಸ್ ರಿಲೀಸ್ ಮಾಡುತ್ತದೆ. 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಈ ಪೈಕಿ ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಿನಿಮಾಗಳನ್ನು ಅಲ್ಲು ಅರ್ಜುನ್ ಚಿತ್ರ ಹಿಂದಿಕ್ಕಿದೆ. ದಕ್ಷಿಣ ಭಾರತದ ಮಂದಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಒರಮ್ಯಾಕ್ಸ್ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ‘ಪುಷ್ಪ: ದಿ ರೂಲ್​’ (ಹಿಂದಿ) ಇದೆ. ಎರಡನೇ ಸ್ಥಾನದಲ್ಲಿ ‘ಹೇರಾ ಫೇರಿ 3’ ಸಿನಿಮಾ ಇದೆ. ಶಾರುಖ್ ಖಾನ್ ನಟನೆಯ ‘ಜವಾನ್​’ ಮೂರನೇ ಸ್ಥಾನದಲ್ಲಿದೆ. ‘ಟೈಗರ್ 3’ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಸಲ್ಮಾನ್ ಖಾನ್ ನಟನೆಯ ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ. ಹೀಗಾಗಿ ನಿರೀಕ್ಷೆ ಸೃಷ್ಟಿ ಆಗಿದೆ. ‘ಭೂಲ್ ಭುಲಯ್ಯ 3’ ಸಿನಿಮಾ ಕೂಡ ಈ ಪಟ್ಟಿಯಲ್ಲಿದೆ.

ಇದನ್ನೂ ಓದಿ: Pushpa 2: ಪುಷ್ಪ2 ನಲ್ಲಿ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ಉತ್ತರಿಸಿದ ಚೆಲುವೆ

‘ಪುಷ್ಪ 2’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡೋಕೆ ಸಾಕಷ್ಟು ಕಾರಣಗಳಿವೆ. ‘ಪುಷ್ಪ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಬಾಲಿವುಡ್​ನಲ್ಲೂ ಚಿತ್ರ ಗೆದ್ದು ಬೀಗಿದೆ. ‘ಪುಷ್ಪ’ ಸಿನಿಮಾದ ಮೇಕಿಂಗ್ ಎಲ್ಲರ ಗಮನ ಸೆಳೆದಿದೆ. ಹೀಗಾಗಿ ‘ಪುಷ್ಪ 2’ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇನ್ನು ಸೀಕ್ವೆಲ್​ಗಾಗಿ ದೊಡ್ಡ ಮೊತ್ತದ ಹಣವನ್ನು ಚೆಲ್ಲುವ ಕೆಲಸ ಆಗುತ್ತಿದೆ. ಅಲ್ಲು ಅರ್ಜುನ್ ಬರ್ತ್​ಡೇ ಪ್ರಯುಕ್ತ ರಿಲೀಸ್ ಆದ ಟೀಸರ್ ಹಾಗೂ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ