AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salaar: ಚಿತ್ರೀಕರಣ ಮುಗಿವ ಮುನ್ನವೇ ಆರ್​ಆರ್​ಆರ್ ದಾಖಲೆ ಮುರಿದ ಸಲಾರ್

ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ ಸಲಾರ್ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳುವ ಮುನ್ನವೇ ಭರ್ಜರಿ ಕಲೆಕ್ಷನ್ ಆರಂಭಿಸಿದೆ. ಆರ್​ಆರ್​ಆರ್ ಸಿನಿಮಾದ ದಾಖಲೆಯೊಂದನ್ನು ಈಗಾಗಲೇ ಮುರಿದಿದೆ ಸಲಾರ್.

Salaar: ಚಿತ್ರೀಕರಣ ಮುಗಿವ ಮುನ್ನವೇ ಆರ್​ಆರ್​ಆರ್ ದಾಖಲೆ ಮುರಿದ ಸಲಾರ್
ಸಲಾರ್
ಮಂಜುನಾಥ ಸಿ.
|

Updated on: Apr 06, 2023 | 9:39 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಟಾಪ್​ನಲ್ಲಿರುವುದು ಪ್ರಭಾಸ್​ (Prabhas) ನಟನೆಯ ಸಲಾರ್ (Salaar) ಸಿನಿಮಾ. ಕಳೆದ ಎರಡು ವರ್ಷದಿಂದಲೂ ಸಿನಿಮಾದ ಚಿತ್ರೀಕರಣ (Shooting) ನಡೆಯುತ್ತಿದ್ದು, ಪ್ರಶಾಂತ್ ನೀಲ್ (Prashant Neel) ಸಲಾರ್​ಗಾಗಿ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಶುರುವಾಗಿದ್ದು, ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಭಾರಿ ಮೊತ್ತದ ಆಫರ್​ಗಳು ಸಿನಿಮಾಕ್ಕಾಗಿ ಬರುತ್ತಿದ್ದು, ಈಗಾಗಲೇ ಆರ್​​ಆರ್​ಆರ್ (RRR) ಸಿನಿಮಾದ ಒಂದು ದಾಖಲೆಯನ್ನು ಮುರಿದಾಗಿದೆ ಈ ಸಿನಿಮಾ.

ಸಲಾರ್ ಸಿನಿಮಾದ ಚಿತ್ರೀಕರಣ ಇನ್ನೇನು ಕೊನೆಯ ಹಂತದಲ್ಲಿದ್ದು ಸಿನಿಮಾದ ಚತ್ರೀಕರಣ ಮುಗಿಯುವ ಮುನ್ನವೇ ಸಿನಿಮಾದ ಹಕ್ಕುಗಳ ಖರೀದಿಗೆ ದೊಡ್ಡ ದೊಡ್ಡ ವಿತರಕರು, ಸಂಸ್ಥೆಗಳು ನಿರ್ಮಾಪಕರ ಮೇಲೆ ಮುಗಿಬೀಳುತ್ತಿವೆ. ಕೆಲವು ಮೂಲಗಳ ಪ್ರಕಾರ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕನ್ನು ಈಗಾಗಲೇ ನಿರ್ಮಾಪಕ ವಿಜಯ್ ಕಿರಗಂದೂರು ಮಾರಾಟ ಮಾಡಿದ್ದಾರೆ ಅದೂ ದಾಖಲೆಯ ಮೊತ್ತಕ್ಕೆ!

ಸಲಾರ್ ಸಿನಿಮಾದ ಓವರ್​ಸೀಸ್ ಬಿಡುಗಡೆ ಹಕ್ಕನ್ನು ಬರೋಬ್ಬರಿ 90 ಕೋಟಿಗೆ ಮಾರಾಟ ಮಾಡಲಾಗಿದೆಯಂತೆ. ದಕ್ಷಿಣ ಭಾರತದ ಇನ್ಯಾವುದೇ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ವಿದೇಶದಲ್ಲಿ ಮೋಡಿ ಮಾಡಿದ ಇತ್ತೀಚೆಗಿನ ತೆಲುಗು ಸಿನಿಮಾ ಆರ್​ಆರ್​ಆರ್​ನ ವಿದೇಶಿ ಬಿಡುಗಡೆ ಹಕ್ಕು ಸಹ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ಆರ್​ಆರ್​ಆರ್ ಸಿನಿಮಾದ ಓವರ್​ಸೀಸ್ ಹಕ್ಕು ಮಾರಾಟವಾಗಿದ್ದು 70 ಕೋಟಿ ರುಪಾಯಿಗೆ. ಇದು ಈವರೆಗಿನ ದೊಡ್ಡ ಮೊತ್ತವಾಗಿತ್ತು. ಆದರೆ ಸಲಾರ್ ಸಿನಿಮಾದ ಓವರ್​ಸೀಸ್ ಹಕ್ಕು 90 ಕೋಟಿಗೆ ಮಾರಾಟವಾಗಿದೆ.

ಈ ಸಿನಿಮಾದ ಡಿಜಿಟಲ್, ಒಟಿಟಿ ಹಾಗೂ ಹಿಂದಿ ವಿತರಣೆ ಹಕ್ಕಿಗೆ ಭಾರಿ ಡಿಮ್ಯಾಂಡ್ ಇದ್ದು, ಹಿಂದಿ ಡಬ್ಬಿಂಗ್ ಬಿಡುಗಡೆ ಹಕ್ಕುಗಳೇ ಸುಮಾರು 200 ಕೋಟಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಕರ್ನಾಟಕದ್ದೇ ಆದ ಹೊಂಬಾಳೆ ಫಿಲಮ್ಸ್​ನವರೇ ಸಲಾರ್ ಸಿನಿಮಾದ ನಿರ್ಮಾಪಕರಾದ್ದರಿಂದ ಕರ್ನಾಟಕದಲ್ಲಿ ಅವರೇ ವಿತರಣೆ ಮಾಡಲಿದ್ದಾರೆ. ಆಂಧ್ರ-ತೆಲಂಗಾಣದಲ್ಲಿ ಪ್ರಭಾಸ್ ಒಡೆತನದ ಯುವಿ ಕ್ರಿಯೇಷನ್ಸ್ ನವರು ವಿತರಣೆ ಮಾಡುವ ಸಾಧ್ಯತೆ ಇದೆ. ಇನ್ನು ತಮಿಳುನಾಡು ಹಾಗೂ ಕೇರಳ ರಾಜ್ಯದ ವಿತರಣೆ ಹಕ್ಕು ಯಾರ ಪಾಲಾಗುತ್ತದೆ ಕಾದು ನೋಡಬೇಕಿದೆ.

ಇನ್ನು ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು ಈ ಸಿನಿಮಾ ಸಹ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಎರಡೂ ಭಾಗಗಳ ಚಿತ್ರೀಕರಣವನ್ನು ಒಮ್ಮೆಲೆ ಮುಗಿಸಿರುವ ಕಾರಣ ಸಿನಿಮಾ ತಡವಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನೂ ಖಾತ್ರಿ ಇಲ್ಲ. ನಟ ಯಶ್ ಸಹ ಈ ಸಿನಿಮಾದ ಅತಿಥಿ ಪಾತ್ರದಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಇನ್ನು ಸಲಾರ್​ನಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು ಕನ್ನಡದ ಕೆಲವು ನಟರು ಸಹ ಪ್ರಭಾಸ್ ಜೊತೆ ನಟಿಸಿದ್ದಾರೆ. ಸಿನಿಮಾವು ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ