AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ‘ಮಿಷನ್​: ಚಾಪ್ಟರ್​ 1’ ಟೀಸರ್​? ಕನ್ನಡದಲ್ಲೂ ಬರಲಿದೆ ಈ ಸಾಹಸಮಯ ಸಿನಿಮಾ

Mission Chapter 1 Teaser: ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ‘ಮಿಷನ್​: ಚಾಪ್ಟರ್​ 1’ ಸಿನಿಮಾ ಬಿಡುಗಡೆ ಆಗಲಿದೆ. ಈ ಎಲ್ಲ ಭಾಷೆಯಲ್ಲೂ ಟೀಸರ್​ ಅನಾವರಣ ಆಗಿದೆ.

ಹೇಗಿದೆ ‘ಮಿಷನ್​: ಚಾಪ್ಟರ್​ 1’ ಟೀಸರ್​? ಕನ್ನಡದಲ್ಲೂ ಬರಲಿದೆ ಈ ಸಾಹಸಮಯ ಸಿನಿಮಾ
ಅರುಣ್ ವಿಜಯ್
ಮದನ್​ ಕುಮಾರ್​
|

Updated on: Apr 07, 2023 | 7:15 AM

Share

ಭಾರತೀಯ ಚಿತ್ರರಂಗದಲ್ಲಿ ಈಗ ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಚಾಲ್ತಿಯಲ್ಲಿದೆ. ಎಲ್ಲ ಸ್ಟಾರ್​ ಹೀರೋಗಳು ಕೂಡ ಬಹುಭಾಷೆಯಲ್ಲಿ ಸಿನಿಮಾ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ. ಕಾಲಿವುಡ್​ ನಟ ಅರುಣ್​ ವಿಜಯ್​ (Arun Vijay) ಕೂಡ ಈ ಸಾಲಿನಲ್ಲಿದ್ದಾರೆ. ಅವರು ಅಭಿನಯಿಸಿರುವ ‘ಮಿಷನ್​: ಚಾಪ್ಟರ್​ 1’ (Mission: Chapter 1) ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರವನ್ನು ಎಂ. ರಾಜಶೇಖರ್ ಹಾಗೂ ಎಸ್. ಸ್ವಾತಿ ಅವರು ನಿರ್ಮಿಸಿದ್ದಾರೆ. ಕಾಲಿವುಡ್ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್​’ (Lyca Productions) ಮೂಲಕ ‘ಮಿಷನ್​: ಚಾಪ್ಟರ್​ 1’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈಗ ಈ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಇದರಲ್ಲಿ ಅರುಣ್ ವಿಜಯ್ ಅವರ ಭರ್ಜರಿ ಆ್ಯಕ್ಷನ್​ ಗಮನ ಸೆಳೆದಿದೆ. ಜೊತೆಗೆ ಸೆಂಟಿಮೆಂಟ್​ ಕಹಾನಿ ಕೂಡ ಸಿನಿಮಾದಲ್ಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ.

ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ‘ಮಿಷನ್​: ಚಾಪ್ಟರ್​ 1’ ಸಿನಿಮಾ ಬಿಡುಗಡೆ ಆಗಲಿದೆ. ಈ ಎಲ್ಲ ಭಾಷೆಯಲ್ಲೂ ಟೀಸರ್​ ಅನಾವರಣ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಂಡನ್ ಜೈಲೊಂದರಲ್ಲಿ ಈ ಸಿನಿಮಾದ ಬಹುಪಾಲು ಕಥೆ ನಡೆಯುತ್ತಿದೆ. ಅದರ ಝಲಕ್​ ಟೀಸರ್​ನಲ್ಲಿ ಕಾಣಿಸಿದೆ. ಜೈಲಿನಲ್ಲಿ ನಡೆಯುವ ರೋಚಕ ತಿರುವುಗಳು, ಜೈಲು ಅಧಿಕಾರಿಯಾಗಿ ಆಮಿ‌ ಜಾಕ್ಸನ್ ಅಬ್ಬರದ ಜೊತೆ ಹೊಡೆದಾಟದ ದೃಶ್ಯಗಳು ಆ್ಯಕ್ಷನ್​ ಪ್ರಿಯರ ಕಣ್ಮನ ಸೆಳೆದಿದೆ. ಅಲ್ಲದೇ, ಅಪ್ಪ-ಮಗಳ ಬಾಂಧವ್ಯ ಕೂಡ ಟೀಸರ್​ನಲ್ಲಿ ಕೌತುಕ ಮೂಡಿಸಿದೆ.

ಇದನ್ನೂ ಓದಿ: Dasara Movie Collection: 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ದಸರಾ’; ಮೊದಲ ಬಾರಿ ಶತಕೋಟಿ ಕ್ಲಬ್​ ಸೇರಿದ ನಾನಿ

ಇದನ್ನೂ ಓದಿ
Image
Dasara Movie Teaser: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್​; ನಾನಿ ರಗಡ್​ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ
Image
Dasara Movie Teaser: ‘ದಸರಾ’ ಟೀಸರ್​ ಝಲಕ್​ ತೋರಿಸ್ತಾರೆ ರಕ್ಷಿತ್​ ಶೆಟ್ಟಿ; ನಾನಿ ಚಿತ್ರಕ್ಕೆ ಸ್ಟಾರ್​ ನಟರ ಸಾಥ್​
Image
‘ಕನ್ನಡಕ್ಕೆ ಡಬ್​ ಮಾಡಲ್ಲ, ಕನ್ನಡಿಗರು ತೆಲುಗಿನಲ್ಲೇ ನೋಡ್ತಾರೆ’; ಟಾಲಿವುಡ್​​ ನಟ ನಾನಿ ಹೇಳಿಕೆಗೆ ಕರುನಾಡು ಗರಂ
Image
ಯಾವ ಚಿತ್ರವೂ ಗೆಲ್ಲುತ್ತಿಲ್ಲ, ಆದ್ರೂ ಈ ನಟಿಗೆ ಸಿಕ್ತಿದೆ ಒಳ್ಳೆಯ ಆಫರ್​; ಇಲ್ಲಿದೆ ಕೀರ್ತಿ ಸುರೇಶ್​ ಸೀಕ್ರೇಟ್​

ವಿಜಯ್​ ಅವರು ‘ಮಿಷನ್​: ಚಾಪ್ಟರ್​ 1’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಇಂಡಿಯನ್’, ‘2.0’, ‘ಕೈದಿ 150’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಸುಭಾಸ್ಕರನ್​ ​ಅವರು ಈಗ ‘ಪೊನ್ನಿಯಿನ್​ ಸೆಲ್ವನ್​ 2’, ‘ಇಂಡಿಯನ್​ 2’ ಮುಂತಾದ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ವಿತರಣೆಯಲ್ಲೂ ಅವರ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆ ಮುಂಚೂಣಿಯಲ್ಲಿದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ‘ಮಿಷನ್​: ಚಾಪ್ಟರ್​ 1’ ಸಿನಿಮಾವನ್ನು ಈ ಸಂಸ್ಥೆಯೇ  ರಿಲೀಸ್ ಮಾಡಲಿದೆ.

ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೀಸರ್​ನಲ್ಲಿ ಕಾಣಿಸಿರುವ ದೃಶ್ಯಗಳ ಮೇಕಿಂಗ್​ ಅದ್ದೂರಿಯಾಗಿದೆ. ಸಂದೀಪ್​ ಕೆ. ವಿಜಯ್​ ಅವರು ಛಾಯಾಗ್ರಹಣ, ಆಂಥೋನಿ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅರುಣ್​ ವಿಜಯ್​ ಹಾಗೂ ಆಮಿ ಜಾಕ್ಸನ್​ ಜೊತೆ ನಿಮಿಷಾ ಸಜಯನ್​, ಭರತ್​ ಭೋಪಣ್ಣ, ಅಭಿ ಹಾಸನ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.