AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾನಲ್ಲಿ ‘ಪುಷ್ಪ 2’ ಬಿಡುಗಡೆಗೆ ಸಮಸ್ಯೆ, ಕಾರಣ ‘ಕಲ್ಕಿ’

Pushpa 2: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಹಲವು ದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೆನಡಾನಲ್ಲಿ ಬಿಡುಗಡೆ ಮಾಡಲು ಸಮಸ್ಯೆ ಎದುರಿಸುತ್ತಿದೆ ಅದಕ್ಕೆ ‘ಕಲ್ಕಿ’ ಕಾರಣ.

ಕೆನಡಾನಲ್ಲಿ ‘ಪುಷ್ಪ 2’ ಬಿಡುಗಡೆಗೆ ಸಮಸ್ಯೆ, ಕಾರಣ ‘ಕಲ್ಕಿ’
ಮಂಜುನಾಥ ಸಿ.
|

Updated on: Nov 12, 2024 | 4:14 PM

Share

‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನ ಉಳಿದಿವೆ. ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾರಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಸಿನಿಮಾವನ್ನು ಸಾಧ್ಯವಾದಷ್ಟು ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ‘ಪುಷ್ಪ 2’ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅಮೆರಿಕ, ದುಬೈಗಳ ಜೊತೆಗೆ ಜಪಾನ್, ರಷ್ಯಾಗಳಲ್ಲಿಯೂ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ ಚಿತ್ರತಂಡ ಆದರೆ ಕೆನಡಾನಲ್ಲಿ ‘ಪುಷ್ಪ 2’ ಸಿನಿಮಾಕ್ಕೆ ಚಿತ್ರತಂಡ ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಕಾರಣ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ.

ಈ ಹಿಂದೆ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಭಾರತ ಸೇರಿದಂತೆ ಅಮೆರಿಕ ಇನ್ನಿತರೆ ದೇಶಗಳಲ್ಲಿಯೂ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಕೆನಡಾನಲ್ಲಿಯೂ ‘ಕಲ್ಕಿ’ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೆ ಅಂತಿಮ ಸಮಯದಲ್ಲಿ ಕೆನಡಾದ ಹಲವು ಚಿತ್ರಮಂದಿರಗಳು ‘ಕಲ್ಕಿ 2898 ಎಡಿ’ ಸಿನಿಮಾದ ಶೋ ಅನ್ನು ರದ್ದು ಮಾಡಿದರು. ಇದು ಪ್ರೇಕ್ಷಕರ ನಿರಾಶೆಗೆ ಕಾರಣವಾಗಿತ್ತು. ಸಿನಿಮಾ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯ್ತಾದರೂ ಸಹ ಆ ನಂತರದ ಶೋಗಳನ್ನು ರದ್ದು ಮಾಡಲಾಗಿತ್ತು.

ಆ ಸಮಯದಲ್ಲಿ ಸಿನಿಮಾ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರ ನಡುವೆ ವಿವಾದ ಏರ್ಪಟ್ಟಿತ್ತು. ವಿತರಕ ಹಾಗೂ ಚಿತ್ರಮಂದಿರಗಳ ನಡುವೆ ಕೆನಡಾನಲ್ಲಿ ವ್ಯವಹಾರದ ರೀತಿ ಭಿನ್ನವಾಗಿದ್ದು, ಚಿತ್ರಮಂದಿರಗಳ ಮಾಲೀಕರಿಗೆ ಮುಂಚಿತವಾಗಿ ನಿಗದಿತ ಹಣವನ್ನು ಸಿನಿಮಾ ಪ್ರದರ್ಶನಕ್ಕೆ ಮುಂಚಿತವಾಗಿ ನೀಡಬೇಕಿತ್ತು ಹಾಗೂ ಕೆಲವು ಒಪ್ಪಂದಗಳು ಸಹ ಆಗಬೇಕಿತ್ತು. ಆದರೆ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಕೆನಡಾನಲ್ಲಿ ಬಿಡುಗಡೆ ಮಾಡಿದ ವಿತರಕರು ಇವುಗಳನ್ನು ಅನುಸರಿಸಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳು ಶೋ ಅನ್ನು ರದ್ದು ಮಾಡಿದವು.

ಇದನ್ನೂ ಓದಿ:‘ಪುಷ್ಪ 2’ ಟ್ರೇಲರ್​ ಬಗ್ಗೆ ಸಿಹಿ ಸುದ್ದಿ ನೀಡಿದ ಅಲ್ಲು ಅರ್ಜುನ್​; ನ.17ಕ್ಕೆ ಕಾತರ

ಕಳೆದ ಬಾರಿ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಮಾಡದೆ ಆದ ನಷ್ಟದಿಂದಾಗಿ ಅಸಮಾಧಾನಗೊಂಡಿರುವ ಕೆನಡಾದ ಚಿತ್ರಮಂದಿರ ಮಾಲೀಕರು ಹಾಗೂ ಚಿತ್ರಮಂದಿರ ಚೈನ್​ನವರು ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಸಮಸ್ಯೆ ಒಡ್ಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ‘ಪುಷ್ಪ 2’ ಸಿನಿಮಾವನ್ನು ಕೆನಡಾನಲ್ಲಿ ಬಿಡುಗಡೆ ಮಾಡಲು ಕೆಲವು ಕಠಿಣ ನಿಯಮಗಳನ್ನು ವಿತರಕರು ಪಾಲಿಸಬೇಕೆಂದು ಸಹ ಹೇಳುತ್ತಿದ್ದಾರೆ. ಇದರಿಂದಾಗಿ ‘ಪುಷ್ಪ 2’ ಚಿತ್ರತಂಡ ಸಮಸ್ಯೆ ಎದುರಿಸುತ್ತಿದೆ.

ಅಮೆರಿಕದಲ್ಲಿ ತೆಲುಗು ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ವಿಶೇಷವಾಗಿ ಉತ್ತರ ಅಮೆರಿಕದಲ್ಲಿ ತೆಲುಗು ಸಿನಿಮಾಗಳು ಅದ್ಧೂರಿ ಕಲೆಕ್ಷನ್ ಮಾಡುತ್ತವೆ. ಇಂಗ್ಲೀಷ್ ಸಿನಿಮಾಗಳ ಬಳಿಕ ಉತ್ತರ ಅಮೆರಿಕದಲ್ಲಿ ಭಾರಿ ಕಲೆಕ್ಷನ್ ಮಾಡುವ ಸಿನಿಮಾಗಳೆಂದರೆ ಅದು ತೆಲುಗು ಸಿನಿಮಾಗಳು. ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ಮಾಡುತ್ತವೆ. ಹಾಗಾಗಿ ‘ಪುಷ್ಪ 2’ ಚಿತ್ರತಂಡ ಅಮೆರಿಕ, ಕೆನಡಾ ಇನ್ನಿತರೆಗಳಲ್ಲಿ ಸಿನಿಮಾ ಬಿಡುಗಡೆಗೆ ಹೆಚ್ಚಿನ ಶ್ರಮ ತೊಡಗಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ