
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದರು. ಅಂಥವರಿಗೆಲ್ಲ ಶುಭ ಸಮಾಚಾರ ಸಿಕ್ಕಿದೆ. ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬದ ಸಲುವಾಗಿ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಅದನ್ನು ತಿಳಿಸುವ ಸಲುವಾಗಿ ಇಂದು (ಏಪ್ರಿಲ್ 5) ಚಿಕ್ಕ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಏಪ್ರಿಲ್ 8ರಂದು ಅಲ್ಲು ಅರ್ಜುನ್ ಬರ್ತ್ಡೇ (Allu Arjun Birthday) ಆಚರಿಸಲು ಅಭಿಮಾನಿಗಳು ಕಾದಿದ್ದಾರೆ. ಅದಕ್ಕೂ ಒಂದು ದಿನ ಮುನ್ನ ಅಂದರೆ, ಏಪ್ರಿಲ್ 7ರ ಸಂಜೆ 4 ಗಂಟೆ 5 ನಿಮಿಷಕ್ಕೆ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಗಲಿದೆ.
‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಯಿತು. ಈಗ ‘ಪುಷ್ಪ 2’ ಚಿತ್ರ ಕೂಡ ಅದ್ದೂರಿಯಾಗಿ ತಯಾರಾಗುತ್ತಿದೆ. ಬಹುಭಾಷೆಯಲ್ಲಿ ಫಸ್ಟ್ ಗ್ಲಿಂಪ್ಸ್ ಅನಾವರಣ ಮಾಡಲು ಸಕಲ ಸಿದ್ಧತೆ ನಡೆದಿದೆ. ಈ ಮೊದಲು ಯೂಟ್ಯೂಬ್ನಲ್ಲಿ ಬಹುಭಾಷೆಯ ಆಡಿಯೋ ಆಯ್ಕೆ ಇರಲಿಲ್ಲ. ಪ್ರತಿ ಭಾಷೆಯ ಕಾಂಟೆಂಟ್ಗಳನ್ನು ಪ್ರತ್ಯೇಕವಾಗಿ ಅಪ್ಲೋಡ್ ಮಾಡಬೇಕಿತ್ತು. ಆದರೆ ಈಗ ಮಲ್ಟಿ ಆಡಿಯೋ ಆಯ್ಕೆಯ ಅವಕಾಶ ನೀಡಲಾಗಿದೆ. ‘ಪುಷ್ಪ 2’ ಗ್ಲಿಂಪ್ಸ್ ಕೂಡ ಅದೇ ರೀತಿಯಲ್ಲಿ ಬಿಡುಗಡೆ ಆಗಲಿದೆ ಎಂಬುದು ವಿಶೇಷ.
ಈಗ ಬಿಡುಗಡೆ ಆಗಿರುವ ಚಿಕ್ಕ ವಿಡಿಯೋದಲ್ಲಿ ಕಥೆ ಬಗ್ಗೆ ಸಣ್ಣ ಸುಳಿವು ನೀಡಲಾಗಿದೆ. ‘ಗುಂಡಿನಿಂದ ಗಾಯಗೊಂಡಿರುವ ಪುಷ್ಪರಾಜ್ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಈಗ ಎಲ್ಲಿದ್ದಾನೆ ಪುಷ್ಪ?’ ಎಂಬ ಹಿನ್ನೆಲೆ ಧ್ವನಿ ಈ ವಿಡಿಯೋದಲ್ಲಿದೆ. ಆ ಮೂಲಕ ಕಥೆಯ ಬಗ್ಗೆ ಚಿತ್ರತಂಡ ಕೌತುಕ ಸೃಷ್ಟಿ ಮಾಡಿದೆ. ಪುಷ್ಪರಾಜ್ ಜೈಲಿಗೆ ಹೋಗುವಂತಾಗಿದ್ದು ಹೇಗೆ? ಅಲ್ಲಿಂದ ತಪ್ಪಿಸಿಕೊಳ್ಳಲು ಆತ ಮಾಡಿದ ಸಾಹಸ ಎಂಥದ್ದು? ಇತ್ಯಾದಿ ವಿವರಗಳನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್ ನಟ
ಸುಕುಮಾರ್ ಅವರು ‘ಪುಷ್ಪ 2’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಮುಂತಾದವರು ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಅದ್ದೂರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಅಲ್ಲು ಅರ್ಜುನ್ ಅವರ ಜನ್ಮದಿನದ ಪ್ರಯುಕ್ತ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಗಲಿರುವುದರಿಂದ ಅಭಿಮಾನಿಗಳಿಗೆ ಈ ಬಾರಿ ತಮ್ಮ ನೆಚ್ಚಿನ ನಟನ ಬರ್ತ್ಡೇ ಸಖತ್ ವಿಶೇಷವಾಗಿರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.