‘ಪುಷ್ಪ’ ಐಟಂ ಸಾಂಗ್​ನಲ್ಲಿ ಹಾಟ್ ಆಗಿ ಮಿಂಚಿದ ಸಮಂತಾ; ಇಲ್ಲಿದೆ ವಿಶೇಷ ಹಾಡು

ಸಮಂತಾ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಈ ಹಾಡಿನಲ್ಲಿ ಸಮಂತಾ ಅವರ ಕೆಲ ಫೋಟೋಗಳನ್ನು ಹಾಕಲಾಗಿದೆ. ಅವರ ಲುಕ್ ಮಾದಕವಾಗಿದೆ. ಈ ವಿಶೇಷ ಹಾಡು ಇಂದು ರಿಲೀಸ್​ ಆಗಿದೆ.

‘ಪುಷ್ಪ’ ಐಟಂ ಸಾಂಗ್​ನಲ್ಲಿ ಹಾಟ್ ಆಗಿ ಮಿಂಚಿದ ಸಮಂತಾ; ಇಲ್ಲಿದೆ ವಿಶೇಷ ಹಾಡು
ಸಮಂತಾ
Edited By:

Updated on: Dec 10, 2021 | 8:21 PM

ಸಮಂತಾ ಟಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ತೆರೆಗೆ ಬಂದ ನಂತರದಲ್ಲಿ ಬಾಲಿವುಡ್​ನಿಂದಲೂ ಸಾಕಷ್ಟು ಆಫರ್​ಗಳು ಅವರನ್ನು ಅರಸಿ ಬರುತ್ತಿವೆ. ಈಗ ‘ಪುಷ್ಪ’ ಸಿನಿಮಾದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇಂದು (ಡಿಸೆಂಬರ್ 10) ರಿಲೀಸ್​ ಆಗಿದೆ. ಸಮಂತಾ ಲುಕ್​ ವೈರಲ್​ ಆಗಿದೆ. ಅವರ ಹಾಟ್​ ಅವತಾರ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ಐಟಂ ಸಾಂಗ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಂಭಾವನೆ ವಿಚಾರದ ಬಗ್ಗೆ ಚಿತ್ರತಂಡದಿಂದಾಗಲೀ ಸಮಂತಾ ಕಡೆಯಿಂದಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಅವರು ಪಡೆಯುತ್ತಾರೆ ಎನ್ನಲಾದ ಸಂಭಾವನೆ ಮೊತ್ತ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಐಟಂ ಸಾಂಗ್​ನಲ್ಲಿ ನಟಿಸಲು ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಸುದ್ದಿ ಹರಡಿದೆ. ಹೀಗಿರುವಾಗಲೇ ಈ ಹಾಡಿನ ಪೋಸ್ಟರ್​ ಒಂದನ್ನು ರಿಲೀಸ್​ ಮಾಡಲಾಗಿದೆ.

‘ಓ ಅಂತಾವ..’ ಸಾಂಗ್​ ರಿಲೀಸ್​ ಆಗಿದೆ. ಸಮಂತಾ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಈ ಹಾಡಿನಲ್ಲಿ ಸಮಂತಾ ಅವರ ಕೆಲ ಫೋಟೋಗಳನ್ನು ಹಾಕಲಾಗಿದೆ. ಅವರ ಲುಕ್ ಮಾದಕವಾಗಿದೆ. ಈ ವಿಶೇಷ ಹಾಡು ಇಂದು ರಿಲೀಸ್​ ಆಗಿದೆ. ಈ ಸಾಂಗ್​ ನೋಡಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಫೋಟೋದಲ್ಲಿ ಅವರು ಇಷ್ಟು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಅವರು ಹೆಜ್ಜೆ ಹಾಕಿರುವ ಸಂಪೂರ್ಣ ಹಾಡು ಇನ್ನು ಹೇಗೆ ಇರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ.

ಇದನ್ನೂ ಓದಿ: ಸಮಂತಾ ವಾಟ್ಸಾಪ್​ ಸಂದೇಶದ ಸ್ಕ್ರೀನ್​ಶಾಟ್​ ಬಹಿರಂಗ; ಅರೆಬರೆ ಮುಚ್ಚಿಟ್ಟು ನಟಿ ಹೇಳಿದ್ದೇನು?

Filmfare OTT Awards 2021: ಫಿಲ್ಮ್​ಫೇರ್​ ಓಟಿಟಿ ಅವಾರ್ಡ್ಸ್​: ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡು ಮಿಂಚಿದ ಸಮಂತಾ, ಪ್ರತೀಕ್​ ಗಾಂಧಿ