ಸಿನಿಮಾ ಪ್ರೇಮಿಗಳ ದಿನದ ಪ್ರಯುಕ್ತ ಏಪ್ರಿಲ್ 19ರಂದು ಭರ್ಜರಿ ಆಫರ್ ನೀಡಲಾಗಿದೆ. ಪಿವಿಆರ್-ಐನಾಕ್ಸ್ (PVR-INoX) ಸೇರಿ ಅನೇಕ ಮಲ್ಟಿಪ್ಲೆಕ್ಸ್ ಚೈನ್ಗಳು ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ಕಲ್ಪಿಸಿವೆ. ಇದನ್ನು ಸಿನಿಪ್ರಿಯರು ಉಪಯೋಗಿಸಿಕೊಳ್ಳಬಹುದು. ತಮ್ಮಿಷ್ಟದ ಸಿನಿಮಾಗಳನ್ನು ಮಲ್ಟಿಪ್ಲೆಕ್ಸ್ನಲ್ಲಿ ಕಡಿಮೆ ದರದಲ್ಲಿ ನೋಡಬಹುದು. ಏಪ್ರಿಲ್ 19ರಂದು ಹಿಂದಿಯಲ್ಲಿ ‘ಲವ್ ಸೆಕ್ಸ್ ಔರ್ ದೋಖಾ’ ಹಾಗೂ ‘ದೋ ಔರ್ ದೋ ಪ್ಯಾರ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾಗಳಿಗೆ ಬೆನಿಫಿಟ್ ಆಗಲಿದೆ.
ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡೋದು ದುಬಾರಿ ಎಂಬುದು ಅನೇಕರ ಅಭಿಪ್ರಾಯ. ಹೀಗಾಗಿ, ಸಾಮಾನ್ಯರು ಎಲ್ಲಾ ಸಿನಿಮಾಗಳನ್ನು ಇಲ್ಲಿ ನೋಡೋಕೆ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಈ ಕಾರಣದಿಂದಲೇ ಆಗಾಗ ಮಲ್ಟಿಪ್ಲೆಕ್ಸ್ಗಳು ಆಫರ್ ನೀಡುತ್ತವೆ. ಈ ಮೊದಲು 2022ರ ಸೆಪ್ಟೆಂಬರ್ನಲ್ಲಿ ‘ನ್ಯಾಷನಲ್ ಸಿನಿಮಾ ಡೇ’ ಪ್ರಯುಕ್ತ 75 ರೂಪಾಯಿ ಟಿಕೆಟ್ ಆಫರ್ ನೀಡಲಾಯಿತು. ಅದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಆ ಬಳಿಕ ಈ ಪದ್ಧತಿ ಮುಂದುವರಿದಿದೆ.
2023ರಲ್ಲಿ ‘ಸಿನಿಮಾ ಲವರ್ಸ್ ಡೇ’ ಆಚರಿಸಲಾಗಿತ್ತು. ಆಗಲೂ ಜನರು ಮುಗಿಬಿದ್ದು ಮಲ್ಟಿಪ್ಲೆಕ್ಸ್ಗೆ ಆಗಮಿಸಿದ್ದರು. ಈಗ ಮತ್ತದೇ ಆಫರ್ನೊಂದಿಗೆ ಪಿವಿಆರ್-ಐನಾಕ್ಸ್ ಆಗಮಿಸುತ್ತಿದೆ. ಒಂದೊಮ್ಮೆ ಈ ವರ್ಷ ಸಿನಿಮಾಗೆ ಮೆಚ್ಚುಗೆ ಸಿಕ್ಕರೆ ಮುಂದಿನ ವರ್ಷವೂ ಇದನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ತೆಲುಗಿನಲ್ಲಿ ಮ್ಯಾಜಿಕ್ ಮಾಡುತ್ತಾ ‘ಮಂಜುಮ್ಮೇಲ್ ಬಾಯ್ಸ್’? ಕನ್ನಡದಲ್ಲಿ ಯಾವಾಗ?
ಮಲಯಾಳಂನಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಲವ್ ಸೆಕ್ಸ್ ಔರ್ ದೋಖಾ 2’ ರಿಲೀಸ್ ಆಗುತ್ತಿದೆ. ವಿದ್ಯಾ ಬಾಲನ್ ಹಾಗೂ ಪ್ರತಿಕ್ ಗಾಂಧಿ ನಟನೆಯ ‘ದೋ ಔರ್ ದೋ ಪ್ಯಾರ್’ ಕೂಡ ಬಿಡುಗಡೆ ಆಗಲಿದೆ. ಹಿಂದಿಯ ‘ಬಡೇ ಮಿಯಾ ಚೋಟೆ ಮಿಯಾ’ ಹಾಗೂ ‘ಮೈದಾನ್’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿಲ್ಲ. ಅವುಗಳಿಗೆ ಈ ಆಫರ್ ಸಹಕಾರಿ ಆಗಲಿದೆ. 3ಡಿ, ಐಮ್ಯಾಕ್ಸ್, 4ಡಿಎಕ್ಸ್ನ ಟಿಕೆಟ್ ಬೆಲೆ 199 ರೂಪಾಯಿಯಿಂದ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ