ಕೆಜಿಎಫ್ ಚಿತ್ರವನ್ನು ಹಾಡಿ ಹೊಗಳಿ ಕನ್ನಡಿಗರ ಮನಗೆದ್ದಿದ್ದ ಯುವ ಯೂಟ್ಯೂಬರ್ ನಿಧನ
youtuber Abhradeep Saha Passes Away: ಸೋಷಿಯಲ್ ಮೀಡಿಯಾ ಲೋಕದಿಂದ ದುಃಖದ ಸುದ್ದಿಯೊಂದು ಬಂದಿದೆ. ಕೆಜಿಎಫ್ ಸಿನಿಮಾವನ್ನು ಅಬ್ಬರಿಸಿ ಹೊಗಳಿ ಕನ್ನಡಿಗರ ಮನ ಗೆದ್ದಿದ್ದ ಯೂಟ್ಯೂಬರ್ ನಿಧನರಾಗಿದ್ದಾರೆ. ಹೌದು...ಬಾಲಿವುಡ್ ಟೀಕಿಸಿ ಯಶ್ ಅಭಿನಯದ ಕೆಜಿಎಫ್ ಸಿನಿಮಾವನ್ನು ಹಾಡಿಗೊಗಳಿದ್ದ ಯುವ ಯೂಟ್ಯೂಬರ್ 27ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ
ಜನಪ್ರಿಯ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ದವಾಗಿದ್ದ ಅಭ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್‌ಮ್ಯಾನ್ ನಿಧನರಾಗಿದ್ದಾರೆ. ಕ್ರಿಕೆಟ್, ಫುಟ್ಬಾಲ್ ಕ್ರೀಡೆ ಹಾಗೂ ಸಿನಿಮಾ ವಿಶ್ಲೇಷಕರಾಗಿ ಕನ್ನಡಿಗರ ಮನ ಗೆದ್ದಿದ್ದ ಯುವ ಯೂಟ್ಯೂಬರ್ ಅಭ್ರದೀಪ್ ಸಾಹಾ (youtuber abhradeep saha) ಆ್ಯಂಗ್ರಿ ರ‍್ಯಾಂಟ್ ಮ್ಯಾನ್ ಎಂಬ ಯೂಟ್ಯೂಬ್ ಚಾನೆಲ್ (Angry rantman YouTube) ಮೂಲಕ ಹಲವಾರು ವಿಡಿಯೋಗಳನ್ನು ಮಾಡುತ್ತಿದ್ದರು. ಆದ್ರೆ, ಅನಾರೋಗ್ಯದ ಕಾರಣ ಅಭ್ರದೀಪ್ ಸಾಹಾ 27ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ(Bengaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ಸಾಹಾ ಅವರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಇತ್ತೀಚೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿರಲಿಲ್ಲ. ಜೊತೆಗೆ, ನಿಧಾನವಾಗಿ ಅವರಲ್ಲಿ ಬಹು ಅಂಗಾಂಗ ವೈಫಲ್ಯದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹೀಗಾಗಿ ಮಗನ ಆರೋಗ್ಯದ ಬಗ್ಗೆ ಏ. 15ರಂದು ತಂದೆ ಟ್ವೀಟ್ ಮಾಡಿ, ಅಭ್ರದೀಪ್ ಅವರ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದ್ದು, ಅಭಿಮಾನಿಗಳು ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡಬೇಕಷ್ಟೇ ಎಂದು ಬರೆದುಕೊಂಡಿದ್ದರು. ಅದರೆ, ತಂದೆ ಟ್ವೀಟ್ ಮಾಡಿದ ಮರುದಿನವೇ ಸಾಹಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ರನ್ ವೇನಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್ ಬಂಧನ
ಆ್ಯಂಗ್ರಿ ರ‍್ಯಾಂಟ್ ಮ್ಯಾನ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಹಲವಾರು ವಿಡಿಯೋಗಳನ್ನು ಮಾಡುತ್ತಿದ್ದ ಸಾಹಾ, 2018ರಲ್ಲಿ ತೆರೆಕಂಡಿದ್ದ ಯಶ್ ಅಭಿನಯದ ಕೆಜಿಎಫ್ 1 ಹಾಗೂ 2022ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಬಗ್ಗೆ ಹಾಡಿ ಹೊಗಳಿದ್ದರು. ಈ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.
ಕೇವಲ ಸಿನಿಮಾ ಮಾತ್ರವಲ್ಲದೇ ಫುಟ್ಬಾಲ್, ಕ್ರಿಕೆಟ್ ಪಂದ್ಯಗಳು, ಹಾಲಿವುಡ್ ಸಿನಮಾಗಳು ಸೇರಿದಂತೆ ಹಲವಾರು ರಂಗಗಳ ಬಗ್ಗೆ ವಿಶ್ಲೇಷಿಸುವುದು ಅವರ ಹವ್ಯಾಸವಾಗಿತ್ತು. ಅದನ್ನೇ ಅವರು ವಿಡಿಯೋ ಮಾಡಿ ತಮ್ಮ ಆ್ಯಂಗ್ರಿ ರ‍್ಯಾಂಟ್ ಮ್ಯಾನ್ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.