ಪಿವಿಆರ್​ನಲ್ಲಿ ಇನ್ಮುಂದೆ ಇರಲ್ಲ ಜಾಹೀರಾತು? ಹೊಸ ತಂತ್ರಕ್ಕೆ ಮುಂದಾದ ಸಂಸ್ಥೆ

|

Updated on: Apr 25, 2024 | 7:20 AM

ಪಿವಿಆರ್​-ಐನಾಕ್ಸ್​ಗಳಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಇದು ಅನೇಕರಿಗೆ ಕಿರಿಕಿರಿ ಉಂಟು ಮಾಡಿದ್ದಿದೆ. ಈಗ ಇದನ್ನು ಬಂದ್ ಮಾಡಲು ಸಂಸ್ಥೆ ಮುಂದಾಗಿದೆ ಎಂದು ಮನಿ ಕಂಟ್ರೋಲ್ ವೆಬ್​ಸೈಟ್ ವರದಿ ಮಾಡಿದೆ.

ಪಿವಿಆರ್​ನಲ್ಲಿ ಇನ್ಮುಂದೆ ಇರಲ್ಲ ಜಾಹೀರಾತು? ಹೊಸ ತಂತ್ರಕ್ಕೆ ಮುಂದಾದ ಸಂಸ್ಥೆ
ಪಿವಿಆರ್​
Follow us on

ಪಿವಿಆರ್ ಐನಾಕ್ಸ್​ನಲ್ಲಿ (PVR Inox) ಸಿನಿಮಾ ನೋಡಲು ಹೋಗುವವರಿಗೆ ಒಂದು ಸಿಹಿ ಸುದ್ದಿ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಜಾಹೀರು ಪ್ರಸಾರ ಸಂಪೂರ್ಣವಾಗಿ ನಿಲ್ಲಲಿದೆ. ಯಾವುದೇ ಜಾಹೀರಾತಿನ ಕಿರಿಕಿರಿ ಇಲ್ಲದೆ ನೀವು ಸಿನಿಮಾ ನೋಡಬಹುದು. ಹೀಗೊಂದು ಯೋಜನೆಯನ್ನು ಸಂಸ್ಥೆ ರೂಪಿಸುತ್ತಿದೆ. ದಿನದ ಒಟ್ಟಾರೆ ಜಾಹೀರಾತು ಪ್ರದರ್ಶನದ ಅವಧಿಯಲ್ಲಿ ಒಂದು ಶೋನ ಹೆಚ್ಚುವಾರಿಯಾಗಿ ಪ್ರದರ್ಶಿಸಬಹುದು ಅನ್ನೋದು ಸಂಸ್ಥೆಯ ಆಲೋಚನೆ ಎಂದು ವರದಿ ಆಗಿದೆ. ಇದು ನಿಜವೇ ಆದಲ್ಲಿ ಸಿನಿಪ್ರಿಯರಿಗೆ ಖುಷಿ ಪಡಲಿದ್ದಾರೆ.

ಪಿವಿಆರ್​-ಐನಾಕ್ಸ್​ಗಳಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಇದು ಅನೇಕರಿಗೆ ಕಿರಿಕಿರಿ ಉಂಟು ಮಾಡಿದ್ದಿದೆ. ಟಿವಿಗಳಲ್ಲಿ ಜಾಹೀರಾತು ನೋಡಿದಂತೆ ಇಲ್ಲಿಯೂ ನೋಡಬೇಕಲ್ಲ ಎಂದು ಬೈದುಕೊಂಡವರು ಅನೇಕರಿದ್ದಾರೆ. ಈಗ ಇದನ್ನು ಬಂದ್ ಮಾಡಲು ಸಂಸ್ಥೆ ಮುಂದಾಗಿದೆ ಎಂದು ಮನಿ ಕಂಟ್ರೋಲ್ ವೆಬ್​ಸೈಟ್ ವರದಿ ಮಾಡಿದೆ.

ಬೇರೆ ಪ್ಲ್ಯಾನ್ ಏನು?

ಜಾಹೀರಾತು ಪ್ರದರ್ಶನಗಳಿಂದ ಪಿವಿಆರ್​ ಐನಾಕ್ಸ್​ಗೆ ದೊಡ್ಡ ಮಟ್ಟದ ಲಾಭ ಆಗುತ್ತಿದೆ. ಇದನ್ನು ನಿಲ್ಲಿಸಿದರೆ ಮುಂದೇನು ಎನ್ನುವ ಪ್ರಶ್ನೆ ಬರುತ್ತಿದೆ. ಜಾಹೀರಾತಿನ ಬದಲು ಒಂದು ಶೋನ ಹೆಚ್ಚುವರಿಯಾಗಿ ಪ್ರದರ್ಶಿಸಲು ಸಂಸ್ಥೆ ಮುಂದಾಗಿದೆ. ಇದರಿಂದ ಹೆಚ್ಚಿನ ಜನರು ಸಿನಿಮಾ ನೋಡಲು ಬರುತ್ತಾರೆ. ಇದರಿಂದ ಆಹಾರ ಹಾಗೂ ಪಾನೀಯಗಳ ಮಾರಾಟ ಕೂಡ ಹೆಚ್ಚುತ್ತದೆ ಅನ್ನೋದು ಸಂಸ್ಥೆಯ ಆಲೋಚನೆ.  ಇದನ್ನು ಪುಣೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆಯಂತೆ. ನಂತರ ಇದನ್ನು ಇತರ ಕಡೆಗಳಿಗೂ ತರಲು ಸಂಸ್ಥೆ ಆಲೋಚಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭರ್ಜರಿ ಆಫರ್: ಪಿವಿಆರ್-ಐನಾಕ್ಸ್​ನಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ವೀಕ್ಷಿಸಿ

ಇತ್ತೀಚೆಗೆ ಸಿನಿಮಾ ಲವರ್ಸ್ ಡೇ ಪ್ರಯುಕ್ತ 99 ರೂಪಾಯಿ ಟಿಕೆಟ್ ಆಫರ್ ನೀಡಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್​ಗೆ ಬಂದಿದ್ದರು. ಇದರಿಂದ ಸಂಸ್ಥೆಗೆ ಲಾಭ ಆಗಿದೆ. ಫುಡ್ ಹಾಗೂ ಪಾನೀಯಗಳ ಮಾರಾಟ ಕೂಡ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.