ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರ ಮನಸ್ಥಿತಿ ಪ್ರತಿ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ಈಗ ಗೆಳೆಯನಂತೆ ಇರುವವರು ಇನ್ನೊಂದು ಕ್ಷಣಕ್ಕೆ ವೈರಿ ಆಗಬಹುದು. ಮನೆಯಲ್ಲಿ ಸದಾ ಒಟ್ಟಿಗೆ ಇರುವವರು ಎಲಿಮಿನೇಷನ್ಗೆ ಪರಸ್ಪರ ನಾಮಿನೇಟ್ ಮಾಡಬಹುದು. ಈಗ ಇದೇ ವಿಚಾರವನ್ನು ರಘು ಗೌಡ ಮಾತನಾಡಿದ್ದಾರೆ. ಮನೆಯಲ್ಲಿ ಮೂಡ್ಗಳು ಹೇಗೆ ಬದಲಾಗುತ್ತವೆ ಎನ್ನುವುದನ್ನು ಅವರು ಸಂಪೂರ್ಣವಾಗಿ ವಿವರಿಸಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಅವರು ಬಂದು ಒಂದು ವಾರ ಕಳೆದಿದೆ. ನಿಧಾನವಾಗಿ ಎಲ್ಲರ ಜತೆಗೂ ಹೊಂದಿಕೊಳ್ಳುತ್ತಿದ್ದಾರೆ. ಅವರು ಈವರೆಗೆ ಯಾರ ಮೇಲೂ ದ್ವೇಷ ಸಾಧಿಸಿಲ್ಲ, ಜಗಳ ಮಾಡಿಲ್ಲ. ಮನೆಯಲ್ಲಿ ಯಾವುದೇ ಟಾಸ್ಕ್ ನಡೆಯದೇ ಇರುವುದೇ ಇದಕ್ಕೆ ಕಾರಣ ಎನ್ನುವ ವಿಚಾರ ಪ್ರಿಯಾಂಕಾಗೆ ಮನದಟ್ಟಾಗಿದೆ.
ಈ ಬಗ್ಗೆ ಹೇಳಿಕೊಂಡಿರುವ ಪ್ರಿಯಾಂಕಾ, ನಾವು ಎಲ್ಲರೂ ಚೆನ್ನಾಗಿದೇವೆ. ನಾನು ಈ ಮನೆಗೆ ಶೇ. 80 ಹೊಂದಿಕೊಂಡಿದ್ದೇನೆ. ಹಾಸ್ಟೆಲ್ ಆಟದಲ್ಲಿ ಆ್ಯಕ್ಟಿವಿಟಿ ಇಲ್ಲ. ಮುಂದಿನ ಟಾಸ್ಕ್ ಬಂದಾಗ ನನಗೆ ಯಾರ ಜತೆ ಹೇಗೆ ಇರಬೇಕು ಎನ್ನುವುದು ಗೊತ್ತಾಗುತ್ತದೆ ಎಂದರು.
ಈ ವೇಳೆ ಮಾತನಾಡಿದ ರಘು ಗೌಡ, ಟಾಸ್ಕ್ ವೇಳೆ ಯಾರ ಜತೆ ಹೇಗೆ ಇರಬೇಕು ಎನ್ನುವುದನ್ನು ನಿರ್ಧಾರ ಮಾಡೋಕೆ ಸಾಧ್ಯವೇ ಇಲ್ಲ. ಕೆಲವೊಮ್ಮೆ ನಮಗೆ ಕೊಲೆ ಮಾಡಬೇಕು ಅನಿಸುತ್ತಿರುತ್ತದೆ. ಒಂದು ಗಂಟೆ ನಂತರ ಇಬ್ಬರೂ ಗೆಳೆಯರಾಗಿ ಬಿಡುತ್ತೇವೆ ಎಂದು ಹೇಳುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಮೂಡ್ ಹೇಗೆ ಬದಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ರಘು ಗೌಡಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದು ಆರು ತಿಂಗಳ ನಂತರ ಗೊತ್ತಾಗಿತ್ತಂತೆ!