AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಘು ಗೌಡಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದು ಆರು ತಿಂಗಳ ನಂತರ ಗೊತ್ತಾಗಿತ್ತಂತೆ!

ಆರಂಭದಲ್ಲಿ ರಘು ಗೌಡ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ನೆನಪನ್ನು ಹಂಚಿಕೊಂಡಿದ್ದರು. ಈಗ ಅವರ ಖುಷಿಯ ದಿನಗಳು ಅನಾವರಣಗೊಂಡಿದೆ.

ರಘು ಗೌಡಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದು ಆರು ತಿಂಗಳ ನಂತರ ಗೊತ್ತಾಗಿತ್ತಂತೆ!
ರಘು - ಬಿಗ್ ಬಾಸ್​ ಕನ್ನಡ ಸೀಸನ್​ 8
ರಾಜೇಶ್ ದುಗ್ಗುಮನೆ
| Edited By: |

Updated on: Mar 28, 2021 | 3:45 PM

Share

ರಘು ವೈನ್​ ಸ್ಟೋರ್​ ಯೂಟ್ಯೂಬ್​ ಚಾನೆಲ್​ ಮೂಲಕ ಹೆಸರು ಮಾಡಿರುವ ರಘು ಗೌಡ ಬಿಗ್​ ಬಾಸ್​ ಮನೆ ಸೇರಿದ ಕೂಡಲೇ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ, ಮನೆ ಒಳಗೆ ಸೇರಿದ ನಂತರ ಅವರು ಡಲ್​ ಆಗಿದ್ದನ್ನು ನೋಡಿ ಫ್ಯಾನ್ಸ್​ಗೆ ಬೇಸರ ಉಂಟಾಗಿತ್ತು. ಆದರೆ, ಮೂರನೇ ವಾರದಿಂದ ರಘು ಸಂಪೂರ್ಣ ಬದಲಾಗಿದ್ದಾರೆ. ಮನೆಯಲ್ಲಿ ತಾವೂ ನಗುತ್ತಾ ಎಲ್ಲರನ್ನೂ ನಗಿಸುತ್ತಿದ್ದಾರೆ. ಈಗ ಕಿಚ್ಚ ಸುದೀಪ್​ ಎದುರು ರಘು ಗೌಡ ಅಚ್ಚರಿಯ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ. ಆರಂಭದಲ್ಲಿ ರಘು ಗೌಡ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ನೆನಪನ್ನು ಹಂಚಿಕೊಂಡಿದ್ದರು. ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ವಿಚಾರ ಮನೆ ಮಂದಿಯಲ್ಲಿ ಅನೇಕರಿಗೆ ಶಾಕ್​ ನೀಡಿತ್ತು. ಈಗ ಅವರ ಖುಷಿಯ ದಿನಗಳು ಅನಾವರಣಗೊಂಡಿದೆ.

ವೀಕೆಂಡ್​ನಲ್ಲಿ ರಘುಗೆ ನಿಮ್ಮ ಬೆಸ್ಟ್​ ಬ್ರೇಕಪ್​ ಯಾವುದು ಎಂದು ಸುದೀಪ್ ಕೇಳಿದ್ದಾರೆ. ಆಗ ರಘು ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಒಂದು ಹುಡುಗಿ ಜತೆ ರಿಲೇಶನ್​ಶಿಪ್​ನಲ್ಲಿದೆ. ಮೊದಲೆಲ್ಲ ಚೆನ್ನಾಗಿತ್ತು. ಆದರೆ, ಹೀಗೆ ಮಾತುಕತೆ ಕಡಿಮೆ ಆಗ್ತಾ ಬಂತು. ಆದರೆ, ಅವಳು ಬ್ರೇಕಪ್​ ಮಾಡಿಕೊಂಡಿದ್ದಳು ಎನ್ನುವುದು ಗೊತ್ತಿರಲಿಲ್ಲ. ಆರು ತಿಂಗಳ ನಂತರ ಒಮ್ಮೆ ಸಿಕ್ಕಿದ್ದಳು. ಆಗ ಮಾತನಾಡುವಾಗ ಆರು ತಿಂಗಳ ಹಿಂದೆ ಬ್ರೇಕಪ್​ ಆಯ್ತಲ್ಲ. ಆಗ ನಾನು ಹೊಸ ವಿಚಾರ ಕಲಿತುಕೊಂಡೆ ಎಂದು ಆಕೆ ಹೇಳಿದ್ದಳು. ನಾನು ಶಾಕ್​ ಆಗೋದೆ. ನನ್ನ ಸಂಬಂಧ ಮುರಿದು ಬಿದ್ದಿದೆ ಎಂದು ಗೊತ್ತಾಗಿದ್ದು ಆಗಲೇ. ನಾನು 6 ತಿಂಗಳ ಭ್ರಮೆಯಲ್ಲಿದ್ದಿದೆ. ನನಗೆ ಬ್ರೇಕಪ್​ ಆಗಿದೆ ಎನ್ನುವುದೇ ನೆನಪಿರಲಿಲ್ಲ ಎಂದಿದ್ದಾರೆ.

ಈ ವೇಳೆ ಸುದೀಪ್​, ನಿಮ್ಮ ಪತ್ನಿ ವಿದ್ಯಾ ಅವರಿಗೆ ಈ ವಿಚಾರ ಗೊತ್ತಿದೆಯ ಎಂದು ಕೇಳಿದ್ದಾರೆ. ಆಗ ರಘು, ಇಲ್ಲ ಅವಳಿಗೆ ಈ ಬಗ್ಗೆ ಗೊತ್ತಿಲ್ಲ. ವಿದ್ಯಾ ಆಚೆ ಬಂದ ಮೇಲೆ ಮಾತಾಡೋಣ ಎಂದು ಹೇಳುತ್ತಿದ್ದಂತೆ ಸುದೀಪ್​ ನಕ್ಕಿದ್ದಾರೆ. ಆಗ ರಘು, ನನ್ನ ಹೆಂಡತಿ ನನ್ನ ಬಳಿ ಒಮ್ಮೆ ಈ ವಿಚಾರ ಮಾತನಾಡಿದ್ದರು. ನಿನ್ನ ಅಫೇರ್​ ವಿಚಾರ ಹೊರ ಬಂದರೆ, ನಾನು ನಿನ್ನನ್ನು ಸಾಯಿಸಲ್ಲ, ಜೀವನ ಏನು ಎಂಬುದನ್ನು ತೋರಿಸುತ್ತೇನೆ ಎಂದಿದ್ದರು ಎಂದು ರಘು ಹೇಳಿದ್ದಾರೆ.

ಇದನ್ನೂ ಓದಿ: ರಘು-ವಿಶ್ವಗೆ ಬಿಗ್​ ಬಾಸ್​ ಮನೆಯಲ್ಲಿ ಮಾಡುತ್ತಿರುವ ದೊಡ್ಡ ತಪ್ಪಿನ ಅರಿವಾಗಿದೆ!

ವಿಶ್ವ ಚಿಕ್ಕವನಲ್ಲ, ತುಂಬಾನೇ ನಾಟಿ!; ರಘು ಗೌಡ ಬಿಚ್ಚಿಟ್ರು ಬಿಗ್​ ಬಾಸ್ ಬಾಲಕನ ಮತ್ತೊಂದು ಮುಖ

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!