
ಗಾಯಕ ರಾಹುಲ್ ವೈದ್ಯ ಅವರು ಇತ್ತೀಚೆಗೆ ಸುದ್ದಿಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಜೋಕರ್ ಎಂದು ಕರೆದಿದ್ದು ಅಲ್ಲದೆ, ಅವರ ಅಭಿಮಾನಿಗಳನ್ನು ಹೀಯಾಳಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿ ಅವರು ತನ್ನನನ್ನು ಬ್ಲಾಕ್ ಮಾಡಿದ್ದಾಗಿ ಅವರು ಊರಿಡಿ ಹೇಳಿಕೊಂಡು ಬರುತ್ತಿದ್ದಾರೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಷ್ಕಾ ಶರ್ಮಾ (Anushka Sharma) ಅವರಿಗಾಗಿ ಹಾಡು ಹೇಳಿದ್ದ ರಾಹುಲ್ ವೈದ್ಯ, ಅವರ ಕೈಗೆ ಕಿಸ್ ಮಾಡಿದ್ದರು. ಈ ವಿಡಿಯೋನ ಈಗ ಮತ್ತೆ ವೈರಲ್ ಮಾಡಲಾಗುತ್ತಿದೆ. ಈ ಹಳೆಯ ವಿಡಿಯೋ ವಿರಾಟ್ ಅವರನ್ನು ಕೆರಳಿಸಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಈಗ ವೈರಲ್ ಆಗಿರೋ ವಿಡಿಯೋ ತುಂಬಾನೇ ಹಳೆಯದು. ಆಗ ಇನ್ನೂ ವಿರಾಟ್ ಹಾಗೂ ಅನುಷ್ಕಾ ವಿವಾಹ ಆಗಿರಲಿಲ್ಲ. ಆ ಸಂದರ್ಭದಲ್ಲಿ ರಾಹುಲ್ ವೈದ್ಯ ಅವರು ವೇದಿಕೆ ಮೇಲೆ ಅನುಷ್ಕಾ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಹಾಡನ್ನು ಹಾಡಿದ್ದರು. ಆ ಬಳಿಕ ಕೈಗೆ ಕಿಸ್ ಮಾಡಿದ್ದರು. ಅನೇಕರು ಇದನ್ನು ಮೀಮ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ರಾಹುಲ್ ವೈದ್ಯನ ಬ್ಲಾಕ್ ಮಾಡಲು ಈ ಹಳೆಯ ವಿಡಿಯೋ ಕಾರಣ ಎಂದು ಫನ್ ಮಾಡಲಾಗುತ್ತಿದೆ.
ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಅವನೀತ್ ಕೌರ್ ಫೋಟೋನ ಲೈಕ್ ಮಾಡಿ ಸುದ್ದಿ ಆಗಿದ್ದರು. ಆ ಬಳಿಕ ಸ್ಪಷ್ಟನೆ ನೀಡಿದ್ದ ಕೊಹ್ಲಿ ಗ್ಲಿಚ್ನಿಂದ ಲೈಕ್ ಒತ್ತಿ ಹೋಗಿದೆ ಎಂದಿದ್ದರು. ಇದನ್ನು ರಾಹುಲ್ ವೈದ್ಯ ಅವರು ಟೀಕಿಸಿದ್ದರು. ‘ವಿರಾಟ್ ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಬಹುಶಃ ಅದು ಇನ್ಸ್ಟಾಗ್ರಾಮ್ ಗ್ಲಿಚ್ ಇರಬಹುದು’ ಎಂದಿದ್ದರು. ‘ಇನ್ಸ್ಟಾಗ್ರಾಮ್ ವಿರಾಟ್ ಕೊಹ್ಲಿಗೆ ನಿನ್ನ ಪರವಾಗಿ ನಾನು ರಾಹುಲ್ ವೈದ್ಯನ ಬ್ಲಾಕ್ ಮಾಡುತ್ತೀನಿ ಎಂದಿರಬಹುದು’ ಎಂದು ಟೀಕಿಸಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಕೋಡಂಗಿ… ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು!
ಇದಾದ ಬಳಿಕ ರಾಹುಲ್ ಹೋದಲ್ಲಿ, ಬಂದಲ್ಲಿ ವಿರಾಟ್ ಕೊಹ್ಲಿಯನ್ನು ಟೀಕಿಸುತ್ತಲೇ ಬಂದಿದ್ದರು . ‘ನನ್ನ ಇನ್ಸ್ಟಾಗ್ರಾಮ್ ಅಕೌಂಟ್ನಿಂದ ಯಾವುದಾದರೂ ಫೋಟೋ ಲೈಕ್ ಆದರೆ ಅದನ್ನು ತಪ್ಪು ತಿಳಿದುಕೊಳ್ಳಬೇಡಿ. ಅದರ ಬಗ್ಗೆ ಪಿಆರ್ ಕೆಲಸ ಮಾಡಬೇಡಿ. ಅದು ಇನ್ಸ್ಟಾಗ್ರಾಮ್ ಸಮಸ್ಯೆ’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:07 am, Thu, 8 May 25