ಕೊಹ್ಲಿನ ಜೋಕರ್ ಎಂದಿದ್ದ ಗಾಯಕ ರಾಹುಲ್ ವೈದ್ಯಗೆ ಆದ ನಷ್ಟ ಎಷ್ಟು?  

ಗಾಯಕ ರಾಹುಲ್ ವೈದ್ಯ ಅವರು ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ‘ಜೋಕರ್’ ಎಂದು ಕರೆದಿದ್ದಕ್ಕೆ ಸಾಕಷ್ಟು ವಿವಾದ ಉಂಟಾಗಿದೆ. ಕೊಹ್ಲಿ ತಮ್ಮನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಇದರಿಂದ ಬ್ರ್ಯಾಂಡ್ ಡೀಲ್‌ಗಳು ಕೈ ತಪ್ಪಿವೆ ಎಂಬ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಅಭಿಮಾನಿಗಳಿಂದ ತಮ್ಮ ಕುಟುಂಬಕ್ಕೆ ಬೆದರಿಕೆಗಳು ಬಂದಿವೆ ಎಂದೂ ಹೇಳಿದ್ದಾರೆ.

ಕೊಹ್ಲಿನ ಜೋಕರ್ ಎಂದಿದ್ದ ಗಾಯಕ ರಾಹುಲ್ ವೈದ್ಯಗೆ ಆದ ನಷ್ಟ ಎಷ್ಟು?  
ವಿರಾಟ್-ರಾಹುಲ್

Updated on: May 14, 2025 | 3:02 PM

ಗಾಯಕ ರಾಹುಲ್ ವೈದ್ಯ ಅವರು ಇತ್ತೀಚೆಗೆ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಟೀಕೆ ಮಾಡಿದ್ದರು. ಅಷ್ಟೇ ಅಲ್ಲ, ಅವರನ್ನು ಹಾಗೂ ಅವರ ಅಭಿಮಾನಿಗಳನ್ನು ದೊಡ್ಡ ಜೋಕರ್ ಎಂದು ಕರೆದಿದ್ದರು. ಕೊಹ್ಲಿ ತಮ್ಮನ್ನು ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ಕೊಹ್ಲಿನ ಎದುರು ಹಾಕಿಕೊಂಡಿದ್ದಕ್ಕೆ ರಾಹುಲ್​ಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ವಿರಾಟ್ ಕೊಹ್ಲಿ ಅವರೇ ಒಂದು ಬ್ರ್ಯಾಂಡ್ ಆಗಿ ಹೊರ ಹೊಮ್ಮಿದ್ದಾರೆ. ಅವರನ್ನು ಎದುರು ಹಾಕಿಕೊಂಡಿದ್ದರಿಂದ ಬ್ರ್ಯಾಂಡ್ ಡೀಲ್​ಗಳು ರಾಹುಲ್ ಕೈ ತಪ್ಪಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನು ಅನೇಕರು ನಂಬಿದ್ದರು. ಆದರೆ, ಇದು ಸುಳ್ಳು ಎಂದು ರಾಹುಲ್ ವೈದ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ನಾನ್​ಸೆನ್ಸ್​. ಬ್ರ್ಯಾಂಡ್​ಗಳು ಬಿಟ್ಟು ಹೋಗಲು ನಾನೇನು ಇನ್​​ಫ್ಲ್ಯುಯೆನ್ಸರಾ? ಸೆಲೆಬ್ರಿಟಿ ನಾನು. ಈ ರೀತಿ ಹೇಳುವವರು ಯಾವ ನಶೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಆಗಿದ್ದೇನು?

ವಿರಾಟ್ ಕೊಹ್ಲಿ ಅವರು ತಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂಬುದು ರಾಹುಲ್ ಆರೋಪ. ‘ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಇದು ಇನ್​ಸ್ಟಾಗ್ರಾಮ್ ಗ್ಲಿಚ್​ ಇರಬಹುದು. ಇನ್​ಸ್ಟ್ರಾಗ್ರಾಮ್ ಅಲ್ಗೋರಿದಂ ವಿರಾಟ್ ಪರವಾಗಿ ನನ್ನ ಬ್ಲಾಕ್ ಮಾಡಿರಬಹುದು’ ಎಂದು ಅಣಕಿಸಿದ್ದರು.

ವಿರಾಟ್ ವಿರುದ್ಧ ಕೋಪ ಹೊರಹಾಕಿದ ಬೆನ್ನಲ್ಲೇ ಸಿಟ್ಟಿಗೆದ್ದಿದ್ದ ಅವರ ಅಭಿಮಾನಿಗಳು, ರಾಹುಲ್ ವೈದ್ಯ ಪತ್ನಿ, ಸಹೋದರಿಗೆಲ್ಲ ಬಯ್ಯೋಕೆ ಆರಂಭಿಸಿದ್ದರಂತೆ. ಇದರಿಂದ ಬೇಸರಗೊಂಡಿದ್ದ ರಾಹುಲ್ ಅವರು, ‘ನನ್ನನ್ನು, ನನ್ನ ಕುಟುಂಬದವರನ್ನು ನೀವು ಬಯ್ಯುತ್ತಿದ್ದೀರಿ. ನಾನು ಅಂದುಕೊಂಡಿದ್ದು ಸರಿಯಾಗಿದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಜೋಕರ್​’ ಎಂದಿದ್ದರು. ಕೊಹ್ಲಿ ಅವರನ್ನೂ ಜೋಕರ್ ಎಂದು ಕರೆದಿದ್ದರು.

ಇದನ್ನೂ ಓದಿ: ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ ವಿಡಿಯೋ ವೈರಲ್

ರಾಹುಲ್ ವೈದ್ಯ ವಿಚಾರಕ್ಕೆ ಬರೋದಾದರೆ ‘ಬಿಗ್ ಬಾಸ್ ಹಿಂದಿ ಸೀಸನ್ 14’ರ ಸ್ಪರ್ಧಿ ಆಗಿದ್ದರು. ಅವರು ಮೊದಲ ರನ್ನರ್​ ಅಪ್ ಆದರು. ಇದರಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ‘ಇಂಡಿಯನ್ ಐಡಲ್ 13’ಕ್ಕೆ ಅವರು ಅತಿಥಿ ಆಗಿ ಆಗಮಿಸಿದ್ದರು. ಹಲವು ಹಿಂದಿ ಹಾಗೂ ತೆಲುಗು ಹಾಡುಗಳನ್ನು ಅವರು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.