ಸಮಂತಾ ಪತಿಯೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಸಲ್ಮಾನ್ ಖಾನ್

Salman Khan movie: ಈ ಹಿಂದೆ ‘ಮಹರ್ಷಿ’, ‘ಮುನ್ನಾ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ವಂಶಿ ಇದೀಗ ಸಲ್ಮಾನ್ ಖಾನ್​​ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಹ ದಕ್ಷಿಣದ ನಿರ್ದೇಶಕರುಗಳೊಟ್ಟಿಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮುರುಗದಾಸ್ ಜೊತೆಗೆ ‘ಸಿಖಂಧರ್’ ಮಾಡಿದ್ದರು. ಅದು ಫ್ಲಾಪ್ ಆಯ್ತು. ಈಗ ವಂಶಿ ಪೈಡಪಲ್ಲಿ ಜೊತೆ ಕೆಲಸ ಮಾಡುತ್ತಿದ್ದಾರೆ. ಇದಾದ ಬಳಿಕ ಸಮಂತಾರ ಹಾಲಿ ಪತಿಯ ನಿರ್ದೇಶನದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

ಸಮಂತಾ ಪತಿಯೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಸಲ್ಮಾನ್ ಖಾನ್
Salman Raj

Updated on: May 01, 2026 | 11:51 AM

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಸದ್ಯ ತೆಲುಗಿನ ನಿರ್ಮಾಪಕ ದಿಲ್ ರಾಜು ನಿರ್ಮಿಸಿ, ವಂಶಿ ಪೈಡಪಲ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಮಹರ್ಷಿ’, ‘ಮುನ್ನಾ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ವಂಶಿ ಇದೀಗ ಸಲ್ಮಾನ್ ಖಾನ್​​ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಹ ದಕ್ಷಿಣದ ನಿರ್ದೇಶಕರುಗಳೊಟ್ಟಿಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮುರುಗದಾಸ್ ಜೊತೆಗೆ ‘ಸಿಖಂಧರ್’ ಮಾಡಿದ್ದರು. ಅದು ಫ್ಲಾಪ್ ಆಯ್ತು. ಈಗ ವಂಶಿ ಪೈಡಪಲ್ಲಿ ಜೊತೆ ಕೆಲಸ ಮಾಡುತ್ತಿದ್ದಾರೆ. ಇದಾದ ಬಳಿಕ ಸಮಂತಾರ ಹಾಲಿ ಪತಿಯ ನಿರ್ದೇಶನದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

ಸಮಂತಾರ ಪತಿ ರಾಜ್ ಮತ್ತು ಅವರ ಗೆಳೆಯ ಡಿಕೆ ಸಲ್ಮಾನ್ ಖಾನ್ ಅವರಿಗಾಗಿ ಸೂಪರ್ ಹೀರೋ ಕತೆಯುಳ್ಳ ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ‘ರಾಜ್ ಮತ್ತು ಡಿಕೆ’ ಜೋಡಿಯದ್ದು ದೊಡ್ಡ ಹೆಸರು. ಹಲವು ಸಿನಿಮಾಗಳು ಮತ್ತು ಕೆಲವು ಸೂಪರ್ ಹಿಟ್ ವೆಬ್ ಸರಣಿಗಳನ್ನು ಈ ಜೋಡಿ ಈಗಾಗಲೇ ನೀಡಿದೆ. ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ ಅವರು ದಶಕಗಳಿಂದಲೂ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದಲೂ ಅವರು ಕತೆಯೊಂದರ ಮೇಲೆ ಕೆಲಸ ಮಾಡಿದ್ದು, ಕತೆಗೆ ಸಲ್ಮಾನ್ ಖಾನ್ ಅವರೇ ಸೂಕ್ತ ಎಂಬ ಕಾರಣಕ್ಕೆ ಇದೀಗ ಸಲ್ಲು ಜೊತೆಗೆ ರಾಜ್ ಮತ್ತು ಡಿಕೆ ಕೈಜೋಡಿಸಿದ್ದಾರೆ. ಸಲ್ಮಾನ್ ಖಾನ್ ಈ ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ

ರಾಜ್ ಮತ್ತು ಡಿಕೆ ಈ ಹಿಂದೆ ಕೆಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರಾದರೂ ಸೂಪರ್ ಸ್ಟಾರ್ ನಟನೊಟ್ಟಿಗೆ ಮತ್ತು ಇಷ್ಟು ದೊಡ್ಡ ಬಜೆಟ್​​ನ ಸಿನಿಮಾ ನಿರ್ದೇಶಿಸುತ್ತಿರುವುದು ಇದೇ ಮೊದಲಾಗಿದೆ. ಇದು ಕೇವಲ ಸಾಹಸ ಪ್ರಧಾನ ಚಿತ್ರವಲ್ಲದೆ, ರಾಜ್ ಮತ್ತು ಡಿಕೆ ಅವರ ವಿಶಿಷ್ಟ ಶೈಲಿಯ ಹಾಸ್ಯ ಮತ್ತು ವಿನೂತನ ಕಥಾವಸ್ತುವನ್ನು ಹೊಂದಿರಲಿದೆ. ಈ ಸಿನಿಮಾದ ಪ್ರಾಥಮಿಕ ಕೆಲಸಗಳು ಈಗಾಗಲೇ ಆರಂಭವಾಗಿದ್ದು, ಅಕ್ಟೋಬರ್ 2026 ರಿಂದ ಅಧಿಕೃತವಾಗಿ ಚಿತ್ರೀಕರಣ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

2003 ರಿಂದಲೂ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ರಾಜ್ ಮತ್ತು ಡಿಕೆ, ‘99’, ‘ಗೋ ಗಾನ್ ಗೋವಾ’, ‘ಶೋರ್ ಇನ್ ದಿ ಸಿಟಿ’, ‘ಎ ಜಂಟಲ್​​ಮ್ಯಾನ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಬಹಳ ಜನಪ್ರಿಯವಾಗಿರುವ ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಗನ್ಸ್ ಆಂಡ್ ಗುಲಾಬ್ಸ್’, ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗಳನ್ನು ಸಹ ಇವರೇ ನಿರ್ದೇಶಿಸಿದ್ದಾರೆ. ಇದೀಗ ಮೊದಲ ಬಾರಿಗೆ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us