AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ ಬಿ ಶೆಟ್ಟಿಯ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆ

Raj B Shetty movie: ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿಗೆ ನೆರೆಯ ಚಿತ್ರರಂಗಗಳಿಂದಲೂ ಆಫರ್​​ಗಳು ಬರುತ್ತಲೇ ಇವೆ. ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸಿ ಬಂದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ, ಬಾಲಿವುಡ್​​ಗೆ ಸಹ ಕಾಲಿಟ್ಟಿದ್ದು, ಅವರು ನಟಿಸಿರುವ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

ರಾಜ್ ಬಿ ಶೆಟ್ಟಿಯ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆ
Bandar Movie
ಮಂಜುನಾಥ ಸಿ.
|

Updated on: May 21, 2026 | 3:51 PM

Share

ರಾಜ್ ಬಿ ಶೆಟ್ಟಿ (Raj B Shetty) ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ. ಕೆಲವು ಅದ್ಭುತ ಸಿನಿಮಾಗಳನ್ನು ಈಗಾಗಲೇ ಅವರು ನೀಡಿದ್ದಾರೆ. ಒಳ್ಳೆಯ ನಟರೂ ಆಗಿರುವ ರಾಜ್ ಬಿ ಶೆಟ್ಟಿಗೆ ನೆರೆಯ ಚಿತ್ರರಂಗಗಳಿಂದಲೂ ಆಫರ್​​ಗಳು ಬರುತ್ತಲೇ ಇವೆ. ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸಿ ಬಂದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ, ಬಾಲಿವುಡ್​​ಗೆ ಸಹ ಕಾಲಿಟ್ಟಿದ್ದು, ಅವರು ನಟಿಸಿರುವ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

‘ಬಂದರ್’ ಹೆಸರಿನ ಹಿಂದಿ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇಂದು (ಮೇ 21) ಬಿಡುಗಡೆ ಆಗಿದೆ. ‘ಅನಿಮಲ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುವ ಮೂಲಕ ಭಾರಿ ದೊಡ್ಡ ಹೆಸರು ಗಳಿಸಿರುವ ಬಾಲಿವುಡ್​​ನ ಜನಪ್ರಿಯ ನಾಯಕ ಬಾಬಿ ಡಿಯೋಲ್ ‘ಬಂದರ್’ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಭಿನ್ನವಾದ ಸಸ್ಪೆನ್ಸ್ ಕತೆಯನ್ನು ಒಳಗೊಂಡಿದೆ.

ಇಂದು ಬಿಡುಗಡೆ ಆಗಿರುವ ಸಿನಿಮಾದ ಟ್ರೈಲರ್​​ನಲ್ಲಿ ಕತೆಯ ಮುಖ್ಯ ಎಳೆಯನ್ನು ಬಿಟ್ಟುಕೊಡಲಾಗಿದೆ. ಜೊತೆಗೆ ರಾಜ್ ಬಿ ಶೆಟ್ಟಿ ಸಹ ಟ್ರೈಲರ್​​ನಲ್ಲಿ ಹೀಗೆ ಕಂಡು ಹಾಗೆ ಕಣ್ಮರೆ ಆಗುತ್ತಾರೆ. ಟ್ರೈಲರ್​​ ಸೂಚಿಸುತ್ತಿರುವಂತೆ, ಸಿನಿಮಾನಲ್ಲಿ ಬಾಬಿ ಡಿಯೋಲ್ ಸೆಲೆಬ್ರಿಟಿ, ಆತನಿಗೆ ವಯಸ್ಸಾಗಿದೆ ಆದರೆ ಯುವತಿಯರ ಮೇಲೆ ಆಸೆ ಇದೆ. ಬಾಬಿ, ಪ್ರೀತಿಯಲ್ಲಿ ಬೀಳುವ ಒಬ್ಬ ಯುವತಿ ಬಾಬಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುತ್ತಾಳೆ. ಇದರಿಂದ ಬಾಬಿ ಡಿಯೋಲ್ ಜೈಲಿಗೆ ಹೋಗುತ್ತಾರೆ. ಮುಂದೆ ಏನಾಗುತ್ತದೆ ಎಂಬುದು ಕತೆ.

ಇದನ್ನೂ ಓದಿ:ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಲನ್ ಈ ನಟ

ಅಂದಹಾಗೆ ಟ್ರೈಲರ್​​ನಲ್ಲಿ ತೋರಿಸಿರುವಂತೆ ರಾಜ್ ಬಿ ಶೆಟ್ಟಿ ಕೈದಿಯ ಪಾತ್ರದಲ್ಲಿ ನಟಿಸಿದ್ದು, ಜೈಲಿನಲ್ಲಿ ಬಾಬಿ ಡಿಯೋಲ್ ಹಾಗೂ ರಾಜ್ ಬಿ ಶೆಟ್ಟಿ ಭೇಟಿ ಆಗುತ್ತಾರೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ರಾಜ್ ಬಿ ಶೆಟ್ಟಿ ವಿಲಕ್ಷಣವಾಗಿ ನಗುತ್ತಿರುವ ದೃಶ್ಯವಿದೆ. ಕಳೆದ ವಾರ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿ ರಾಜ್ ಬಿ ಶೆಟ್ಟಿ ಜೈಲಿನಲ್ಲಿ ಸಹಕೈದಿಯೊಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿತ್ತು.

‘ಬಂದರ್’ ಸಿನಿಮಾವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಕೆಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಅನುರಾಗ್ ಇದೀಗ ‘ಬಂದರ್’ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾ ಜೂನ್ 5 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ!
ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ!
ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು: ಸಿಟಿ ರವಿ ಏನಂದ್ರು ನೋಡಿ
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು: ಸಿಟಿ ರವಿ ಏನಂದ್ರು ನೋಡಿ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?
ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್
ಇವಾನ್ಸ್ ಹಿಡಿದ ಅತ್ಯದ್ಭುತ ಕ್ಯಾಚ್​​ಗೆ ಶತಕ ವಂಚಿತರಾದ ವೈಭವ್
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
ಯುವಕರೊಂದಿಗೆ ಮೋದಿ ಸಂವಾದ ಹೇಗಿತ್ತು? ವಿದ್ಯಾರ್ಥಿಗಳು ಹೇಳಿದ್ದೇನು?
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
102 ಮೀ. ಉದ್ದದ ಸಿಕ್ಸರ್ ಬಾರಿಸಿದ ವೈಭವ್; ವಿಡಿಯೋ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ
ವಿಕಸಿತ್ ವೈಬ್ರೆಂಟ್‌ ವಿಲೇಜ್‌:ಯುವಕರೊಂದಿಗೆ ಮೋದಿ ಸಂವಾದ ನೇರ ಪ್ರಸಾರ