AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀನ್ಯಾ ವಿದೇಶ ವ್ಯವಹಾರ ಸಚಿವರ ಭೇಟಿಯಾದ ರಾಜಮೌಳಿ

Mahesh Babu-SS Rajamouli: ಮಹೇಶ್ ಬಾಬು ನಟಿಸಿ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಭಾರಿ ಬಜೆಟ್ ಸಿನಿಮಾದ ಚಿತ್ರೀಕರಣ ಕೀನ್ಯಾ ದೇಶದಲ್ಲಿ ನಡೆಯುತ್ತಿದ್ದು. ಇದೀಗ ಶೂಟಿಂಗ್ ಮುಗಿಸಿ ಚಿತ್ರತಂಡ ಭಾರತಕ್ಕೆ ವಾಪಸ್ಸಾಗಿದೆ. ಭಾರತಕ್ಕೆ ಮರಳುವ ಮುಂಚೆ ರಾಜಮೌಳಿ ಹಾಗೂ ಅವರ ಪುತ್ರ ಕಾರ್ತಿಕೇಯ ಅವರುಗಳು ಕೀನ್ಯಾ ದೇಶದ ವಿದೇಶ ವ್ಯವಹಾರ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ್ದಾರೆ. ಕೀನ್ಯಾ ವಿದೇಶ ವ್ಯವಹಾರ ಕಾರ್ಯದರ್ಶಿ ಅವರು ಸುದೀರ್ಘ ಪೋಸ್ಟ್ ಒಂದನ್ನು ಈ ಬಗ್ಗೆ ಹಂಚಿಕೊಂಡಿದ್ದಾರೆ.

ಕೀನ್ಯಾ ವಿದೇಶ ವ್ಯವಹಾರ ಸಚಿವರ ಭೇಟಿಯಾದ ರಾಜಮೌಳಿ
Kenya
ಮಂಜುನಾಥ ಸಿ.
|

Updated on:Sep 03, 2025 | 12:26 PM

Share

ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಸಾಹಸಮಯ ಆಕ್ಷನ್ ಥ್ರಿಲ್ಲರ್ ಆಗಿದ್ದು ವಿಶ್ವದ ನಾನಾ ಪ್ರದೇಶದಲ್ಲಿ ಚಿತ್ರೀಕರಣ ಆಗಲಿದೆ. ಈಗಾಗಲೇ ರಾಜಮೌಳಿ ಹಾಗೂ ತಂಡ ಕೀನ್ಯಾ ದೇಶದಲ್ಲಿ ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಮಾಡಿದೆ. ಕೀನ್ಯಾದ ಶೂಟಿಂಗ್ ಶೆಡ್ಯೂಲ್ ಅಂತ್ಯವಾಗಲಿದ್ದು ಈ ಸಂದರ್ಭದಲ್ಲಿ ಕೀನ್ಯಾದ ವಿದೇಶ ವ್ಯವಹಾರ ಖಾತೆಯ ಕಾರ್ಯದರ್ಶಿ ಮುಸಾಲಿಯಾ ಮುದಾವಾಡಿ ಅವರನ್ನು ರಾಜಮೌಳಿ ಹಾಗೂ ಚಿತ್ರತಂಡದ ಇನ್ನೂ ಕೆಲವರು ಭೇಟಿ ಆಗಿದ್ದಾರೆ.

ಕೀನ್ಯಾದ ವಿದೇಶ ವ್ಯವಹಾರ ಖಾತೆ ಕಚೇರಿಗೆ ಭೇಟಿ ನೀಡಿದ್ದ ರಾಜಮೌಳಿ, ಕಾರ್ತಿಕೇಯ ಹಾಗೂ ಇನ್ನೂ ಕೆಲವರು ಕಾರ್ಯದರ್ಶಿ ಹಾಗೂ ಕಚೇರಿಯ ಇನ್ನೂ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಹಲವು ಸಮಯ ಮಾತುಕತೆ ನಡೆಸಿದ್ದಾರೆ. ಕೀನ್ಯಾದಲ್ಲಿ ಚಿತ್ರೀಕರಣ ಮಾಡಿದ ಅನುಭವದ ಬಗ್ಗೆ ರಾಜಮೌಳಿ ಈ ಸಮಯದಲ್ಲಿ ಮಾತನಾಡಿದ್ದಾಗಿ ಮುಸಾಲಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಾಜಮೌಳಿಯವರ ಭೇಟಿ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕೀನ್ಯಾದ ಕಾರ್ಯದರ್ಶಿ, ‘ಚಿತ್ರರಂಗದಲ್ಲಿ ಎರಡು ದಶಕದ ಅನುಭವ ಹೊಂದಿರುವ ರಾಜಮೌಳಿ ತಮ್ಮ ಅತ್ಯುತ್ತಮ ಕತೆ ಹೇಳುವ ವಿಧಾನದಿಂದ ಜನಪ್ರಿಯರು. ಇದೀಗ ಅವರು ತಮ್ಮ 120 ಮಂದಿಯ ಸಿನಿಮಾ ತಂಡದ ಜೊತೆಗೆ ಪೂರ್ವ ಆಫ್ರಿಕಾದ ಹಲವು ಭಾಗಗಳಲ್ಲಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ನಡೆಸಿದ್ದಾರೆ’ ಎಂದಿದ್ದಾರೆ.

ಮುಂದುವರೆದು ‘ಏಷ್ಯಾನಲ್ಲಿಯೇ ಅತಿ ದೊಡ್ಡ ಸಿನಿಮಾ ಇದಾಗಿದ್ದು, ಕೀನ್ಯಾದ ಅತ್ಯುತ್ತಮ ಪ್ರದೇಶಗಳಾದ ಮಸಾಯಿ ಮಾರಾ, ನಯವಾಶಾ, ಸಂಬಾರು, ಅಂಬೋಸೇಲಿ ಇನ್ನೂ ಕೆಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ಈ ಸಿನಿಮಾ 120ಕ್ಕೂ ಹೆಚ್ಚು ದೇಶಗಳ 100 ಕೋಟಿಗೂ ಹೆಚ್ಚು ಜನರನ್ನು ತಲುಪಲಿದೆ’ ಎಂದು ಬರೆದುಕೊಂಡಿದ್ದಾರೆ.

‘ರಾಜಮೌಳಿ ಅಂಥಹಾ ನಿರ್ದೇಶಕರು ತಮ್ಮ ಸಿನಿಮಾ ಅನ್ನು ಕೀನ್ಯಾನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು ಒಂದು ಐತಿಹಾಸಿಕ ನಿರ್ಣಯವಾಗಿದ್ದು, ಕೀನ್ಯಾ ದೇಶದ ಸುಂದರತೆಗೆ, ಸೌಹಾರ್ದತೆಗೆ, ಆತಿಥ್ಯಕ್ಕೆ ಇದು ಸಾಕ್ಷಿಯಾಗಿದೆ. ಹಾಗೂ ವಿಶ್ವ ಮಟ್ಟದಲ್ಲಿ ಕೀನ್ಯಾದ ಪ್ರಾಮುಖ್ಯತೆಯನ್ನು ಇದು ತೋರಿಸುತ್ತಿದೆ. ಕೀನ್ಯಾದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಭಾರತಕ್ಕೆ ಹಿಂದಿರುಗುತ್ತಿದ್ದು, ‘ಎಸ್​​ಎಸ್​​ಎಂಬಿ29’ ಸಿನಿಮಾ ಮೂಲಕ ಕೀನ್ಯಾದ ಕತೆ ವಿಶ್ವಕ್ಕೆ ತಲುಪಲಿದೆ ಎಂಬ ವಿಷಯವಾಗಿ ಕೀನ್ಯಾ ಹೆಮ್ಮೆ ಪಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 3 September 25

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ