ನಟ ರಜನಿಕಾಂತ್ (Rajinikanth) ಅವರು ಪರದೆ ಮೇಲೆ ಸೂಪರ್ ಸ್ಟಾರ್ ಆಗಿ ಮಿಂಚುತ್ತಾರೆ. ಆದರೆ ರಿಯಲ್ ಲೈಫ್ನಲ್ಲಿ ಸಾಧ್ಯವಾದಷ್ಟು ಸರಳವಾಗಿ ಇರಲು ಅವರು ಬಯಸುತ್ತಾರೆ. ಅದಕ್ಕೆ ಈಗಾಗಲೇ ಅನೇಕ ನಿದರ್ಶನಗಳು ಸಿಕ್ಕಿವೆ. ಈಗ ರಜನಿಕಾಂತ್ ಅವರು ಎಷ್ಟು ಸಿಂಪಲ್ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿ ಆಗಿದೆ. ಆಂದ್ರದ ಕಡಪದಿಂದ ಇಂಡಿಗೋ ವಿಮಾನದ ಸಾಮಾನ್ಯ ದರ್ಜೆಯಲ್ಲಿ (Economy Clasa) ಅವರು ಪ್ರಯಾಣ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ (Rajinikanth Viral Video) ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ರಜನಿಕಾಂತ್ ಅವರ ಸರಳತೆಯನ್ನು ಕೊಂಡಾಡಿದ್ದಾರೆ.
ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ಅಲ್ಲದೇ, ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳೂ ಇವೆ. ಅವರನ್ನು ಕಂಡರೆ ಅಭಿಮಾನಿಗಳು ಫೋಟೋಗಾಗಿ ಮುತ್ತಿಕೊಳ್ಳುತ್ತಾರೆ. ಅಂಥ ಸಂದರ್ಭಗಳಲ್ಲಿ ಅವರಿಗೆ ಕಿರಿಕಿರಿ ಆಗಬಹುದು. ಹಾಗಿದ್ದರೂ ಕೂಡ ಅವರು ವಿಮಾನದ ಸಾಮಾನ್ಯ ದರ್ಜೆಯಲ್ಲಿ ಇತರೆ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಅಲ್ಲಿರುವ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಅವರನ್ನು ಹತ್ತಿರದಿಂದ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
#Thalaivar at flight ❤️❤️❤️❤️#Rajinikanth | #Rajinikanth𓃵 | #SuperstarRajinikanth | #SuperStarRajinikanth𓃵 | #Jailer | #Thalaivar171 | #Jailer2 | #Vettaiyan | #superstar @rajinikanth pic.twitter.com/b443yrgcU0
— Suresh balaji (@surbalutwt) February 29, 2024
‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಬಳಿ ಬೇಕಾದಷ್ಟು ಹಣ ಇದೆ. ಅವರನ್ನು ಶೂಟಿಂಗ್ಗೆ ಕರೆಸಿಕೊಳ್ಳುವ ನಿರ್ಮಾಪಕರು ಪ್ರೈವೆಟ್ ಜೆಟ್ನ ವ್ಯವಸ್ಥೆಯನ್ನು ಬೇಕಿದ್ದರೂ ಮಾಡುತ್ತಾರೆ. ಆದರೂ ಕೂಡ ರಜನಿಕಾಂತ್ ಅವರು ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣ ಮಾಡಿದ್ದನ್ನು ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ. ಬಿಸ್ನೆಸ್ ಕ್ಲಾಸ್ಗೆ ಹೋಲಿಸಿದರೆ ಎಕಾನಮಿ ಕ್ಲಾಸ್ನಲ್ಲಿ ಅನುಕೂಲಗಳು ಕಡಿಮೆ ಇರುತ್ತದೆ. ಹಾಗಿದ್ದರೂ ಕೂಡ ರಜನಿಕಾಂತ್ ಅವರು ಸಾಮಾನ್ಯ ದರ್ಜೆಯಲ್ಲೇ ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ: ಪ್ರೇಕ್ಷಕರೇ ಇಲ್ಲದೇ ರಜನಿಕಾಂತ್ ಸಿನಿಮಾ ಕ್ಯಾನ್ಸಲ್; ‘ಲಾಲ್ ಸಲಾಂ’ ಚಿತ್ರಕ್ಕೆ ಹಿನ್ನಡೆ
2023ರಲ್ಲಿ ಬಿಡುಗಡೆಯಾದ ‘ಜೈಲರ್’ ಸಿನಿಮಾದಿಂದ ರಜನಿಕಾಂತ್ ಅವರು ಭರ್ಜರಿ ಯಶಸ್ಸು ಕಂಡರು. ಆದರೆ ಈ ವರ್ಷದ ಆರಂಭದಲ್ಲಿ ಅವರಿಗೆ ಸ್ವಲ್ಪ ಹಿನ್ನಡೆ ಉಂಟಾಯಿತು. ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ‘ಲಾಲ್ ಸಲಾಂ’ ಸಿನಿಮಾ ಹೀನಾಯವಾಗಿ ಸೋತಿದೆ. ಈಗ ‘ವೆಟ್ಟೈಯಾನ್’ ಸಿನಿಮಾದ ಕೆಲಸಗಳಲ್ಲಿ ರಜನಿಕಾಂತ್ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆ ಇದೆ.
‘ವೆಟ್ಟೈಯಾನ್’ ಸಿನಿಮಾಗೆ ‘ಜೈ ಭೀಮ್’ ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿ ಜನರ ಮೆಚ್ಚಿಗೆ ಗಳಿಸಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಕಿಶೋರ್ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.