ರಜನಿಕಾಂತ್​​ಗೆ ಸೋಮವಾರ ವಿಶೇಷ ದಿನ; ಒಂದೇ ದಿನ ಎರಡು ಸಂಭ್ರಮ

| Updated By: ರಾಜೇಶ್ ದುಗ್ಗುಮನೆ

Updated on: Oct 24, 2021 | 3:59 PM

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿನಿಮಾ ರಂಗದವರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಸಹಕಾರಿಯಾದ ಕಲಾವಿದರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ

ರಜನಿಕಾಂತ್​​ಗೆ ಸೋಮವಾರ ವಿಶೇಷ ದಿನ; ಒಂದೇ ದಿನ ಎರಡು ಸಂಭ್ರಮ
ರಜನಿಕಾಂತ್​
Follow us on

51ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್​ಗೆ ಸಿಕ್ಕಿದೆ. ಸೋಮವಾರ (ಅಕ್ಟೋಬರ್​ 25) ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಬಗ್ಗೆ ರಜನಿಕಾಂತ್​ ಖುಷಿಯಾಗಿದ್ದಾರೆ. ಇದರ ಜತೆಗೆ ಮತ್ತೊಂದು ವಿಚಾರಕ್ಕೂ ರಜನಿಕಾಂತ್​ಗೆ ಸೋಮವಾರ ವಿಶೇಷ ದಿನವಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿನಿಮಾ ರಂಗದವರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಸಹಕಾರಿಯಾದ ಕಲಾವಿದರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಅದು ರಜನಿಕಾಂತ್​ಗೆ ಸಿಕ್ಕಿದೆ. ಈಗಾಗಲೇ ಈ ಕಾರ್ಯಕ್ರಮ ನೆರವೇರಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಇದು ವಿಳಂಬವಾಗಿದೆ. ಈಗ ಈ ಪ್ರಶಸ್ತಿಯನ್ನು ರಜನಿಕಾಂತ್​ ಸ್ವೀಕರಿಸುತ್ತಿದ್ದಾರೆ. ಇದರ ಜತೆಗೆ ಅವರ ಮಗಳು ಸೌಂದರ್ಯಾ ಅವರ HOOTE ಆ್ಯಪ್​ ಸೋಮವಾರವೇ ಲಾಂಚ್​ ಆಗುತ್ತಿದೆ.

‘ನಾಳೆ ನನಗೆ ಪ್ರಮುಖ ದಿನ. ಎರಡು ವಿಶೇಷ ವಿಚಾರವಿದೆ. ದಾದಾಸಾಹೇಬ್​ ಫಾಲ್ಕೆ ಅವಾರ್ಡ್​ ನನಗೆ ಸಿಗುತ್ತಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲವೇ ಇದಕ್ಕೆ ಕಾರಣ. ಇದು ಮೊದಲ ವಿಚಾರ’ ಎಂದು ರಜನಿಕಾಂತ್​ ಪತ್ರ ಆರಂಭಿಸಿದ್ದಾರೆ. ಜತೆಗೆ ಅವರ ಗುರು ಕೆ.ಬಾಲಚಂದರ್ ಈ ಸಂದರ್ಭದಲ್ಲಿ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ ರಜನಿಕಾಂತ್​.

‘ಎರಡನೇಯದ್ದು, ನನ್ನ ಮಗಳು ಸೌಂದರ್ಯಾ ಅವಳ HOOTE ಆ್ಯಪ್​ ಬಿಡುಗಡೆ ಆಗುತ್ತಿದೆ. ಈ ಆ್ಯಪ್​ ಸಾಕಷ್ಟು ಜನರಿಗೆ ಸಹಕಾರಿ ಆಗಲಿದೆ. ನೀವು ನಿಮ್ಮ ಬರಹದ ಮೂಲಕ ಶುಭಾಶಯ ತಿಳಿಸಿದಂತೆ ಈಗ ನಿಮ್ಮ ಆಲೋಚನೆ ಮತ್ತಿತ್ಯಾದಿ ವಿಚಾರಗಳನ್ನು ನಿಮ್ಮ ಧ್ವನಿ ಮೂಲಕ ವ್ಯಕ್ತಪಡಿಸಬಹುದು’ ಎಂದು ರಜನಿಕಾಂತ್​ ಆ್ಯಪ್​ ಬಗ್ಗೆ ಮಾಹಿತಿ ನೀಡಿದ್ದಾರೆ.

ರಜನಿಕಾಂತ್​ಗೆ ಅವಾರ್ಡ್​ ಘೋಷಣೆ ಆದಾಗ ಟ್ವೀಟ್​ ಮಾಡಿದ್ದರು. ‘ನಾನು ಈ ಪ್ರಶಸ್ತಿಯನ್ನು ನನ್ನ ಸ್ನೇಹಿತ ಮತ್ತು ಬಸ್ ಚಾಲಕ ರಾಜ್ ಬಹದ್ದೂರ್ ಅವರಿಗೆ ಅರ್ಪಿಸುತ್ತೇನೆ. ಅವರು ನನ್ನ ನಟನಾ ಪ್ರತಿಭೆಯನ್ನು ಗುರುತಿಸಿದ ಮೊದಲ ವ್ಯಕ್ತಿ. ಆರಂಭದಲ್ಲಿ ಅವರು ನನ್ನನ್ನು ಪ್ರೋತ್ಸಾಹಿಸಿದರು. ನನ್ನ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ನನಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ಗುರು ಕೆ.ಬಾಲಚಂದರ್ ಅವರು ಈ ರಜನಿಕಾಂತ್​ ಅವರನ್ನು ಹುಟ್ಟು ಹಾಕಿದವರು’ ಎಂದು ರಜನಿಕಾಂತ್​ ಬರೆದುಕೊಂಡಿದ್ದರು.

ಇದನ್ನೂ ಓದಿ: Video: ಐಶ್ವರ್ಯಾ ರೈ ಜೊತೆ ರಜನಿಕಾಂತ್​ರಂತೆ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್! ಫ್ಯಾನ್ಸ್ ಫಿದಾ

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ