AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿಕಾಂತ್ ನಿವಾಸದ ಆವರಣಕ್ಕೆ ನುಗ್ಗಿದ ನೀರು; ವೈರಲ್ ಆಯ್ತು ವಿಡಿಯೋ

ರಜನಿಕಾಂತ್ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಅವರು ಚೇತರಿಕೆ ಕಂಡರು. ಈಗ ಅವರ ನಿವಾಸಕ್ಕೆ ಸಮಸ್ಯೆ ಆಗಿದೆ. ರಜನಿಕಾಂತ್ ಇರುವ ಪೋಯಿಸ್ ಗಾರ್ಡನ್ ಮನೆಯಲ್ಲಿಯೂ ನೀರು ನಗ್ಗಿದೆ. ರಜನಿಕಾಂತ್ ಮನೆ ತಗ್ಗು ಪ್ರದೇಶದಲ್ಲಿ ಇದೆ.

ರಜನಿಕಾಂತ್ ನಿವಾಸದ ಆವರಣಕ್ಕೆ ನುಗ್ಗಿದ ನೀರು; ವೈರಲ್ ಆಯ್ತು ವಿಡಿಯೋ
ರಜನಿ
ರಾಜೇಶ್ ದುಗ್ಗುಮನೆ
|

Updated on: Oct 16, 2024 | 11:29 AM

Share

ಚೆನ್ನೈನಲ್ಲಿ ಭಾರೀ ಮಳೆ ಆಗುತ್ತಿದೆ. ಇದರಿಂದ ಅನೇಕ ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣ ಆಗಿದೆ. ರಜನಿಕಾಂತ್ ಇರುವ ಪೋಯಿಸ್ ಗಾರ್ಡನ್ ಮನೆಯಲ್ಲಿಯೂ ನೀರು ನಗ್ಗಿದೆ. ರಜನಿಕಾಂತ್ ಮನೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಸಮಸ್ಯೆ ಉಂಟಾಗಿದೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಚೆನ್ನೈಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗಿವೆ. ರಜನಿಕಾಂತ್ ಮನೆಯ ಎದುರಿನ ರಸ್ತೆ ಮಾತ್ರವಲ್ಲದೆ, ಅವರ ಮನೆಯ ಆವರಣದಲ್ಲಿಯೂ ನೀರು ತುಂಬಿದೆ. ಆದರೆ, ನೀರು ಮನೆಯ ಒಳಕ್ಕೆ ನುಗ್ಗಿಲ್ಲ. ರಜನಿಕಾಂತ್ ಹಾಗೂ ಕುಟುಂಬದವರು ವಿಡಿಯೋದಲ್ಲಿ ಕಾಣಿಸಿಲ್ಲ. ಈ ರೀತಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಚೆನ್ನೈನಲ್ಲಿ ಭಾರೀ ಮಳೆ ಆದಾಗ ಇದೇ ರೀತಿ ಆಗಿತ್ತು.

ಮಂಗಳವಾರದಿಂದ (ಅಕ್ಟೋಬರ್ 16) ಚೆನ್ನೈನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ರಸ್ತೆಗಳೆಲ್ಲ ನೀರಿನಿಂದ ತುಂಬಿ ಹೋಗಿವೆ. ನಗರದಲ್ಲಿ ರೆಡ್ ಅಲರ್ಟ್​ ಘೋಷಣೆ ಆಗಿದೆ. ತಮಿಳುನಾಡು ಸರ್ಜಾ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಬುಧವಾರ ವರ್ಕ್​ಫ್ರಮ್ ಹೋಮ್ ಮಾಡಲು ಸೂಚನೆ ನೀಡಿದೆ.

ರಜನಿಕಾಂತ್ ಅವರು ಇತ್ತಿಚೆಗೆ ಸುದ್ದಿ ಆಗಿದ್ದರು. ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಅವರ ರಕ್ತನಾಳಗಳು ಉಬ್ಬಿದ್ದವು ಎನ್ನಲಾಗಿದೆ. ಕೆಲ ದಿನ ಆಸ್ಪತ್ರೆಯಲ್ಲಿ ಇದ್ದು ನಂತರ ಡಿಸ್ಚಾರ್ಜ್ ಆದರು. ಕೆಲ ದಿನ ರೆಸ್ಟ್ ಮಾಡಿ ಅವರು ಶೂಟ್​ನಲ್ಲಿ ಭಾಗವಹಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ರತನ್ ಟಾಟಾಗೆ ತಲೆಬಾಗಿ ನಮಸ್ಕಾರ ಮಾಡಿದ್ದ ರಜನಿಕಾಂತ್; ನೆನಪು ಹಂಚಿಕೊಂಡ ಸೂಪರ್ ಸ್ಟಾರ್

ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಯಿತು. ಈ ಸಿನಿಮಾ ಸಾಧಾರಣ ಗಳಿಕೆ ಮಾಡಿದೆ. ಈಗ ಅವರು ಲೋಕೇಶ್ ಕನಗರಾಜ್ ಅವರ ‘ಕೂಲಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರವೇ ಅವರು ಸಿನಿಮಾ ಶೂಟ್​ನಲ್ಲಿ ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ