‘ಕೂಲಿ’ ಚಿತ್ರಕ್ಕೆ ರಜನಿಕಾಂತ್ ತೆಗೆದುಕೊಂಡ ಸಂಭಾವನೆಯಲ್ಲಿ ಮೂರು ಕೆಜಿಎಫ್ ಸಿನಿಮಾ ಮಾಡಬಹುದು

ರಜನಿಕಾಂತ್ ನಟಿಸಿರುವ 'ಕೂಲಿ' ಚಿತ್ರದ ಬಜೆಟ್ 400 ಕೋಟಿ ರೂಪಾಯಿಗಳನ್ನು ಮೀರಿದೆ. ರಜನಿಕಾಂತ್ ಅವರ 260 ಕೋಟಿ ರೂಪಾಯಿ ಸಂಭಾವನೆಯೇ ಇದಕ್ಕೆ ಪ್ರಮುಖ ಕಾರಣ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದಾರೆ .

‘ಕೂಲಿ’ ಚಿತ್ರಕ್ಕೆ ರಜನಿಕಾಂತ್ ತೆಗೆದುಕೊಂಡ ಸಂಭಾವನೆಯಲ್ಲಿ ಮೂರು ಕೆಜಿಎಫ್ ಸಿನಿಮಾ ಮಾಡಬಹುದು
ಉಪೇಂದ್ರ, ರಜಿನಿ,ನಾಗಾರ್ಜುನ

Updated on: May 08, 2025 | 9:45 AM

ರಜನಿಕಾಂತ್ (Rajinikanth) ಅವರು ‘ಕೂಲಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿ ಇದ್ದು, ಆಗಸ್ಟ್ 14ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಜೆಟ್ 400 ಕೋಟಿ ರೂಪಾಯಿ ಮೀರಿದೆ. ಈ ಚಿತ್ರದ ಬಜೆಟ್ ಇಷ್ಟೆಲ್ಲ ಹೆಚ್ಚಲು ಕಾರಣ ರಜನಿಕಾಂತ್ ಅವರ ದೊಡ್ಡ ಮೊತ್ತದ ಸಂಭಾವನೆ. ಈ ಮೊತ್ತದಲ್ಲಿ ಮೂರು ‘ಕೆಜಿಎಫ್’ ಚಿತ್ರಗಳನ್ನೇ ಮಾಡಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಲೋಕೇಶ್ ಕನಗರಾಜ್ ಅವರು ‘ಕೂಲಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ವಿಕ್ರಮ್’, ಕೈದಿ’ ರೀತಿಯ ಸಿನಿಮಾಗಳನ್ನು ನೀಡಿದ ಖ್ಯಾತಿ ಲೋಕೇಶ್ ಅವರಿಗೆ ಇದೆ. ಅವರು ಚಿತ್ರವನ್ನು ಜವಾಬ್ದಾರಿಯುತವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಈಗ ಚಿತ್ರದ ಕಲಾವಿದರ ಸಂಭಾವನೆ ವಿಚಾರ ರಿವೀಲ್ ಆಗಿದೆ.

ರಜನಿಕಾಂತ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 260 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕೆಜಿಎಫ್’ನ ಬಜೆಟ್ 80 ಕೋಟಿ. ಅದರ ಮೂರು ಪಟ್ಟು ಎಂದರೆ 240 ಕೋಟಿ ರೂಪಾಯಿ ಆಗಲಿದೆ. ಮೂರು ಕೆಜಿಎಫ್ ಸಿನಿಮಾ ಮಾಡಿದ ಬಳಿಕವೂ 20 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಉಳಿಯಲಿದೆ. ಲೋಕೇಶ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 60 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ.

ಇದನ್ನೂ ಓದಿ
ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್
ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ನ ವಿಡಿಯೋ ವೈರಲ್
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ

ರಜನಿಕಾಂತ್ ಅವರಿಗೆ ಈಗ ವಯಸ್ಸು 72. ಈ ವಯಸ್ಸಿನಲ್ಲೂ ನಟಿಸಬೇಕು ಎಂದರೆ ಅದು ತುಂಬಾನೇ ಕಷ್ಟ. ಹೀಗಾಗಿ, ಅವರು ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು ದೇಶದ ದುಬಾರಿ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ನಟ ದಳಪತಿ ವಿಜಯ್ ಅವರು ‘ಕೂಲಿ’ ಚಿತ್ರಕ್ಕೆ ಬರೋಬ್ಬರಿ 275 ಕೋಟಿ ರೂಪಾಯಿ ವೇತನ ಪಡೆದಿರುವ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ: ರಜನಿಕಾಂತ್ ತಾಯಿ, ಸಹೋದರಿ ಮತ್ತು ಗೆಳತಿಯಾಗಿ ನಟಿಸಿದ ಏಕೈಕ ನಾಯಕಿ ಇವರು

ನಾಗಾರ್ಜುನ ಕೂಡ ಸಿನಿಮಾದಲ್ಲಿ ಇದ್ದಾರೆ. ಅವರು ಈ ಚಿತ್ರಕ್ಕೆ 24 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.  ಶ್ರುತಿ ಹಾಸನ್, ಕನ್ನಡದ ಉಪೇಂದ್ರ, ಸತ್ಯರಾಜ್ ಕೂಡ ಚಿತ್ರದಲ್ಲಿ ಇದ್ದು, ಇವರ ಸಂಭಾವನೆ ರಿವೀಲ್ ಆಗಿಲ್ಲ.  ಈ ಚಿತ್ರದಲ್ಲಿ ಆಮಿರ್ ಖಾನ್ ಅವರು ವಿಶೇಷ ಪಾತ್ರ ಮಾಡುತ್ತಿದ್ದು, 30 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಪೂಜಾ ಹೆಗ್ಡೆ 2 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:45 am, Thu, 8 May 25