ರಾಜ್​ಕುಮಾರ್ ಹಿರಾನಿ Vs ಪ್ರಶಾಂತ್​ ನೀಲ್: ನಿರ್ದೇಶಕರ ಸಕ್ಸಸ್​ ರೇಟ್ ಬಗ್ಗೆ ಇಲ್ಲಿದೆ ವಿವರ..

|

Updated on: Dec 21, 2023 | 10:25 AM

‘ಡಂಕಿ’ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಇದೆ. ‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ನಿರ್ದೇಶಕರು ಒಂದೊಂದು ವಿಭಾಗದಲ್ಲಿ ಶ್ರೇಷ್ಠತೆ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಾಜ್​ಕುಮಾರ್ ಹಿರಾನಿ Vs ಪ್ರಶಾಂತ್​ ನೀಲ್: ನಿರ್ದೇಶಕರ ಸಕ್ಸಸ್​ ರೇಟ್ ಬಗ್ಗೆ ಇಲ್ಲಿದೆ ವಿವರ..
ಪ್ರಶಾಂತ್​ ನೀಲ್-ರಾಜ್​ಕುಮಾರ್ ಹಿರಾನಿ
Follow us on

ಕ್ರಿಸ್​ಮಸ್ ಸಂದರ್ಭದಲ್ಲಿ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕ್ಲ್ಯಾಶ್ ಏರ್ಪಡುತ್ತಿದೆ. ಇಂದು (ಡಿಸೆಂಬರ್ 21) ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ (Dunki Movie) ರಿಲೀಸ್ ಆದರೆ, ಡಿಸೆಂಬರ್ 22ರಂದು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಎರಡೂ ಸಿನಿಮಾಗಳು ಬೇರೆ ಬೇರೆ ಶೈಲಿಯಲ್ಲಿದ್ದು, ನಿರೀಕ್ಷೆ ಸೃಷ್ಟಿ ಮಾಡಿವೆ. ‘ಡಂಕಿ’ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಇದೆ. ‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ನಿರ್ದೇಶಕರು ಒಂದೊಂದು ವಿಭಾಗದಲ್ಲಿ ಶ್ರೇಷ್ಠತೆ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಚಿತ್ರರಂಗಕ್ಕೆ ಕಾಲಿಟ್ಟಿದ್ದು..

ರಾಜ್​ಕುಮಾರ್ ಹಿರಾನಿಗೆ ಚಿತ್ರರಂಗದಲ್ಲಿ ಎರಡು ದಶಕಗಳ ಅನುಭವ ಇದೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ಚಿತ್ರಕಥೆ ಬರಹಗಾರನಾಗಿ, ಎಡಿಟರ್ ಆಗಿ, ಹಂಚಿಕೆದಾರನಾಗಿ ಅವರು ಗುರುತಿಸಿಕೊಂಡಿದ್ದಾರೆ. 2003ರಲ್ಲಿ ‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ಪ್ರಶಾಂತ್ ನೀಲ್ ಅವರು ನಿರ್ದೇಶಕನಾಗಿ, ಚಿತ್ರಕಥೆಗಾರನಾಗಿ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ‘ಉಗ್ರಂ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಎರಡೂ ನಿರ್ದೇಶಕರ ಸಕ್ಸಸ್  ರೇಟ್ ಶೇ. 100 ಇದೆ.

ಸಿನಿಮಾ ಸಂಖ್ಯೆ

ಪ್ರಶಾಂತ್ ನೀಲ್ ಹಾಗೂ ರಾಜ್​ಕುಮಾರ್ ಹಿರಾನಿ ಸಿನಿಮಾ ಸಂಖ್ಯೆಗಿಂತ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ‘ಸಲಾರ್’ ಚಿತ್ರಕ್ಕಿಂತ ಮೊದಲು ‘ಉಗ್ರಂ’, ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರಗಳನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು. ರಾಜ್​ಕುಮಾರ್ ಹಿರಾನಿ ಅವರು ‘ಡಂಕಿ’ ಚಿತ್ರಕ್ಕಿಂತ ಮೊದಲು, ‘ಮುನ್ನಾಭಾಯ್ ಎಂಬಿಬಿಎಸ್’, ‘ಲಗೇರಹೋ ಮುನ್ನಾಭಾಯ್’, ‘3 ಈಡಿಯಟ್ಸ್’, ‘ಪಿಕೆ’ ಹಾಗೂ ‘ಸಂಜು’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪ್ರಶಾಂತ್ ಮಾಸ್ ಸಿನಿಮಾ ಕೊಟ್ಟರೆ, ರಾಜ್​ಕುಮಾರ್ ಹಿರಾನಿ ಕ್ಲಾಸ್ ಸಿನಿಮಾ ನೀಡುತ್ತಾರೆ.

ಇದನ್ನೂ ಓದಿ: ‘ಸ್ಟಾರ್ ಯಾವಾಗಲೂ ಸ್ಟಾರ್’; ಪ್ರಭಾಸ್ ಸರಣಿ ಸೋಲಿನ ಬಗ್ಗೆ ಪ್ರಶಾಂತ್ ನೀಲ್ ಮಾತು

ಬಿಸ್ನೆಸ್

ಬಿಸ್ನೆಸ್ ವಿಚಾರಕ್ಕೆ ಬಂದರೆ ಎರಡೂ ನಿರ್ದೇಶಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2014ರಲ್ಲಿ ರಿಲೀಸ್ ಆದ ‘ಪಿಕೆ’ ಸಿನಿಮಾ ವಿಶ್ವಾದ್ಯಂತ  769 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ‘ಕೆಜಿಎಫ್ 2’ ಸಿನಿಮಾ ವಿಶ್ವ ಮಟ್ಟದಲ್ಲಿ 1,215 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಐಎಂಡಿಬಿ

ಎರಡೂ ನಿರ್ದೇಶಕ ಸಿನಿಮಾಗಳ ಐಎಂಡಿಬಿ ಸರಾಸರಿ ಬಗ್ಗೆಯೂ ಮಾಹಿತಿ ಇದೆ. ರಾಜ್​ಕುಮಾರ್ ಹಿರಾನಿ ಸಿನಿಮಾಗಳ ಸರಾಸರಿ 8.1 ಇದೆ ಹಾಗೂ ಪ್ರಶಾಂತ್ ನೀಲ್ ಅವರದ್ದು 8.2 ರೇಟಿಂಗ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:05 am, Thu, 21 December 23