AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಕ್​ ಡ್ರೈವ್ ಮಾಡಿಕೊಂಡು ಜಾಲಿ ರೈಡ್​ ಹೋದ ರಾಕುಲ್​ ಪ್ರೀತ್​ ಸಿಂಗ್​

ಇದೇ ಮೊದಲ ಬಾರಿಗೆ ರಾಕುಲ್​ ಲಾರಿ ಓಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಾಕುಲ್​, ನನಗೆ ಡ್ರೈವಿಂಗ್​ ಎಂದರೆ ಇಷ್ಟ. ಆದರೆ, ಎಂದಿಗೂ ಟ್ರಕ್​ ಓಡಿಸಿರಲಿಲ್ಲ ಎಂದಿದ್ದಾರೆ.

ಟ್ರಕ್​ ಡ್ರೈವ್ ಮಾಡಿಕೊಂಡು ಜಾಲಿ ರೈಡ್​ ಹೋದ ರಾಕುಲ್​ ಪ್ರೀತ್​ ಸಿಂಗ್​
ರಾಕುಲ್​ ಪ್ರೀತ್​ ಸಿಂಗ್
ರಾಜೇಶ್ ದುಗ್ಗುಮನೆ
| Edited By: |

Updated on: Apr 23, 2021 | 4:00 PM

Share

ಸಾಮಾನ್ಯವಾಗಿ ಹೀರೋಯಿನ್​ಗಳು ಕಾರಿನಲ್ಲಿ ಲಾಂಗ್​ ಡ್ರೈವ್​ ಹೋಗುತ್ತಾರೆ. ಆದರೆ, ನಟಿ ರಾಕುಲ್​ ಪ್ರೀತ್​ ಅವರು ಅಚ್ಚರಿ ಎಂಬಂತೆ ಟ್ರಕ್​ನಲ್ಲಿ ಲಾಂಗ್​ ಡ್ರೈವ್​ ಹೋಗಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಷ್ಟಕ್ಕೂ ಅವರು ಲಾರಿ ಏರಿ ಲಾಂಗ್​ ಡ್ರೈವ್​ ಹೋಗಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಕುಲ್​ ಪ್ರೀತ್​ ಸಿಂಗ್​ ಸರ್ದಾರ್​ ಕಾ ಗ್ರ್ಯಾಂಡ್​ಸನ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನೆಟ್​​ಫ್ಲಿಕ್ಸ್​ನಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ರಾಕುಲ್​ ಟ್ರಕ್​ ಡ್ರೈವ್​ ಮಾಡಿದ್ದಾರಂತೆ. ಈ ಸಿನಿಮಾದಲ್ಲಿ ಅರ್ಜುನ್​ ಕಪೂರ್ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜ್ಜಿಯ ಆಸೆ​ ತೀರಿಸೋಕೆ ಹೊರಡುವ  ಪಂಜಾಬಿ ಹುಡುಗನ​ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ.

ಇದೇ ಮೊದಲ ಬಾರಿಗೆ ರಾಕುಲ್​ ಲಾರಿ ಓಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಾಕುಲ್​, ನನಗೆ ಡ್ರೈವಿಂಗ್​ ಎಂದರೆ ಇಷ್ಟ. ಆದರೆ, ಎಂದಿಗೂ ಟ್ರಕ್​ ಓಡಿಸಿರಲಿಲ್ಲ. ಟ್ರಕ್​ ಓಡಿಸಿದ್ದು ತುಂಬಾನೇ ಫನ್​ ಇಂದ ಕೂಡಿತ್ತು. ಟ್ರಕ್​ ಓಡಿಸೋದು ಅಷ್ಟು ಸುಲಭವಲ್ಲ. ನಾನು ಆತ್ಮವಿಶ್ವಾಸದಿಂದ ಟ್ರಕ್​ ಓಡಿಸಿದೆ ಎಂದು​ ಸಂತಸ ಹಂಚಿಕೊಂಡಿದ್ದಾರೆ.

ನಾನು ಟ್ರಕ್​ ಓಡಿಸುವ ಬಗ್ಗೆ ಅನೇಕರಿಗೆ ಅನುಮಾನವಿತ್ತು. ನಂತರ ನನ್ನ ಡ್ರೈವಿಂಗ್​ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದ್ದಾರೆ. ಅದಿತಿ ರಾವ್​ ಹೈದರಿ ಮತ್ತು ಕುಮುದಾ ಮಿಶ್ರಾ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇ 18ರಂದು ಸಿನಿಮಾ ತೆರೆಗೆ ಬರುತ್ತಿದೆ.

ಸದ್ಯ ರಾಕುಲ್​ ಕೈನಲ್ಲಿ ಸಾಲು ಸಾಲು ಸಿನಿಮಾಗಳಿವೆ. ತಮಿಳು, ಹಿಂದಿ ಹಾಗೂ ತೆಲುಗು ಈ ಮೂರು ಭಾಷೆಗಳ ಸಿನಿಮಾಗಳಲ್ಲಿ ರಾಕುಲ್​ ನಟಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಡುತ್ತಿದೆ. ಸಿನಿಮಾ ಕೆಲಸಗಳು ಕೂಡ ಹಿಂದೆ ಬಿದ್ದಿವೆ.

ಇದನ್ನೂ ಓದಿ: KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?

ರಾಕಿಂಗ್ ಸ್ಟಾರ್ ಯಶ್​ಗೆ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆ ಸರಿಪಡಿಸೋ ಭರವಸೆ ನೀಡಿರೊ ಸಾರಿಗೆ ಸಚಿವ ಲಕ್ಷ್ಮಣ ಸವದಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು