‘ಪುಷ್ಪ 2’ ಬಿಡುಗಡೆ ಸಂದರ್ಭದಲ್ಲೇ ಬರಲಿದೆ ‘ಗೇಮ್ ಚೇಂಜರ್’; ರಾಮ್-ಅಲ್ಲು ಮುಖಾಮುಖಿ?
‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಇದು ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಕನಿಷ್ಠ ಒಂದು ತಿಂಗಳು ಈ ಸಿನಿಮಾ ಉತ್ತಮ ಗಳಿಕೆ ಮಾಡಬೇಕು. ಈ ಮಧ್ಯೆ ‘ಗೇಮ್ ಚೇಂಜರ್’ ರಿಲೀಸ್ ಆದರೆ ಸಂಕಷ್ಟ ಕಟ್ಟಿಟ್ಟಬುತ್ತಿ.
ರಾಮ್ ಚರಣ್ ಅವರು ತೆಲುಗಿನ ಸ್ಟಾರ್ ಹೀರೋಗಳಲ್ಲಿ ಒಬ್ಬರು. ಅವರು ‘ಆರ್ಆರ್ಆರ್’ ಯಶಸ್ಸಿನ ನಂತರ ‘ಗೇಮ್ ಚೇಂಜರ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಶಂಕರ್ ನಿರ್ದೇಶನದ ರಾಜಕೀಯ ಚಿತ್ರ ಇದಾಗಿದೆ. ಚಿತ್ರದ ಮೇಕಿಂಗ್ ಆರಂಭವಾದಾಗ ಅದರ ಬಜೆಟ್ 250 ಕೋಟಿ ಆಗಿತ್ತು. ಈಗ ಬಜೆಟ್ ಕೈ ಮೀರಿದೆ. ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಪಡೆದಿದೆ. ‘ಗೇಮ್ ಚೇಂಜರ್’ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಸದ್ಯ ರಾಮ್ ಚರಣ್ ಬ್ರೇಕ್ ನಲ್ಲಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ಆರಂಭಿಸಲಿದ್ದಾರೆ. ಹೀಗಿರುವಾಗಲೇ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಚರ್ಚೆ ಶುರುವಾಗಿದೆ.
‘ಗೇಮ್ ಚೇಂಜರ್’ ಸಿನಿಮಾದ ದೃಶ್ಯಗಳು ಸೋರಿಕೆಯಾಗುತ್ತಿರುವ ಬಗ್ಗೆ ನಿರ್ಮಾಪಕ ದಿಲ್ ರಾಜುಗೆ ಚಿಂತೆ ಇದೆ. ಸಿನಿಮಾದಲ್ಲಿ ಬರೋ ವಿಮಾನ ನಿಲ್ದಾಣದ ದೃಶ್ಯ, ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅವರ ಲುಕ್ ಲೀಕ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರಾಮ್ ಚರಣ್ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ ಈ ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆಯಂತೆ.
ವರ್ಷದ ಆರಂಭದಲ್ಲಿ ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾ ರಿಲೀಸ್ ಆಗಿದೆ. ಚಿತ್ರವು ಪ್ರಾರಂಭವಾದ ದಿನದಿಂದಲೂ ಅತ್ಯಂತ ಕಳಪೆ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ‘ಗೇಮ್ ಚೇಂಜರ್’ ಮೂಲಕ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ‘ಗೇಮ್ ಚೇಂಜರ್’ ನಿರ್ಮಾಪಕರು ಚಿತ್ರವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡಿಸೆಂಬರ್ ತಿಂಗಳಲ್ಲಿ ಎರಡು ದೊಡ್ಡ ತೆಲುಗು ಚಿತ್ರಗಳು ಬರಲಿವೆ. ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಮತ್ತು ವಿಷ್ಣು ಮಂಚು ಅವರ ‘ಕಣ್ಣಪ್ಪ’. ಇಂತಹ ಪರಿಸ್ಥಿತಿಯಲ್ಲಿ ‘ಗೇಮ್ ಚೇಂಜರ್’ ರಿಲೀಸ್ ಆದರೆ ಎಲ್ಲರಿಗೂ ಒಂದು ಹಂತದಲ್ಲಿ ನಷ್ಟ ಆಗಿಯೇ ಆಗುತ್ತದೆ. ‘ಗೇಮ್ ಚೇಂಜರ್’ ಬಂದರೆ, ಡಿಸೆಂಬರ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್, ಸುಕುಮಾರ್ ನಡುವೆ ಕಿರಿಕ್? ‘ಪುಷ್ಪ 2’ ಬಿಡುಗಡೆ ಮತ್ತೆ ಲೇಟ್ ಆಗುತ್ತಾ?
‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಇದು ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಕನಿಷ್ಠ ಒಂದು ತಿಂಗಳು ಈ ಸಿನಿಮಾ ಉತ್ತಮ ಗಳಿಕೆ ಮಾಡಬೇಕು. ಈ ಮಧ್ಯೆ ‘ಗೇಮ್ ಚೇಂಜರ್’ ರಿಲೀಸ್ ಆದರೆ ಸಂಕಷ್ಟ ಕಟ್ಟಿಟ್ಟಬುತ್ತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.