AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan Birthday: ಹೇಗಿದೆ ನೋಡಿ ರಾಮ್ ಚರಣ್ ದುಬಾರಿ ಪ್ರೈವೆಟ್ ಜೆಟ್; ಇಲ್ಲಿದೆ ವಿಡಿಯೋ

ರಾಮ್ ಚರಣ್ ಹಾಗೂ ಉಪಾಸನಾ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ರಾಮ್ ಚರಣ್ ಅವರ ಆಸ್ತಿ 1600 ಕೋಟಿ ರೂಪಾಯಿಗೂ ಅಧಿಕವಾಗಿದೆ. ಹಲವು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಅವರು ತಮ್ಮದೇ ಆದ ಏರ್​ಲೈನ್ಸ್ ಕೂಡ ಹೊಂದಿದ್ದಾರೆ.

Ram Charan Birthday: ಹೇಗಿದೆ ನೋಡಿ ರಾಮ್ ಚರಣ್ ದುಬಾರಿ ಪ್ರೈವೆಟ್ ಜೆಟ್; ಇಲ್ಲಿದೆ ವಿಡಿಯೋ
ರಾಮ್ ಚರಣ್-ಉಪಾಸನಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 27, 2024 | 8:16 AM

Share

ಟಾಲಿವುಡ್​ನ ಸ್ಟಾರ್ ಹೀರೋ ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರ ಬರ್ತ್​ಡೇನ ಫ್ಯಾನ್ಸ್ ಹಬ್ಬದ ರೀತಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ರಾಮ್ ಚರಣ್ ಅವರ ನಟನೆಯ ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ರಾಮ್ ಚರಣ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ. ಇದಕ್ಕೆ ‘ಗೇಮ್ ಚೇಂಜರ್’ (Game Changer Movie) ಉತ್ತಮ ಉದಾಹರಣೆ. ಅವರು ಪತ್ನಿ ಉಪಾಸನಾ ಜೊತೆ ಆಗಾಗ ಪ್ರವಾಸ ತೆರಳುತ್ತಾರೆ. ಈ ವೇಳೆ ಅವರು ತಮ್ಮ ಪ್ರೈವೆಟ್ ಜೆಟ್ ಬಳಕೆ ಮಾಡುತ್ತಾರೆ. ಈ ಜೆಟ್​ನ ವಿಡಿಯೋ ಇಲ್ಲಿದೆ.

ರಾಮ್ ಚರಣ್ ಹಾಗೂ ಉಪಾಸನಾ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ರಾಮ್ ಚರಣ್ ಅವರ ಆಸ್ತಿ 1600 ಕೋಟಿ ರೂಪಾಯಿಗೂ ಅಧಿಕವಾಗಿದೆ. ಹಲವು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಅವರು ತಮ್ಮದೇ ಆದ ಏರ್​ಲೈನ್ಸ್ ಕೂಡ ಹೊಂದಿದ್ದಾರೆ. ಇದು ಸಖತ್ ಐಷಾರಾಮಿ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಲು ರಾಮ್ ಚರಣ್ ಇದೇ ಜೆಟ್​ನ ಬಳಕೆ ಮಾಡುತ್ತಾರೆ.

ಇತ್ತೀಚೆಗೆ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಸಮಾರಂಭ ಗುಜರಾತ್​ನ ಜಾಮ್​ನಗರದಲ್ಲಿ ನಡೆದಿತ್ತು. ಇದಕ್ಕೆ ರಾಮ್ ಚರಣ್ ಹಾಗೂ ಉಪಾಸನಾ ಕೂಡ ಆಗಮಿಸಿದ್ದರು. ಪ್ರಯಾಣಕ್ಕೆ ತಮ್ಮ ಖಾಸಗಿ ಜೆಟ್​ ಬಳಕೆ ಮಾಡಿದ್ದರು. ಇವರು TruJet ಏಲ್​ಲೈನ್ಸ್ ಹೊಂದಿದ್ದು, ಇದು ಭಾರತದಲ್ಲಿ ತಮ್ಮ ಕಾರ್ಯಾಚಾರಣೆ ನಡೆಸುತ್ತಿದೆ. ಈ ಕಂಪನಿಗೆ ರಾಮ್​ ಚರಣ್ ಅವರೇ ಮುಖ್ಯಸ್ಥರು.

ರಾಮ್ ಚರಣ್ ವಿಡಿಯೋ

ರಾಮ್ ಚರಣ್ ಪತ್ನಿ ಉಪಾಸನಾ ಅವರಿಗೆ ಜೆಬಾ ಹಸನ್ ಅವರು ಮೇಕಪ್​ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಪ್ರೈವೆಟ್ ಜೆಟ್​ನ ವಿಡಿಯೋ ಹಂಚಿಕೊಂಡಿದ್ದರು. ಈ ದಂಪತಿ ಅಪರೂಪದಲ್ಲೇ ಅಪರೂಪ ಎಂಬಂತೆ ವಿಮಾನದಲ್ಲಿ ಕುಳಿತ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ರಾಮ್ ಚರಣ್-ಉಪಾಸನಾ ಮಗಳು ನೋಡಿಕೊಳ್ಳುತ್ತಿರುವ ಮಹಿಳೆ ಯಾರು? ಅವರ ಸಂಬಳವೆಷ್ಟು?

ರಾಮ್ ಚರಣ್ ಅವರು ಐಷಾರಾಮಿ ಜೀವನ ನಡೆಸುತ್ತಿರುವ ಹೊರತಾಗಿಯೂ ಅವರು ಎಂದಿಗೂ ಆ್ಯಟಿಟ್ಯೂಡ್ ತೋರಿಸಿದವರಲ್ಲ. ಅಭಿಮಾನಿಗಳ ಜೊತೆ ಅವರು ಬೆರೆಯುತ್ತಾರೆ. ಬರ್ತ್​ಡೇ ಪ್ರಯುಕ್ತ ಅವರು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆಯೇ ಎನ್ನುವ ಕುತೂಹಲ ಇದೆ. ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ರಾಮ್ ಚರಣ್ ಅವರು ಐಷಾರಾಮಿ ಮನೆ ಹೊಂದಿದ್ದಾರೆ. ಅವರ ಬಳಿ ಫೆರಾರಿ ಸೇರಿ ಅನೇಕ ದುಬಾರಿ ಕಾರುಗಳು ಇವೆ. ‘ಗೇಮ್​ ಚೇಂಜರ್’ ಜೊತೆ ನಿರ್ದೇಶಕ ಬುಚ್ಚಿ ಬಾಬು ಹಾಗೂ ಸುಕುಮಾರ್ ಜೊತೆ ತಲಾ ಒಂದು ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಗಳಿಂದ ಇಂದು ಏನಾದರೂ ಘೋಷಣೆ ಆಗಲಿವೆಯೇ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?