ಸ್ವಂತ ಏರ್​ಲೈನ್ಸ್, ದುಬಾರಿ ಕಾರು, ದೊಡ್ಡ ಬಂಗಲೆ; ಹೇಗಿದೆ ನೋಡಿ ರಾಮ್ ಚರಣ್​ ಐಷಾರಾಮಿ ಜೀವನ

Ram Charan Birthday: ರಾಮ್ ಚರಣ್ ‘ಮಗಧೀರ’, ‘ರಂಗಸ್ಥಲಂ’, ‘ಯೆವಡು’, ‘ಆರ್​ಆರ್​ಆರ್​’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಶ್ರೀಮಂತ ನಟರಲ್ಲಿ ಒಬ್ಬರು.

ಸ್ವಂತ ಏರ್​ಲೈನ್ಸ್, ದುಬಾರಿ ಕಾರು, ದೊಡ್ಡ ಬಂಗಲೆ; ಹೇಗಿದೆ ನೋಡಿ ರಾಮ್ ಚರಣ್​ ಐಷಾರಾಮಿ ಜೀವನ
ರಾಮ್ ಚರಣ್
Follow us
| Updated By: ರಾಜೇಶ್ ದುಗ್ಗುಮನೆ

Updated on:Mar 27, 2024 | 7:32 AM

ನಟ ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಬರ್ತ್​ಡೇ ಸಂಭ್ರಮ. ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. ಆ ಬಳಿಕ ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡರು. ರಾಮ್ ಚರಣ್ (Ram Charan) ಅವರಿಗೆ ಫ್ಯಾನ್ಸ್ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಬರ್ತ್​ಡೇ ಸಮೀಪಿಸಿದ ಸಂದರ್ಭದಲ್ಲೇ ಅವರ ಹೊಸ ಸಿನಿಮಾಗಳು ಘೋಷಣೆ ಆಗಿವೆ. ಅವರು ಸುಕುಮಾರ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇವರು ಮತ್ತೊಮ್ಮೆ ಒಂದಾಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇಂದು ಫ್ಯಾನ್ಸ್​ಗೆ ಹಲವಯ ಸರ್​ಪ್ರೈಸ್​ಗಳು ಕಾದಿವೆ ಎನ್ನಲಾಗುತ್ತಿದೆ.

ರಾಮ್ ಚರಣ್ ‘ಮಗಧೀರ’, ‘ರಂಗಸ್ಥಲಂ’, ‘ಯೆವಡು’, ‘ಆರ್​ಆರ್​ಆರ್​’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಶ್ರೀಮಂತ ನಟರಲ್ಲಿ ಒಬ್ಬರು. ಅವರ ತಂದೆ ಚಿರಂಜೀವಿ ಜೊತೆಗಿನ ಆಸ್ತಿಯೂ ಸೇರಿದರೆ 4000 ಕೋಟಿ ರೂಪಾಯಿ ಮೀರಲಿದೆ. ಅವರ ಆಸ್ತಿ 1350 ಕೋಟಿ ರೂಪಾಯಿಗೂ ಅಧಿಕವಾಗಿದೆ.

ರಾಮ್ ಚರಣ್ ಅವರ ಪ್ರತಿ ತಿಂಗಳ ಗಳಿಕೆ 3 ಕೋಟಿ ರೂಪಾಯಿ. ಅವರ ವರ್ಷದ ಕಮಾಯಿ 30 ಕೋಟಿ ರೂಪಾಯಿಗೂ ಅಧಿಕವಾಗಿದೆ. ‘ಆರ್​ಆರ್​ಆರ್’ ಚಿತ್ರಕ್ಕಾಗಿ ಅವರು ಬರೋಬ್ಬರಿ 45 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು ಎನ್ನಲಾಗಿದೆ. ರಾಮ್ ಚರಣ್ ಅವರು ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. ಅವರು ಒಂದಲ್ಲ ಎರಡಲ್ಲ 34 ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಪೆಪ್ಸಿ, ಅಪೊಲೋ ಜಿಯಾ, ಫ್ರೂಟಿ ಮೊದಲಾದ ಬ್ರ್ಯಾಂಡ್​ಗಳನ್ನು ಅವರು ಪ್ರಮೋಟ್​ ಮಾಡುತ್ತಾರೆ.

ರಾಮ್ ಚರಣ್ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಅವರು ‘ಕೊನಿಡೆಲಾ ಪ್ರೊಡಕ್ಷನ್ ಕಂಪನಿ’ ಹೊಂದಿದ್ದಾರೆ. ‘ಖಿಲಾಡಿ ನಂಬರ್ 1’ ಸೇರಿ ಅನೇಕ ಸಿನಿಮಾಗಳು ಈ ನಿರ್ಮಾಣ ಸಂಸ್ಥೆ ಮೂಲಕ ಮೂಡಿ ಬಂದಿವೆ. ಜುಬ್ಲಿ ಹಿಲ್ಸ್​ನಲ್ಲಿ 25 ಸಾವಿರ ಚದರ ಅಡಿಯ ಜಾಗ ಹೊಂದಿದ್ದು, ಐಷಾರಾಮಿ ಮನೆ ಇದೆ.  ಇದರ ಬೆಲೆ 38 ಕೋಟಿ ರೂಪಾಯಿ ಎನ್ನಲಾಗಿದೆ. ಮುಂಬೈನಲ್ಲಿ ಮನೆ ಹೊಂದಿರುವ ಕೆಲವೇ ಕೆಲವು ದಕ್ಷಿಣದ ಸ್ಟಾರ್​ಗಳಲ್ಲಿ ರಾಮ್​ ಚರಣ್ ಹೆಸರೂ ಇದೆ. ಅವರು ಮುಂಬೈನಲ್ಲಿ ದುಬಾರಿ ಪೆಂಟ್​ಹೌಸ್ ಹೊಂದಿದ್ದಾರೆ.

ರಾಮ್ ಚರಣ್ ಬಳಿ ದುಬಾರಿ ಕಾರು ಹಾಗೂ ಜೆಟ್​ಗಳಿವೆ. TRUJet ಹೆಸರಿನ ಏರ್​ಲೈನ್ಸ್​ನ ರಾಮ್ ಚರಣ್ ಹೊಂದಿದ್ದಾರೆ. ಇವರ ಬಳಿ ಪ್ರೈವೆಟ್ ಜೆಟ್ ಕೂಡ ಇದೆ. ಇದರ ಜೊತೆಗೆ ಮರ್ಸಿಡೀಸ್​ಬೆಂಜ್ ಮೇಬ್ಯಾಷ್ ಜಿಎಲ್​ಎಸ್​ 600 ಇದೆ. ಇದರ ಬೆಲೆ 4 ಕೋಟಿ ರೂಪಾಯಿಗೂ ಅಧಿಕವಾಗಿದೆ. ಆಡಿ, ರೋಲ್ಸ್ ರಾಯ್ಸ್ ಪ್ಯಾಂಟಂ, ರೇಂಜ್ ರೋವರ್ ಆಟೋಬಯೋಗ್ರಫಿ, ಆಸ್ಟನ್ ಮಾರ್ಟಿನ್, ಫೆರಾರಿ ಕಾರುಗಳ ಒಡೆಯ ಅವರಾಗಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣಾ ಕಣಕ್ಕೆ ರಾಮ್ ಚರಣ್ ಸಿನಿಮಾ ನಾಯಕಿ

ರಾಮ್ ಚರಣ್ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರು ಪತ್ನಿ ಉಪಾಸನಾ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಕ್ಲಿನ್​ಕಾರಾ ಹೆಸರಿನ ಮಗಳು ಕೂಡ ಇದ್ದಾಳೆ. ಸಿನಿಮಾ ವಿಚಾರಕ್ಕೆ ಬರೋದಾದರೆ ರಾಮ್ ಚರಣ್ ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡುತ್ತಿದ್ದು, ಬಾಲಿವುಡ್​ನ ಕಿಯಾರಾ ಅಡ್ವಾಣಿ ಈ ಚಿತ್ರದ ನಾಯಕಿ. ಇದಾದ ಬಳಿಕ ಬುಚ್ಚಿ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆದಿದೆ. ಅಷ್ಟೇ ಅಲ್ಲದೆ ಸುಕುಮಾರ್ ಜೊತೆಯೂ ಅವರು ಸಿನಿಮಾ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:18 am, Wed, 27 March 24

ತಾಜಾ ಸುದ್ದಿ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ